Power Cut: ಕ್ಯಾತ್ಸಂದ್ರ ಉಪವಿಭಾಗದ ವ್ಯಾಪ್ತಿಯಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ, ನಿಧಿ ಆಸೆಗೆ ತುಳಸಿ ಕಟ್ಟೆ ಧ್ವಂಸ

ತುಮಕೂರು: ತುಮಕೂರಿನ ಕ್ಯಾತ್ಸಂದ್ರ (Kyathsandra) ಉಪವಿಭಾಗದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿದ್ದು ನಾಳೇ ಭಾನುವಾರ ಫೆಬ್ರವರಿ 6 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ನಗರದ 34, 35 ನೇ ವಾರ್ಡ್, ಶ್ರೀನಗರ, ದೇವರಾಯಪಟ್ಟಣ, ಬಸವಪಟ್ಟಣ, ಕರೇಕಲ್ ಪಾಳ್ಯ, ಮಾರನಾಯಕನ ಪಾಳ್ಯ, ಹಿರೇಹಳ್ಳಿ, ಹರಳೂರು, ಹೊನ್ನುಡಿಕೆ, ಹೊನಸಿಗೆರೆ, ನಿಡುವಳಲು, ಮಸ್ಕಲ್, ಹೊಳಕಲ್ಲು, ಹಿರೇಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ (Power Cut) ಆಗಲಿದೆ. ನಿಧಿ […]

Power Cut: ಕ್ಯಾತ್ಸಂದ್ರ ಉಪವಿಭಾಗದ ವ್ಯಾಪ್ತಿಯಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ, ನಿಧಿ ಆಸೆಗೆ ತುಳಸಿ ಕಟ್ಟೆ ಧ್ವಂಸ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 05, 2022 | 9:23 AM

ತುಮಕೂರು: ತುಮಕೂರಿನ ಕ್ಯಾತ್ಸಂದ್ರ (Kyathsandra) ಉಪವಿಭಾಗದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿದ್ದು ನಾಳೇ ಭಾನುವಾರ ಫೆಬ್ರವರಿ 6 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ನಗರದ 34, 35 ನೇ ವಾರ್ಡ್, ಶ್ರೀನಗರ, ದೇವರಾಯಪಟ್ಟಣ, ಬಸವಪಟ್ಟಣ, ಕರೇಕಲ್ ಪಾಳ್ಯ, ಮಾರನಾಯಕನ ಪಾಳ್ಯ, ಹಿರೇಹಳ್ಳಿ, ಹರಳೂರು, ಹೊನ್ನುಡಿಕೆ, ಹೊನಸಿಗೆರೆ, ನಿಡುವಳಲು, ಮಸ್ಕಲ್, ಹೊಳಕಲ್ಲು, ಹಿರೇಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ (Power Cut) ಆಗಲಿದೆ.

ನಿಧಿ ಆಸೆಗೆ ತುಳಸಿ ಕಟ್ಟೆ ಧ್ವಂಸ: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮರವೇಕೆರೆ ಬಂದ್ರೆಹಳ್ಳಿ ಗ್ರಾಮದ ಬಳಿಯಿರುವ ಮೀನಗೊಂದಿ ಮಲೇರಂಗನಾಥ ಸ್ವಾಮಿಯ ದೇವಾಲಯದ ಮುಂಭಾಗದಲ್ಲಿದ್ದ ತುಳಸಿ ಕಟ್ಟೆಯನ್ನ ಯಾರೋ ನಿಧಿಗಳ್ಳರು ಹಾನಿ ಮಾಡಿದ್ದಾರೆ. ಯಾರೂ ಇಲ್ಲದನ್ನ ಗಮನಿಸಿರುವ ಅಪರಿಚಿತರು ಬೆಟ್ಟದ ಮೇಲಿರುವ ದೇವಾಲಯದ ಮುಂಭಾಗದಲ್ಲಿ ಇದ್ದ ತುಳಸಿ ಕಟ್ಟೆಯನ್ನ ನಿಧಿ ಇದೆ ಎಂದು ಭಾವಿಸಿ ಅಮಾವಾಸ್ಯೆ ದಿನ ಹಾನಿ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ. ಇನ್ನು ಈ ದೇವಾಲಯಕ್ಕೆ ವಿಶೇಷವಾಗಿ ಹಬ್ಬ ಹರಿದಿನಗಳು ಹಾಗೂ ಪ್ರತಿ ಶನಿವಾರ ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಸದ್ಯ ನಿಧಿಗಾಗಿ ತುಳಸಿ ಕಟ್ಟೆಯನ್ನ ಹಾನಿ ಮಾಡಿದ್ದು ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.’

ಕಳ್ಳತನ ಆರೋಪಿಗಳ ಬಂಧನ: ಪಾವಗಡ ತಾಲೂಕಿನ ಹಲವೆಡೆ ಮನೆ‌ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ. ಐವಾರಲ ಹಳ್ಳಿ ಗ್ರಾಮದ ಜಯಪ್ರಕಾಶ್ ನಾಯ್ಕ್, ಲೋಕೇಶ್ ಮತ್ತು ದೇವರಾಜ್ ಬಂಧಿತರು. ಬಂಧಿತರಿಂದ 11.60 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೈಕ್ ವಶ ಪಡಿಸಿಕೊಂಡಿದ್ದಾರೆ. ಕಳೆದ 2021 ಸೆಪ್ಟೆಂಬರ್ ನಲ್ಲಿ ಸೇವಾಲಾಲ್ ಪುರ ಗ್ರಾಮದ ಮನೆ ಕಳವು ಮಾಡಲಾಗಿತ್ತು. ಜೊತೆಗೆ ಪಾವಗಡ ಮಧುಗಿರಿ ತಾಲೂಕಿನ 8 ಮನೆಗಳಲ್ಲಿ ಕಳ್ಳತನ ಮಾಡಿದ್ದರು. ಕಳವು ಮಾಡಿದ್ದ ಆಭರಣಗಳನ್ನು ಮಹೇಶ್ ಎಂಬಾತನಿಗೆ ಈ ಕಳ್ಳರು ಮಾರಾಟ ಮಾಡಿದ್ದರು. ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. (ಮಹೇಶ್, ಟಿವಿ9, ತುಮಕೂರು)

ಬೆಂಗಳೂರಿನ ಬನಶಂಕರಿ, ವೈಟ್​ಫೀಲ್ಡ್​, ಯಶವಂತಪುರ ಸೇರಿ ಹಲವೆಡೆ ಇಂದು ಕರೆಂಟ್ ಇರಲ್ಲ ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಇಂದು (ಫೆ. 5) ಮತ್ತು ನಾಳೆ (ಫೆ. 6) ಪವರ್ ಕಟ್ ಇರಲಿದೆ. ಇನ್ನೆರಡು ದಿನ ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ಬೆಂಗಳೂರಿನ ಜಯನಗರ, ಇಸ್ರೋ ಲೇಔಟ್, ಬನಶಂಕರಿ, ಕತ್ರಿಗುಪ್ಪೆ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ, ವೈಟ್‌ಫೀಲ್ಡ್ ಏರಿಯಾಗಳಲ್ಲಿ ಇಂದು ಕರೆಂಟ್ (Power Cut) ಇರುವುದಿಲ್ಲ.

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆಆರ್ ರಸ್ತೆ, ಜಯನಗರ 8ನೇ ಬ್ಲಾಕ್, ವಿನಾಯಕನಗರ, ಟೌನ್ ಹಾಲ್, ರವೀಂದ್ರ ಕಲಾಕ್ಷೇತ್ರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಜೆಪಿ ನಗರ 1ನೇ ಹಂತ, ಸಾರಕ್ಕಿ ಮಾರುಕಟ್ಟೆ, ತ್ಯಾಗರಾಜನಗರ ಮುಖ್ಯರಸ್ತೆ, ಪಾಪಯ್ಯ ಗಾರ್ಡನ್, ಬನಶಂಕರಿ 3ನೇ ಬಡಾವಣೆ, ಬನಶಂಕರಿ 3ನೇ ಬ್ಲಾಕ್ ಪೀಡಿತ ಪ್ರದೇಶಗಳು. ಅಚ್ಚುಕಟ್ಟು, ಕತ್ರಿಗುಪ್ಪೆ, ಕಾಕತಿಯನಗರ, ಮಾರತಹಳ್ಳಿ, ಹೊಂಗಸಂದ್ರ, ಬೊಮ್ಮನಹಳ್ಳಿ, ಸಂತೃಪ್ತಿ ನಗರ, ನೃಪತುಂಗ ನಗರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೋಗೂರಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪ್ರಕಾಶನಗರ, ರಾಮಮೋಹನಪುರ, ವೈಯಾಲಿಕಾವಲ್, ಯಶವಂತಪುರ, ಮಾಡೆಲ್ ಕಾಲೋನಿ, ಗುರುಮೂರ್ತಿ ರೆಡ್ಡಿ ಕಾಲೋನಿ, ಅಂಬೇಡ್ಕರ್ ನಗರ, ಪೈಪ್ ಲೈನ್ ರಸ್ತೆ, ನ್ಯೂ ಬಿಇಎಲ್ ರಸ್ತೆ, ಆದಿತ್ಯ ನಗರ, ಎಂಎಸ್ ಪಾಳ್ಯ, ಅಕ್ಷಯನಗರ, ದೊಡ್ಡಬೆಟಹಳ್ಳಿ, ತಿಂಡ್ಲು ಮುಖ್ಯರಸ್ತೆ, ರಾಘವೇಂದ್ರ ಬಿ ಕಾಲೋನಿ, ಕೆ.ಈ.ಡಿ.ಬಿ. ನಗರ, ಜಕ್ಕೂರು ಮುಖ್ಯ ರಸ್ತೆ ಮತ್ತು ಕಲಾಸ್ತ್ರೀನಗರದಲ್ಲಿ ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಸ್ತೂರಿ ನಗರ, ಟಿಸಿ ಪಾಳ್ಯ ರಸ್ತೆ, ಆರ್‌ಕೆ ಮಠದ ರಸ್ತೆ, ಹಲಸೂರು ಮೆಟ್ರೋ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಬೆಳ್ಳಾಳಿ ಗ್ರಾಮ, ಕಾಫಿ ಬೋರ್ಡ್ ಲೇಔಟ್, ಅಂಬೇಡ್ಕರ್ ನಗರ ಗುಟ್ಟ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಗುಂಜೂರು, ಗುಂಜೂರು ಮುಖ್ಯರಸ್ತೆ, ಅಯ್ಯಪ್ಪನಗರ, ಗೋಕುಲ ವಿಸ್ತರಣೆ ಮತ್ತು ಹೂಡಿಯಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸುಬ್ಬಣ್ಣ ಗಾರ್ಡನ್, ವಿಎಚ್‌ಬಿಸಿಎಸ್, ಕೆನರಾ ಬ್ಯಾಂಕ್ ಕಾಲೋನಿ, ಅನುಭವ ನಗರ, ಕಿರ್ಲೋಸ್ಕರ್ ಕಾಲೋನಿ 1 ನೇ ಹಂತ, ಹಾವನೂರು ವೃತ್ತ, ಮಂಜುನಾಥನಗರ, ಶಾರದ ಕಾಲೋನಿ, ಮೀನಾಕ್ಷಿನಗರ, ಸುಂಕದಕಟ್ಟೆ, ರಾಜೀವ್ ಗಾಂಧಿ ನಗರ, ಬೈರವೇಶ್ವರ ನಗರ, ಪ್ರಶಾಂತ ನಗರ, ಮುದಲಪಾಳ್ಯ, ಮುದಲಪಾಳ್ಯ ಉಳ್ಳಾಲ ನಗರ, ದೊಡ್ಡ ಬಸ್ತಿ ಮುಖ್ಯರಸ್ತೆ, ಮಲ್ಲತ್ತಳ್ಳಿ ಲೇಔಟ್, ದ್ವಾರಕಾಬಸ ರಸ್ತೆ ಮತ್ತು ಭವಾನಿನಗರದಲ್ಲಿ ಪವರ್ ಕಟ್ ಇರಲಿದೆ.

ಇದನ್ನೂ ಓದಿ:

Hijab Controversy: ಉಡುಪಿಯಲ್ಲಿ ಹಿಜಾಬ್ ವಿವಾದ: ಹಿಜಾಬ್​ ಬೇಕೆನ್ನುವವರಿಗೆ ಆನ್​ಲೈನ್ ಕ್ಲಾಸ್​ಗೆ ಅವಕಾಶ ನೀಡಲು ನಿರ್ಧಾರ

ಕರಾವಳಿಯಿಂದ ಬೆಳಗಾವಿ ಜಿಲ್ಲೆಗೆ ವ್ಯಾಪಿಸಿದ ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ಪಿಯು ವಿದ್ಯಾರ್ಥಿಗಳು