ಹಿಜಾಬ್ ವಿಚಾರದಲ್ಲಿ ರಾಜಕೀಯ ಮಾಡಬಾರದು; ಇದನ್ನು ಪೋಷಕರು, ಶಿಕ್ಷಣ ಸಂಸ್ಥೆ ಕುಳಿತು ಚರ್ಚಿಸಲಿ -ಮಾಜಿ ಸಚಿವ ಯು.ಟಿ.ಖಾದರ್
ಕರಾವಳಿ ಭಾಗದಲ್ಲಿ ಹಿಜಾಬ್ ವಿವಾದ ಸಣ್ಣ ವಿಚಾರ. ಇದನ್ನು ಪೋಷಕರು, ಶಿಕ್ಷಣ ಸಂಸ್ಥೆ ಕುಳಿತು ಚರ್ಚಿಸಲಿ. ಹಿಜಾಬ್ ವಿಚಾರದಲ್ಲಿ ರಾಜಕೀಯ ಮಾಡಬಾರದು. ಸ್ಥಳೀಯವಾಗಿ ಹಿಜಾಬ್ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಪಾಕ್ ವಿಚಾರ ತಂದು ಕಮೆಂಟ್ ಮಾಡೋದು ಅಪ್ರಸ್ತುತ. -ಮಾಜಿ ಸಚಿವ ಯು.ಟಿ.ಖಾದರ್
ಮಂಗಳೂರು: ಕರಾವಳಿ ಭಾಗದಲ್ಲಿ ಹಿಜಾಬ್ಗಾಗಿ ತರಗತಿ ಬಹಿಷ್ಕಾರ ನಡೆದಿದೆ. ಹಿಜಾಬ್ ಧರಿಸುವುದು ನಮ್ಮ ಧಾರ್ಮಿಕ ಹಕ್ಕು, ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತು ಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಮುಸ್ಲಿಂ ವಿದ್ಯಾರ್ಥಿನೀಯರು ವಾದಿಸಿದ್ದರು. ಸದ್ಯ ಈ ಘಟನೆ ಸಂಬಂಧ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.
ಕರಾವಳಿ ಭಾಗದಲ್ಲಿ ಹಿಜಾಬ್ ವಿವಾದ ಸಣ್ಣ ವಿಚಾರ. ಇದನ್ನು ಪೋಷಕರು, ಶಿಕ್ಷಣ ಸಂಸ್ಥೆ ಕುಳಿತು ಚರ್ಚಿಸಲಿ. ಹಿಜಾಬ್ ವಿಚಾರದಲ್ಲಿ ರಾಜಕೀಯ ಮಾಡಬಾರದು. ಸ್ಥಳೀಯವಾಗಿ ಹಿಜಾಬ್ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಪಾಕ್ ವಿಚಾರ ತಂದು ಕಮೆಂಟ್ ಮಾಡೋದು ಅಪ್ರಸ್ತುತ. ಪಾಕಿಸ್ತಾನದಂತಹ ಪರಿಸ್ಥಿತಿ ಇಲ್ಲಿ ಇಲ್ಲ. ಅಲ್ಲಿ ಶಾಲೆಗೆ ಹೋಗಿ ಚಿಕ್ಕಮಕ್ಕಳಿಗೆ ಗುಂಡು ಹೊಡೆಯುತ್ತಾರೆ. ಅಂತಹ ಪರಿಸ್ಥಿತಿ ನಮ್ಮ ಕರಾವಳಿ ಭಾಗದಲ್ಲಿ ಇಲ್ಲ. ಅಷ್ಟಕ್ಕೂ ಈ ವಿಚಾರ ನನ್ನ ಬಳಿ ಯಾರು ತಂದಿಲ್ಲ. ಶಾಲೆಗೆ ಹೋದ ವಿದ್ಯಾರ್ಥಿಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಶಾಲೆಗೆ ಹೋಗಲು ಸಾಧ್ಯವಾಗದವರ ಬಗ್ಗೆ ಯೋಚಿಸಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ತಿಳಿಸಿದ್ರು.
ಘಟನೆ ಹಿನ್ನೆಲೆ ನಗರದ ಮಹಿಳಾ ಸರ್ಕಾರಿ ಪಿಯು ಕಾಲೇಜ್ ಮುಂದೆ ಪ್ಲೇ ಕಾರ್ಡ್ ಹಿಡಿದು ವಿದ್ಯಾರ್ಥಿನೀಯರು ಪ್ರತಿಭಟನೆ ನಡೆಸಿದ್ದರು. ಮಹಿಳಾ ಕಾಲೇಜ್ ಆದರೂ ಪುರುಷ ಪ್ರಾಧ್ಯಾಪಕರು ಇದ್ದಾರೆ. ಕಾರ್ಯಕ್ರಮ ನಡೆಯುವ ವೇಳೆ ಹಲವಾರು ಪುರುಷ ಅತಿಥಿಗಳು ಕಾಲೇಜಿಗೆ ಬರುತ್ತಾರೆ. ನಾವು ಯಾರ ಮುಂದೆ ಹಿಜಾಬ್ ಇಲ್ಲದೆ ಓಡಾಡುವ ಹಾಗಿಲ್ಲ. ನಮಗೆ ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳುವ ಅವಕಾಶ ಮಾಡಿಕೊಡಿ. ನಮಗೆ ಹಿಜಾಬ್ ಧರಿಸುವುದು ಶಿಕ್ಷಣದಷ್ಟೇ ಮುಖ್ಯ ಎಂದು ಮುಸ್ಲಿಂ ವಿದ್ಯಾರ್ಥಿನೀಯರು ಪ್ರತಿಭಟನೆ ನಡೆಸಿದ್ದರು.
ಹಿಜಾಬ್ ಧರಿಸಿ ಕ್ಲಾಸ್ ಗೆ ಬರಲು ಅವಕಾಶ ನೀಡದ ಕಾಲೇಜು, ಸಮವಸ್ತ್ರ ಪಾಲಿಸುವಂತೆ ಪಟ್ಟು ಹಿಡಿದಿದೆ. ಇನ್ನೂ ಈ ಕುರಿತಾಗಿ ಕಾಲೇಜಿನ ಪ್ರಾಂಶುಪಾಲರು ಪದವಿಪೂರ್ವ ಬೋರ್ಡ್ ಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಎತ್ತಿನಗಾಡಿ ರೇಸ್ಗಳನ್ನು ಲೀಲಾಜಾಲವಾಗಿ ಗೆಲ್ಲುವ ಹಳ್ಳಿಕಾರ್ ತಳಿಯ ‘ಕಿಂಗ್ ಗಗನ್’ ಮಾರಾಟವಾಗಿದ್ದು ರೂ 7.68 ಲಕ್ಷಕ್ಕೆ!
ನಮಗೆ ಹಿಜಬ್ ಕೂಡ ಮುಖ್ಯ ಶಿಕ್ಷಣ ಕೂಡ ಅಷ್ಟೇ ಮುಖ್ಯ: ಉಡುಪಿಯಲ್ಲಿ ಹಿಜಬ್ಗಾಗಿ ತರಗತಿ ಬಹಿಷ್ಕಾರ ಮುಂದುವರಿಕೆ