Statue of Equality: ಇಂಡಿಯನ್ ವರ್ಲ್ಡ್ ರೆಕಾರ್ಡ್ ಪಟ್ಟಿಗೆ ಸೇರಿದ ಸಮಾನತೆ ಸಾರುವ ಪ್ರತಿಮೆ

ಸದ್ಯ ಈಗ ಸಮಾನತೆ ಸಾರುವ ಪ್ರತಿಮೆ(Statue of Equality) ಇಂಡಿಯನ್ ವರ್ಲ್ಡ್ ರೆಕಾರ್ಡ್ ಪಟ್ಟಿಗೆ ಸೇರಿದೆ. ಇದನ್ನು ನಿರ್ಮಿಸಿದ ತ್ರಿದಂಡಿ ಚಿನ್ನಜೀಯರ್ ಸ್ವಾಮಿಯವರಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್(India Book of Records), ಪ್ರಶಂಸಿಸಿದ್ದು ಸಮಾನತೆ ಸಾರುವ ಪ್ರತಿಮೆಗೆ ಇಂಡಿಯನ್ ವರ್ಲ್ಡ್ ರೆಕಾರ್ಡ್ ನೀಡಿ ಗೌರವಿಸಿದೆ.

Statue of Equality: ಇಂಡಿಯನ್ ವರ್ಲ್ಡ್ ರೆಕಾರ್ಡ್ ಪಟ್ಟಿಗೆ ಸೇರಿದ ಸಮಾನತೆ ಸಾರುವ ಪ್ರತಿಮೆ
Statue of Equality: ಇಂಡಿಯನ್ ವರ್ಲ್ಡ್ ರೆಕಾರ್ಡ್ ಪಟ್ಟಿಗೆ ಸೇರಿದ ಸಮಾನತೆ ಸಾರುವ ಪ್ರತಿಮೆ
Follow us
TV9 Web
| Updated By: ಆಯೇಷಾ ಬಾನು

Updated on: Feb 08, 2022 | 9:09 AM

ಹೈದರಾಬಾದ್: ಭಾರತದಲ್ಲಿ ಭಕ್ತಿ ಚಳವಳಿಗೆ ಸುವರ್ಣ ಶಿಖರವನ್ನು ನಿರ್ಮಿಸಿದಂತಹ ಮಹಾನ್ ಸುಧಾರಕ, ವೈಷ್ಣವ ಸಂತ ಶ್ರೀರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ತೆಲಂಗಾಣದ ಶಂಶಾಬಾದ್‌ನ ಮುಚ್ಚಿಂತಲ್ ಅನಾವರಣಗೊಂಡಿದೆ. ಇದು ಪ್ರಪಂಚದಲ್ಲೇ ಅತಿ ಎತ್ತರದ ಬೃಹತ್ ಪ್ರತಿಮೆಯಾಗಿದೆ. ಸದ್ಯ ಈಗ ಸಮಾನತೆ ಸಾರುವ ಪ್ರತಿಮೆ(Statue of Equality) ಇಂಡಿಯನ್ ವರ್ಲ್ಡ್ ರೆಕಾರ್ಡ್ ಪಟ್ಟಿಗೆ ಸೇರಿದೆ. ಇದನ್ನು ನಿರ್ಮಿಸಿದ ತ್ರಿದಂಡಿ ಚಿನ್ನಜೀಯರ್ ಸ್ವಾಮಿಯವರಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್(India Book of Records), ಪ್ರಶಂಸಿಸಿದ್ದು ಸಮಾನತೆ ಸಾರುವ ಪ್ರತಿಮೆಗೆ ಇಂಡಿಯನ್ ವರ್ಲ್ಡ್ ರೆಕಾರ್ಡ್ ನೀಡಿ ಗೌರವಿಸಿದೆ. ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ (Ramanujacharya Sahasrabdi) ಅಂಗವಾಗಿ, 1003 ನೇ ಜನ್ಮದಿನದ ಸ್ಮರಣಾರ್ಥವಾಗಿ, ತೆಲಂಗಾಣದ ಶಂಶಾಬಾದ್‌ನ ಮುಚ್ಚಿಂತಲ್‌ನ 45 ಎಕರೆ ಪ್ರದೇಶದಲ್ಲಿ ಸಮಾನತೆಯ ಪ್ರತಿಮೆಯನ್ನ ಸ್ಥಾಪಿಸಲು ಕನಸು ಕಂಡ ತ್ರಿದಂಡಿ ಚಿನ್ನಜೀಯರ್ ಸ್ವಾಮಿಯವರಿಗೆ ಫೆಬ್ರವರಿ 05ರಂದು ಅವರ ಸಾಧನೆಯನ್ನು ಗುರುತಿಸಿ ವಿಶ್ವದ ಅತಿ ಎತ್ತರದ ಪ್ರತಿಭೆ ಎಂಬ ಶೀರ್ಷಿಕೆಯಡಿ ಇಂಡಿಯನ್ ವರ್ಲ್ಡ್ ರೆಕಾರ್ಡ್ ನೀಡಿ ಗೌರವಿಸಲಾಗಿದೆ.

ರಾಮಾನುಜಾಚಾರ್ಯರ 216 ಅಡಿ ಪ್ರತಿಮೆ ಲೋಕಾರ್ಪಣೆ ಇಂತಹವೊಂದು ಬೃಹತ್ ಪ್ರತಿಮೆಯೊಂದನ್ನ ನಿರ್ಮಿಸಬೇಕೆಂಬ ಕನಸು ಚಿನ್ನಜೀಯರ ಸ್ವಾಮಿ ಅವರಿಗೆ 2013ರಲ್ಲೇ ಹುಟ್ಟಿಕೊಂಡಿತ್ತಂತೆ. ಅಂದು ಹುಟ್ಟಿಕೊಂಡು ಕನಸು ಈಗ ಸಾಕಾರಗೊಂಡಿದೆ. ಪಂಚಧಾತುಗಳಿಂದ ಮಾಡಿಲಾಗಿರುವ 216 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆಗೊಂಡಿದೆ. ಫೆಬ್ರವರಿ 05ರಂದು ಪ್ರಧಾನಿ ಮೋದಿ ಪ್ರತಿಮೆಯನ್ನ ಅನಾವರಣಗೊಳಿಸಿದ್ದಾರೆ. ವಿಶೇಷ ಅಂದ್ರೆ ಇದು ನೆಲದಿಂದ ತುದಿಯವರೆಗೆ ವಿಶ್ವದ ಎರಡನೇ ಅತಿ ಎತ್ತರದ, ಕುಳಿತಿರುವ ಭಂಗಿಯ ಪ್ರತಿಮೆಯಾಗಿದೆ.

ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯ ವಿಶೇಷತೆಗಳು ಸಮಾನತೆಯ ಪ್ರತಿಮೆಯು ಒಟ್ಟು 216 ಅಡಿ ಎತ್ತರ ಇದೆ. ಇದರಲ್ಲಿ ರಾಮಾನುಜಾಚಾರ್ಯರ ಪ್ರತಿಮೆಯು 108 ಅಡಿ ಎತ್ತರ ಇದೆ. ತ್ರಿದಂಡಮ್ 136 ಅಡಿ ಎತ್ತರ ಇದ್ರೆ, ಪದ್ಮ ಪೀಠ 27 ಅಡಿ ಎತ್ತರ ಇದೆ. ಭದ್ರಾ ವೇದಿಕೆಯು 54 ಅಡಿ ಎತ್ತರ ಇದೆ. ಒಟ್ಟು ಶಂಕಗಳು ಮತ್ತು ಚಕ್ರಗಳು 18 ಇವೆ. ಒಟ್ಟು ಕಮಲದ ದಳ 54 ಇವೆ. ಕಮಲದ ಕೆಳಗೆ 36 ಆನೆಗಳು ಇವೆ. ಇನ್ನು 120 ಕೆ.ಜಿ. ಚಿನ್ನ ಬಳಸಿ ಬಲಿಪೀಠದಲ್ಲಿ ಶ್ರೀ ರಾಮಾನುಜಾಚಾರ್ಯರ 54 ಇಂಚು ಎತ್ತರದ ಪ್ರತಿಮೆ ಸ್ಥಾಪಿಸಲಾಗಿದೆ. ಇದಕ್ಕೆ ಪ್ರತಿ ನಿತ್ಯ ಅಭಿಷೇಕ, ಆರಾಧನೆ, ರಾಜಭೋಗದ ಜೊತೆಗೆ ದಿನನಿತ್ಯದ ವಿಧಿವಿಧಾನಗಳು ನಡೆಯಲಿವೆ.

ಇದಿಷ್ಟೇ ಅಲ್ಲ 216 ಅಡಿ ಎತ್ತರದ ಈ ಬೃಹತ್ ಪ್ರತಿಮೆಯನ್ನು ಭೂಕಂಪ ಮತ್ತು ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಲಾಗಿದೆ. ಸಮಾನತೆಯ ಪ್ರತಿಮೆಯು ರಿಕ್ಟರ್ ಮಾಪಕದಲ್ಲಿ 9 ಪಾಯಿಂಟ್‌ಗಳವರೆಗೆ ಭೂಕಂಪವನ್ನು ತಡೆದುಕೊಳ್ಳಬಲ್ಲದು. ಚಂಡಮಾರುತದ ಸಮಯದಲ್ಲಿ ಗಂಟೆಗೆ 300 ಕಿಮೀ ಗಾಳಿಯ ವೇಗವನ್ನು ಸಹ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ರಾಮಾನುಜಾಚಾರ್ಯರ ಪ್ರತಿಮೆ ಇರುವ ಸ್ಥಳದಲ್ಲಿ ಒಟ್ಟು ನಾಲ್ಕು ಬೃಹತ್ ಪ್ರವೇಶ ದ್ವಾರಗಳು ಹಾಗೂ ಸುಮಾರು 3000 ವಾಹನಗಳ ಪಾರ್ಕಿಂಗ್ ಸ್ಥಳವಿದೆ. ಪ್ರವೇಶ ದ್ವಾರದ ವಿನ್ಯಾಸವನ್ನು ತೆಲಂಗಾಣದ ವಿಶಿಷ್ಟವಾದ ‘ಕಾಗಡಿಯಾ’ ಶೈಲಿಯಲ್ಲಿ ಮಾಡಲಾಗಿದೆ. 18 ಅಡಿ ಮುಖ್ಯದ್ವಾರದಲ್ಲಿ ಹನುಮಾನ್ ಮತ್ತು ಗರುಡನ ಎತ್ತರದ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಸಂದರ್ಶಕರ ಅನುಕೂಲಕ್ಕಾಗಿ ಪ್ರವೇಶ ಟಿಕೆಟ್ ಕೌಂಟರ್ ಬಳಿಯೇ ಲಗೇಜ್‌, ಚೆಕ್-ಇನ್ ಕೌಂಟರ್ ಅನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: Statue of Equality: ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಲೋಕಾರ್ಪಣೆ; ಫೋಟೊಗಳು ಇಲ್ಲಿವೆ