ಶ್ರೀನಗರದಲ್ಲಿ ಪೊಲೀಸರಿಂದ ಎನ್‌ಕೌಂಟರ್: ಕಾನ್ಸ್‌ಟೇಬಲ್‌ ಹತ್ಯೆ ಮಾಡಿದ್ದ ಉಗ್ರ ಸಾವು

ಕಾಶ್ಮೀರದ ಶ್ರೀನಗರದಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿದ್ದು, ಎಲ್‌ಇಟಿ ಸಂಘಟನೆಯ ಇಬ್ಬರು ಉಗ್ರರ ಹತ್ಯೆಗೀಡಾಗಿದ್ದಾರೆ. ಇಖ್ಲಾಕ್ ಹಾಜಂ ಸೇರಿ ಎಲ್‌ಇಟಿ ಸಂಘಟನೆಯ (LeT/TRF ) ಇಬ್ಬರು ಉಗ್ರರ ಸಾವನ್ನಪ್ಪಿದವರು.

ಶ್ರೀನಗರದಲ್ಲಿ ಪೊಲೀಸರಿಂದ ಎನ್‌ಕೌಂಟರ್: ಕಾನ್ಸ್‌ಟೇಬಲ್‌ ಹತ್ಯೆ ಮಾಡಿದ್ದ ಉಗ್ರ ಸಾವು
ಶ್ರೀನಗರದಲ್ಲಿ ಪೊಲೀಸರಿಂದ ಎನ್‌ಕೌಂಟರ್: ಕಾನ್ಸ್‌ಟೇಬಲ್‌ ಹತ್ಯೆ ಮಾಡಿದ್ದ ಉಗ್ರ ಸಾವು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 05, 2022 | 10:59 AM

ಕಾಶ್ಮೀರ:ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿದ್ದು, ಎಲ್‌ಇಟಿ ಸಂಘಟನೆಯ ಇಬ್ಬರು ಉಗ್ರರ ಹತ್ಯೆಗೀಡಾಗಿದ್ದಾರೆ. ಇಖ್ಲಾಕ್ ಹಾಜಂ ಸೇರಿ ಎಲ್‌ಇಟಿ ಸಂಘಟನೆಯ (LeT/TRF ) ಇಬ್ಬರು ಉಗ್ರರ ಸಾವನ್ನಪ್ಪಿದವರು. ಅನಂತನಾಗ್ ಜಿಲ್ಲೆಯಲ್ಲಿ ಹೆಡ್‌ ಕಾನ್ಸ್‌ಟೇಬಲ್‌ ಅಲಿ ಮೊಹಮದ್​ ಅವರನ್ನು (HC Ali Mohd) ಇಖ್ಲಾಕ್ (Ikhlaq Hajam) ಹತ್ಯೆಗೈದಿದ್ದ ಎಂದು ಪೊಲೀಸ್ ಮೂಲಗಳು (IGP Kashmir) ತಿಳಿಸಿವೆ. ಎರಡು ಪಿಸ್ತೂಲುಗಳನ್ನು ಉಗ್ರರ ವಾಸಸ್ಥಳದಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಶ್ರೀನಗರದಲ್ಲಿ ಪೊಲೀಸರಿಂದ ಎನ್‌ಕೌಂಟರ್- ಎಎನ್​ಐ ಟ್ವೀಟ್​ ವರದಿ:

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ, ಐವರು ದುರ್ಮರಣ: ಉತ್ತರ ಪ್ರದೇಶದಲ್ಲಿ ರಾಂಪುರದ ತಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Tanda PS) ಭೀಕರ ಅಪಘಾತ ಸಂಭವಿಸಿದ್ದು, ಐವರು ದುರ್ಮರಣಕ್ಕೀಡಾಗಿದ್ದಾರೆ. ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ (Rampur district hospital) ದಾಖಲು ಮಾಡಲಾಗಿದೆ.

ಮುಂಬೈ ಸರಣಿ ಸ್ಫೋಟದ ಆರೋಪಿ, ದಾವೂದ್ ಇಬ್ರಾಹಿಂ ಆಪ್ತ ಅಬು ಬಕರ್​ ಯುಎಇಯಲ್ಲಿ ಬಂಧನ ದೆಹಲಿ: 1993 ಮುಂಬೈ ಸರಣಿ ಸ್ಫೋಟದ (1993 Mumbai Blast)ಆರೋಪಿ, ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಆಪ್ತ ಅಬು ಬಕರ್ ​​​ನನ್ನು ಭಾರತೀಯ ಭದ್ರತಾ ದಳದ ಸಿಬ್ಬಂದಿ ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ)ನಲ್ಲಿ ಬಂಧಿಸಿವೆ. 1993ರಲ್ಲಿ ಮುಂಬೈನಲ್ಲಿ ಒಟ್ಟು 12 ಪ್ರದೇಶಗಳನ್ನು ಸ್ಫೋಟಿಸಲಾಗಿತ್ತು. ಈ ದುರಂತದಲ್ಲಿ 257 ಮಂದಿ ಮೃತಪಟ್ಟಿದ್ದರೆ, 713ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 29ವರ್ಷಗಳಿಂದಲೂ ಭಾರತದ ಮೋಸ್ಟ್​ವಾಂಟೆಡ್​ ಪಟ್ಟಿಯಲ್ಲಿದ್ದ ಉಗ್ರ ಅಬು ಬಕರ್​​ನನ್ನು ಬಂಧಿಸಲಾಗಿದ್ದು, ಆತನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಅಬು ಬಕರ್​​ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಬಳಕೆ ತರಬೇತಿ ನೀಡುವುದರಲ್ಲಿ ತೊಡಗಿಕೊಂಡಿದ್ದ. ಅಷ್ಟೇ ಅಲ್ಲ ದುಬೈನಲ್ಲಿದ್ದ ಇಬ್ರಾಹಿಂ ದಾವೂದ್​ ನಿವಾಸದಲ್ಲಿ ಮುಂಬೈ ಸ್ಫೋಟದ ಕುರಿತು ರೂಪುರೇಷೆ ಮಾಡುವಲ್ಲಿ, ಆರ್​ಡಿಎಕ್ಸ್​ ಲ್ಯಾಂಡಿಂಗ್ ಮಾಡುವ ಬಗ್ಗೆ ಯೋಜನೆ ರೂಪಿಸುವಲ್ಲಿ ಈತ ಸಕ್ರಿಯನಾಗಿದ್ದ ಎಂದು ಹೇಳಲಾಗಿದೆ. 1993ರ ಸ್ಫೋಟದ ಪ್ರಮುಖ ಆರೋಪಿಯಾಗಿರುವ ಈತ, ನಂತರದ ದಿನಗಳಲ್ಲಿ ಪಾಕಿಸ್ತಾನ ಮತ್ತು ಯುಎಇನಲ್ಲಿಯೇ ವಾಸವಾಗಿದ್ದ. ಈತ ಯುಎಇನಲ್ಲಿಯೇ ವಾಸವಾಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಭಾರತೀಯ ಭದ್ರತಾ ದಳದ ಸಿಬ್ಬಂದಿ ಇದೀಗ ಬಂಧಿಸಿದ್ದಾರೆ. 2019ರಲ್ಲಿ ಯುಎಇ ಭದ್ರತಾ ಏಜೆನ್ಸಿಗಳೇ ಅಬು ಬಕರ್​ನನ್ನು ಒಮ್ಮೆ ಅರೆಸ್ಟ್ ಮಾಡಿದ್ದವು. ಆದರೆ ಕೆಲವು ದಾಖಲೆಗಳು ಸರಿಯಾಗಿ ಸಿಗದ ಕಾರಣ ಅದು ಹೇಗೋ ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ:

Vasant Panchami 2022: ವಿದ್ಯೆಯ ಅಧಿದೇವತೆ ತಾಯಿ ಸರಸ್ವತಿ ಆವಿರ್ಭವಿಸಿದ ದಿನ -ನಿಸರ್ಗ ವಸಂತೋತ್ಸವ ಇಂದಿನಿಂದ ಆರಂಭ

ಇದನ್ನೂ ಓದಿ: Power Cut: ಕ್ಯಾತ್ಸಂದ್ರ ಉಪವಿಭಾಗದ ವ್ಯಾಪ್ತಿಯಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ, ನಿಧಿ ಆಸೆಗೆ ತುಳಸಿ ಕಟ್ಟೆ ಧ್ವಂಸ

Published On - 6:42 am, Sat, 5 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್