Statue of Equality: ಪ್ರಧಾನಿ ನರೇಂದ್ರ ಮೋದಿಯಿಂದ ಇಂದು ಸಮಾನತೆಯ ಪ್ರತಿಮೆ ಅನಾವರಣ; ವಿವರ ಇಲ್ಲಿದೆ

ಹೈದರಾಬಾದ್​ನ ಮುಂಚಿತ್ತಾಲ್​ನಲ್ಲಿ ಇದೀಗ ಪಂಚಲೋಹದ ರಾಮಾನುಜಾಚಾರ್ಯರ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ ಹಾಗೂ ಜಿಂಕ್​ನಿಂದ ಈ ಪ್ರತಿಮೆ ನಿರ್ಮಿಸಲಾಗಿದೆ. ಈ ಮೂರ್ತಿಯು ಕುಳಿತ ಭಂಗಿಯಲ್ಲಿ ಇರುವ ವಿಶ್ವದ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿರಲಿದೆ.

Statue of Equality: ಪ್ರಧಾನಿ ನರೇಂದ್ರ ಮೋದಿಯಿಂದ ಇಂದು ಸಮಾನತೆಯ ಪ್ರತಿಮೆ ಅನಾವರಣ; ವಿವರ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿಯಿಂದ ಸಮಾನತೆಯ ಪ್ರತಿಮೆ ಅನಾವರಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 05, 2022 | 11:20 AM

ದೆಹಲಿ: ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿ ಕಾರ್ಯಕ್ರಮ ಹೈದರಾಬಾದ್​ನ ಹೊರವಲಯದಲ್ಲಿ ಇರುವ ಮುಂಚಿತ್ತಾಲ್ ಎಂಬಲ್ಲಿ ನಡೆಯುತ್ತಿದೆ. ಇಲ್ಲಿನ ಚಿನ್ನ ಜೀಯರ್ ಸ್ವಾಮೀಜಿ (Chinna Jeeyar Swamy) ಆಶ್ರಮದ ಸಮೀಪ ಇದೀಗ ಶ್ರೀರಾಮಾನುಜಾಚಾರ್ಯರ (Sri Ramanujacharya) 216 ಅಡಿ ಎತ್ತರದ ಬೃಹತ್ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಅದನ್ನು ಸಮಾನತೆಯ ಪ್ರತಿಮೆ (Statue of Equality) ಎಂದು ಹೆಸರಿಸಲಾಗಿದ್ದು ರಾಮಾನುಜಾಚಾರ್ಯರ ಸಹಸ್ರಾಬ್ದಿ ಅಂಗವಾಗಿ ಇಂದು (ಶನಿವಾರ, ಫೆಬ್ರವರಿ 5) ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಭಾಗವಹಿಸಿ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ಪ್ರಧಾನಿ, ‘ಇಂದು ಹೈದರಾಬಾದ್​ನಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಅದಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ. ‘ಸಮಾನತೆಯ ಮೂರ್ತಿ’ ಶ್ರೀ ರಾಮಾನುಜಾಚಾರ್ಯರಿಗೆ ಸಲ್ಲಿಸಲಾಗುತ್ತಿರುವ ದೊಡ್ಡ ಗೌರವ ಎಂದು ಪ್ರಧಾನಿ ನುಡಿದಿದ್ದು, ರಾಮಾನುಜಾಚಾರ್ಯರ ಚಿಂತನೆ ಹಾಗೂ ಬೋಧನೆಗಳು ಎಲ್ಲರಿಗೂ ದಾರಿದೀಪ ಎಂದು ಹೇಳಿದ್ದಾರೆ. ಸಂಜೆ 5ಕ್ಕೆ ಪ್ರಧಾನಿ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ಹಂಚಿಕೊಂಡ ಟ್ವೀಟ್ ಇಲ್ಲಿದೆ: 

11ನೇ ಶತಮಾನದ ಸಂತ ಶ್ರೀರಾಮಾನುಜಾಚಾರ್ಯರ ಎಲ್ಲಾ ವಿಧದ ಸಮಾನತೆಯನ್ನು ಪ್ರೋತ್ಸಾಹಿಸಿದ್ದರು. ಸಮಾನತೆಯನ್ನು ಬೋಧನೆ ಮಾಡಿದ್ದರು. ಹೈದರಾಬಾದ್​ನ ಮುಂಚಿತ್ತಾಲ್​ನಲ್ಲಿ ಇದೀಗ ಪಂಚಲೋಹದ ರಾಮಾನುಜಾಚಾರ್ಯರ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ ಹಾಗೂ ಜಿಂಕ್​ನಿಂದ ಈ ಪ್ರತಿಮೆ ನಿರ್ಮಿಸಲಾಗಿದೆ. ಈ ಮೂರ್ತಿಯು ಕುಳಿತ ಭಂಗಿಯಲ್ಲಿ ಇರುವ ವಿಶ್ವದ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿರಲಿದೆ.

ಶ್ರೀರಾಮಾನುಜಾಚಾರ್ಯ ಸಹಸ್ರಾಬ್ದಿ ಸಮಾರೋಪ ಕಾರ್ಯಕ್ರಮವು ಒಟ್ಟು 12 ದಿನಗಳ ಕಾಲ ನಡೆಯಲಿದೆ. ಇದರ ಅಂಗವಾಗಿ ಶನಿವಾರ ಸಮಾನತೆಯ ಪ್ರತಿಮೆ ಅನಾವರಣಗೊಳ್ಳಲಿದೆ. ಈ ವೇಳೆ, ಪ್ರಧಾನಿ ಮೋದಿ ಹೈದರಾಬಾದ್​ನಲ್ಲಿ ಇತರ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಲಿದ್ದಾರೆ. ICRISAT ನ 50ನೇ ವಾರ್ಷಿಕೋತ್ಸವವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಅಲ್ಲದೆ, ICRISATನ ಹವಾಮಾನ ಬದಲಾವಣೆ ಸಂಶೋಧನಾ ಕೇಂದ್ರ ಸೌಲಭ್ಯವನ್ನು ಕೂಡ ಉದ್ಘಾಟನೆ ಮಾಡಲಿದ್ದಾರೆ.

ICRISAT ಎಂಬುದು ಏಷ್ಯಾ ಹಾಗೂ ಸಬ್ ಸಹರನ್ ಆಫ್ರಿಕಾದ ಕೃಷಿ ಸಂಶೋಧನೆಯ ಅಂತಾರಾಷ್ಟ್ರೀಯ ಸಂಸ್ಥೆ ಆಗಿದೆ. ಇಲ್ಲಿನ ಕಾರ್ಯಕ್ರಮದ ನೆನಪಿಗಾಗಿ ಸ್ಟಾಂಪ್ ಒಂದನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: Ramanuja Sahasrabdi: ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿ; ಮೂರನೇ ದಿನದ ಕಾರ್ಯಕ್ರಮ ಸಂಪನ್ನ

ಇದನ್ನೂ ಓದಿ: Statue of Equality: ಹೈದರಾಬಾದ್​ನಲ್ಲಿ ರಾಮಾನುಜಾಚಾರ್ಯರ ಪ್ರತಿಮೆ ಉದ್ಘಾಟನೆಗೆ ಸಕಲ ಸಿದ್ಧತೆ

Published On - 8:00 am, Sat, 5 February 22