Hijab Controversy: ಉಡುಪಿಯಲ್ಲಿ ಹಿಜಾಬ್ ವಿವಾದ: ಹಿಜಾಬ್​ ಬೇಕೆನ್ನುವವರಿಗೆ ಆನ್​ಲೈನ್ ಕ್ಲಾಸ್​ಗೆ ಅವಕಾಶ ನೀಡಲು ನಿರ್ಧಾರ

ಸಣ್ಣ ವಿಚಾರ ದೊಡ್ಡದು ಮಾಡದಂತೆ ಮುಸ್ಲಿಂ ಮುಖಂಡರನ್ನು ವಿಂತಿಸಿದ್ದೇನೆ. ಬಾವಾ ಅವರೊಡನೆ ನಡೆಸಿದ ಚರ್ಚೆಯ ಬಗ್ಗೆ ಪೋಷಕರಿಗೆ ವಿವರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಘುಪತಿ ಭಟ್ ಹೇಳಿದರು.

Hijab Controversy: ಉಡುಪಿಯಲ್ಲಿ ಹಿಜಾಬ್ ವಿವಾದ: ಹಿಜಾಬ್​ ಬೇಕೆನ್ನುವವರಿಗೆ ಆನ್​ಲೈನ್ ಕ್ಲಾಸ್​ಗೆ ಅವಕಾಶ ನೀಡಲು ನಿರ್ಧಾರ
ಉಡುಪಿ ಶಾಸಕ ರಘುಪತಿ ಭಟ್ ಮತ್ತು ಮುಸ್ಲಿಂ ನಾಯಕ ಜಿ.ಎ.ಬಾವಾ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 26, 2022 | 4:35 PM

ಉಡುಪಿ: ಹಿಜಾಬ್ (Hijab Congroversy) ಧರಿಸಲು ಅವಕಾಶ ಬೇಕೆಂಬ ಮುಸ್ಲಿಂ ವಿದ್ಯಾರ್ಥಿನಿಯರ ಬೇಡಿಕೆಯ (Muslim Girl Students) ಬಗ್ಗೆ ಬುಧವಾರ ನಗರದಲ್ಲಿ ಮಹತ್ವದ ಬೆಳವಣಿಗೆಗಳು ನಡೆದವು. ವಿವಾದದ ಬೆನ್ನಲ್ಲೇ ಮುಸ್ಲಿಂ ಮುಖಂಡ ಜಿ.ಎ.ಬಾವಾ (G.A.Bava) ಮತ್ತು ಶಾಸಕ ರಘುಪತಿ ಭಟ್ (Raghupati Bhat) ಚರ್ಚೆ ನಡೆಸಿದರು. ಹಿಜಾಬ್ ಬೇಕೆನ್ನುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಮೂಲಕ ಪಾಠ ಕೇಳಲು ಅವಕಾಶ ಕಲ್ಪಿಸಲಾಗುವುದು, ನಂತರ ಅವರು ಪರೀಕ್ಷೆ ಬರೆಯಬಹುದು. ಮುಂದಿನ ವರ್ಷ ಬೇಕಾದ ಅವರಿಗೆ ಬೇಕಾದ ಕಾಲೇಜು ಆಯ್ಕೆ ಮಾಡಿಕೊಳ್ಳಬಹುದು ಎಂದು ಶಾಸಕ ರಘುಪತಿ ಭಟ್ ಭರವಸೆ ನೀಡಿದರು. ಸಣ್ಣ ವಿಚಾರ ದೊಡ್ಡದು ಮಾಡದಂತೆ ಮುಸ್ಲಿಂ ಮುಖಂಡರನ್ನು ವಿಂತಿಸಿದ್ದೇನೆ. ಬಾವಾ ಅವರೊಡನೆ ನಡೆಸಿದ ಚರ್ಚೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಇನ್ನೊಂದು ತಿಂಗಳಷ್ಟೇ ತರಗತಿ ನಡೆಯಲಿದ್ದು, ಆ ಬಳಿಕ ಪರೀಕ್ಷೆಗಳು ಆರಂಭವಾಗುತ್ತವೆ ಎಂದು ವಿವರಿಸಿದರು.

ಕಾಲೇಜಿಗೆ ಹಿಜಾಬ್ ಧರಿಸಿ ಬರಲು ಅವಕಾಶ ನೀಡುವುದಿಲ್ಲ. ಅಂಥವರು ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಬಹುದು. ಯಾವುದೋ ಕಾರಣಕ್ಕೆ, ಯಾರೋ ಮಾಡಿದ ಕುಮ್ಮಕ್ಕಿನಿಂದ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗಬಾರದು. ಪೋಷಕರು ಈ ಬಗ್ಗೆ ಎಚ್ಚರಿಕೆವಹಿಸಬೇಕು ಎಂದು ಮನವಿ ಮಾಡಿದರು. ಹಿಜಾಬ್ ವಿವಾದ ಹಿನ್ನಲೆ ಬೆಂಗಳೂರಿನಿಂದ ಬಂದಿದ್ದ ಮುಸ್ಲಿಂ ಮುಖಂಡರು ಶಾಲಾಭಿವೃದ್ಧಿ ಸಮಿತಿ ಜೊತೆಗೆ ಮೊದಲು ಮಾತುಕತೆ ನಡೆಸಿದರು.

ವಸ್ತ್ರಸಂಹಿತೆ ಬೇಕೇ ಬೇಡವೆ ಎನ್ನುವ ಬಗ್ಗೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿ, ಸಮಿತಯ ವರದಿ ಆಧರಿಸಿ ತೀರ್ಮಾಣ ತೆಗೆದುಕೊಳ್ಳುತ್ತದೆ. ನ್ಯಾಯಾಲಯಗಳ ಆದೇಶ ಹಾಗೂ ಇತರ ರಾಜ್ಯಗಳಲ್ಲಿ ಜಾರಿಯಾಗಿರುವ ವಸ್ತ್ರ ನಿಯಮಗಳನ್ನು ಗಮನಿಸಿ ಉನ್ನತ ಸಮಿತಿ ತನ್ನ ವರದಿ ನೀಡುತ್ತದೆ. ಅಲ್ಲಿಯವರೆಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ತರಗತಿಯಲ್ಲಿ ಕೂರಬೇಕು. ಯಾವುದೇ ಕಾಲೇಜು ಅಥವಾ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ. ವಿದ್ಯಾರ್ಥಿನಿಯರು ಹುಟ್ಟು ಹಾಕಿದ ವಿವಾದ ಇದು ಎಂದು ಶಾಸಕರು ಹೇಳಿದರು.

ಸಿದ್ದರಾಮಯ್ಯಗೆ ಸುನಿಲ್ ಕುಮಾರ್ ಟಾಂಗ್ ಬಿಜೆಪಿ ಒಂದು ಮುಳುಗುವ ಹಡಗು ಎನ್ನುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್​ಕುಮಾರ್ ಖಂಡಿಸಿದ್ದಾರೆ. ಸಿದ್ದರಾಮಯ್ಯ ಅವರಲ್ಲಿ ಸ್ಪಷ್ಟತೆ ಇಲ್ಲ, ಬಿಜೆಪಿಯಲ್ಲಿ ಸ್ಪಷ್ಟತೆಯಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸ್ವತಃ ಮುಳುಗುವ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರ ಕಣ್ಣಿಗೆ ಎಲ್ಲರೂ ಮುಳುಗಿದಂತೆ ಕಾಣಿಸುತ್ತಿರಬಹುದು ಎಂದು ವ್ಯಂಗ್ಯವಾಡಿದರು. ಬಿಜೆಪಿ ನಾಯಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅಪಪ್ರಚಾರಕ್ಕಾಗಿ ಅವರು ಏನು ಬೇಕಾದರೂ ಮಾತಾಡಬಹುದು. ನಾಳೆ ನಾನು (ಸುನಿಲ್​ಕುಮಾರ್) ಕೂಡ ಡಿಕೆಶಿ ಜತೆಯಿದ್ದೇನೆಂದು ಹೇಳಬಹುದು ಎಂದು ನುಡಿದರು.

ಇದನ್ನೂ ಓದಿ: ಹಿಜಾಬ್ ವಿಚಾರದಲ್ಲಿ ರಾಜಕೀಯ ಮಾಡಬಾರದು; ಇದನ್ನು ಪೋಷಕರು, ಶಿಕ್ಷಣ ಸಂಸ್ಥೆ ಕುಳಿತು ಚರ್ಚಿಸಲಿ -ಮಾಜಿ ಸಚಿವ ಯು‌.ಟಿ.ಖಾದರ್ ಇದನ್ನೂ ಓದಿ: ಹಿಜಾಬ್ ಧರಿಸುವುದಕ್ಕೆ ಅವಕಾಶ ಕೊಡಲು ವಿದ್ಯಾರ್ಥಿನಿಯರ ಮನವಿ

Published On - 4:23 pm, Wed, 26 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್