ರೆಮ್​ಡೆಸಿವರ್​ ಸಾಗಿಸುತ್ತಿದ್ದ ವಿಮಾನ ಅಪಘಾತ: 85 ಕೋಟಿ ರೂಪಾಯಿ ಬಿಲ್​ ನೀಡಿ, ಕಕ್ಕಾಬಿಕ್ಕಿಯಾದ ಮಧ್ಯ ಪ್ರದೇಶ ಸರ್ಕಾರ!

ಮಧ್ಯ ಪ್ರದೇಶದಲ್ಲಿ ಸರಕು ಸಾಗಣೆ ವಿಮಾನದ ಪೈಲಟ್​​ ಒಬ್ಬರು ಕೊರೊನಾ ವಾರಿಯರ್ ಆಗಿ ಕೊರೊನಾ ಕಾಲದಲ್ಲಿ ರೆಮ್​ಡೆಸಿವರ್​ ಔಷಧಗಳನ್ನು ವಿಮಾನ ಮೂಲಕ ಸಾಗಿಸುತ್ತಿದ್ದಾಗ ಅದು ಅಪಘಾತಕ್ಕೆ ತುತ್ತಾಗಿ ಇಡೀ ಔಷಧ ಹಾಳಾಗುವುದರ ಜೊತೆಗೆ ಆ ವಿಮಾನವು ಗುಜರಿಗೆ ಸಹ ಲಾಯಕ್​ ಇಲ್ಲದಂತಾಗಿತ್ತು. ಇದಕ್ಕೆ ಕಾರಣೀಭೂತಾಗಿದ್ದು ಮಾತ್ರ ರಾಜ್ಯ ಸರ್ಕಾರ ಮತ್ತು ವಾಯು ಸಂಚಾರ ನಿಯಂತ್ರಣ ಕೇಂದ್ರ ಎಂಬುದು ಗಮನಾರ್ಹ.

ರೆಮ್​ಡೆಸಿವರ್​ ಸಾಗಿಸುತ್ತಿದ್ದ ವಿಮಾನ ಅಪಘಾತ: 85 ಕೋಟಿ ರೂಪಾಯಿ ಬಿಲ್​ ನೀಡಿ, ಕಕ್ಕಾಬಿಕ್ಕಿಯಾದ ಮಧ್ಯ ಪ್ರದೇಶ ಸರ್ಕಾರ!
ರೆಮ್​ಡೆಸಿವರ್​ ಸಾಗಿಸುತ್ತಿದ್ದ ವಿಮಾನ ಅಪಘಾತ: 85 ಕೋಟಿ ರೂಪಾಯಿ ಬಿಲ್​ ಕಕ್ಕಿ, ಕಕ್ಕಾಬಿಕ್ಕಿಯಾದ ಮಧ್ಯ ಪ್ರದೇಶ ಸರ್ಕಾರ!
Follow us
| Updated By: ಸಾಧು ಶ್ರೀನಾಥ್​

Updated on:Feb 08, 2022 | 11:25 AM

ಭೋಪಾಲ್​: ಗ್ವಾಲಿಯಾರ್​ ವಿಮಾನ ನಿಲ್ದಾಣದ ರನ್​ವೇ ನಲ್ಲಿ (Gwalior Runway) ಅಧಿಕಾರಿಗಳ ತಪ್ಪಿನಿಂದಾಗಿ ಕೊರೊನಾ ಸೋಂಕಿನ ಔಷಧ ಸಾಗಿಸುತ್ತಿದ್ದ ಸರಕು ಸಾಗಣೆ ವಿಮಾನ ಅಪಘಾತಕ್ಕೆ ತುತ್ತಾಗಿ, ಜೊತೆಗೆ ಸರ್ಕಾರದ ಅಚಾತುರ್ಯವೂ ಸೇರಿ ಮಧ್ಯ ಪ್ರದೇಶ ಸರ್ಕಾರ 85 ಕೋಟಿ ರೂಪಾಯಿ ಬಿಲ್​ ಕಕ್ಕಿರುವ ಪ್ರಸಂಗ ನಡೆದಿದೆ. ಆದರೆ ಮಧ್ಯ ಪ್ರದೇಶ ಸರ್ಕಾರ ಈ ಅಪಘಾತ ಸಂಭವಿಸಿದ್ದು ಪೈಲಟ್​ ಅಚಾತುರ್ಯದಿಂದಾಗಿ. ಹಾಗಾಗಿ ಆತನೇ 85 ಕೋಟಿ ರೂಪಾಯಿ ಬಿಲ್ ತೆರಬೇಕು ಎಂದು ಪಟ್ಟುಹಿಡಿದಿತ್ತು. ಇಲ್ಲಿ ಎರಡು ಎಡವಟ್ಟುಗಳು ನಡೆದಿದ್ದವು. ಒಂದು, ರನ್​ವೇ ನಲ್ಲಿ ನಿರ್ಮಿಸಲಾಗಿದ್ದ ಅಡ್ಡಗೋಡೆಯನ್ನು ವಿಮಾನದ ಪೈಲಟ್​​ ಗಮನಕ್ಕೆ ತಂದಿರಲಿಲ್ಲ. ಎರಡನೆಯದು, ರಾಜ್ಯ ಸರ್ಕಾರವು ಆ ವಿಮಾನಕ್ಕೆ ವಿಮಾ ಮಾಡಿಸಿರಲಿಲ್ಲ! ಮಧ್ಯ ಪ್ರದೇಶದಲ್ಲಿ ಸರಕು ಸಾಗಣೆ ವಿಮಾನದ ಪೈಲಟ್​​ ಕೊರೊನಾ ವಾರಿಯರ್ (Covid warrior)​ ಆಗಿ ಕೊರೊನಾ ಕಾಲದಲ್ಲಿ ರೆಮ್​ಡೆಸಿವರ್​ ಔಷಧಗಳನ್ನು ವಿಮಾನ ಮೂಲಕ ಸಾಗಿಸುತ್ತಿದ್ದಾಗ ಅದು ಅಪಘಾತಕ್ಕೆ ತುತ್ತಾಗಿ ಇಡೀ ಔಷಧ ಹಾಳಾಗುವುದರ ಜೊತೆಗೆ ಆ ವಿಮಾನವು ಗುಜರಿಗೆ ಸಹ ಲಾಯಕ್​ ಇಲ್ಲದಂತಾಗಿತ್ತು. ಇದಕ್ಕೆ ಕಾರಣೀಭೂತಾಗಿದ್ದು ಮಾತ್ರ ರಾಜ್ಯ ಸರ್ಕಾರ ಮತ್ತು ವಾಯು ಸಂಚಾರ ನಿಯಂತ್ರಣ ಕೇಂದ್ರ (Air Traffic Controller-ATC) ಎಂಬುದು ಗಮನಾರ್ಹ. ಈ ಅಪಘಾತದಲ್ಲಿ ತನ್ನ ಕಡೆಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ವಿಮಾನದ ಪೈಲಟ್ ಕ್ಯಾಪ್ಟನ್ ಮಜೀದ್ ಅಖ್ತರ್ (Captain Majid Akhtar)​ ಮತ್ತು ಸಹ ಪೈಲಟ್​ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ನಡೆದಿರುವುದು ಕಳೆದ ವರ್ಷ, ಮೊದಲ ಕೋವಿಡ್​ ಅಲೆ ಸಂದರ್ಭದಲ್ಲಿ. ಕಳೆದ ವಾರ ರಾಜ್ಯ ಸರ್ಕಾರ ಈ ಸಂಬಂಧ ಪ್ರಕರಣ ದಾಖಲಿಸಿ, ಆರೋಪಪಟ್ಟಿ ಸಲ್ಲಿಸಿದಾಗ ಇಡೀ ವೃತ್ತಾಂತ ಬಯಲಿಗೆ ಬಂದಿದೆ.

COVID-19 ಲ್ಯಾಬ್​ ಮಾದರಿಗಳು ಮತ್ತು ರೆಮ್​ಡೆಸಿವರ್​ ಔಷಧಗಳನ್ನು ಸಾಗಸುತ್ತಿದ್ದ 7 ಸೀಟ್​ಗಳ ಪುಟ್ಟ ವಿಮಾನವು ಗ್ವಾಲಿಯಾರ್​ ವಿಮಾನ ನಿಲ್ದಾಣದ ರನ್​ವೇನಲ್ಲಿ ಇಳಿಯುವಾಗ ಅಚಾತುರ್ಯ ನಡೆದು ಅಪಘಾತಕ್ಕೆ ತುತ್ತಾಗಿತ್ತು. ಇಡೀ ವಿಮಾನ ಗುಜರಿಗೆ ಹಾಕುವ ಮಟ್ಟಕ್ಕೆ ನಜ್ಜುಗುಜ್ಜಾಗಿತ್ತು. Beechcraft King ಎಂಬ ಈ ಪುಟ್ಟ ವಿಮಾನವನ್ನು ಮಧ್ಯ ಪ್ರದೇಶ ಸರ್ಕಾರವು ಅಂದಾಜು 65 ಕೋಟಿ ರೂಪಾಯಿಗೆ 2019ರಲ್ಲಿ ಖರೀದಿಸಿತ್ತು.

ಸರ್ಕಾರವೇನೋ ಸದರಿ ವಿಮಾನ ಅಪಘಾತಕ್ಕೆ ಪೈಲಟ್ ಕ್ಯಾಪ್ಟನ್ ಮಜೀದ್ ಅಖ್ತರ್ ಕಾರಣವೆಂದು ಹೇಳಿ, 85 ಕೋಟಿ ರೂಪಾಯಿ ಆತನಿಂದ ವಸೂಲಿಗೆ ಮುಂದಾಗಿದೆ. ಆದರೆ ಆ ಕ್ಯಾಪ್ಟನ್ ಮಜೀದ್ ಅಖ್ತರ್ ನನಗೆ ವಾಯು ಸಂಚಾರ ನಿಯಂತ್ರಣ ಕೇಂದ್ರದವರು ರನ್​ವೇ ನಲ್ಲಿರುವ ಅಡ್ಡಗೋಡೆ ಬಗ್ಗೆ ಮಾಹಿತಿ ನೀಡರಲಿಲ್ಲ. ಹಾಗಾಗಿ ಅಪಘಾತ ಸಂಭವಿಸಿ, ನಷ್ಟವುಂಟಾಗಿದೆ ಎಂಬುದಕ್ಕೆ ನಾನು ಕಾರಣವಲ್ಲ. ಜೊತೆಗೆ ಆ ವಿಮಾನಕ್ಕೆ ರಾಜ್ಯ ಸರ್ಕಾರ ವಿಮಾ ಪಾಲಿಸಿ ಮಾಡಿಸಿಲ್ಲ ಎಂಬ ಅಂಶವನ್ನು ಮುಂದಿಟ್ಟಿದ್ದಾರೆ. 27 ವರ್ಷಗಳಿಂದ ಪೈಲಟ್​ ಆಗಿ ಕಾರ್ಯನಿರವಹಿಸುತ್ತಿರುವೆ. ಒಂದೂ ಅಪಘಾತ ಮಾಡಿಲ್ಲ. ಹೀಗಿರುವಾಗ (Air Traffic Controller-ATC) ತಪ್ಪಿನಿಂದ ಅಪಘಾತವಾಗಿದೆ. Gwalior ATC ಇದುವರೆಗೂ ಬ್ಲ್ಯಾಕ್​ ಬಾಕ್ಸ್​ (black box) ಸಂವಹನ ವಿವರವನ್ನು ತನಗೆ ನೀಡಿಲ್ಲ. ತಡೆಗೋಡೆ ಕುರಿತಾದ ಮುನ್ಸೂಚನೆ ಸೇರಿದಂತೆ ಅದರಲ್ಲಿ ಎಲ್ಲಾ ರೆಕಾರ್ಡ್​ ಆಗಿರುತ್ತದೆ. ಅದರ ಮೂಲಕ ಎಲ್ಲವೂ ಸಾಬೀತಾಗುತ್ತದೆ. ನನ್ನ ಕಡೆಯಿಂದ ಯಾವುದೇ ತಪ್ಪಾಗಿಲ್ಲ. ನಾನು ಯಾಕೆ ಸರ್ಕಾರ ಸೂಚಿಸಿರುವಂತೆ 85 ಕೋಟಿ ರೂಪಾಯಿ ಕಟ್ಟಲಿ? ಎಂಬ ವಾದವನ್ನು ಕ್ಯಾಪ್ಟನ್ ಮಜೀದ್ ಅಖ್ತರ್ ಮುಂದಿಟ್ಟಿದ್ದಾರೆ.

ಸಮಾಧಾನಕರ ಸಂಗತಿಯೆಂದರೆ ಪೈಲಟ್​ ಸರಿದಂತೆ ವಿಮಾನದಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಲ್ಲಿ ಪಾರಾಗಿದ್ದರು. ಸಮಾಧಾನಕರ ಸಂಗತಿಯೆಂದರೆ ಪೈಲಟ್​ ಸರಿದಂತೆ ವಿಮಾನದಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಲ್ಲಿ ಪಾರಾಗಿದ್ದರು. ಆದರೆ Directorate General of Civil Aviation (DGCA) ಕೇಂದ್ರವು ಪೈಲಟ್ ಕ್ಯಾಪ್ಟನ್ ಮಜೀದ್ ಅಖ್ತರ್ ಅವರ ವಿಮಾನ ಹಾರಾಟ ಲೈಸೆನ್ಸ್​ ಅನ್ನು ಒಂದು ವರ್ಷ ಕಾಲ ರದ್ದುಪಡಿಸಿದೆ.

Published On - 9:58 am, Tue, 8 February 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ