ಎತ್ತಿನಗಾಡಿ ರೇಸ್ಗಳನ್ನು ಲೀಲಾಜಾಲವಾಗಿ ಗೆಲ್ಲುವ ಹಳ್ಳಿಕಾರ್ ತಳಿಯ ‘ಕಿಂಗ್ ಗಗನ್’ ಮಾರಾಟವಾಗಿದ್ದು ರೂ 7.68 ಲಕ್ಷಕ್ಕೆ!
ಮಂಡ್ಯ ಮತ್ತು ಬೇರೆ ಕಡೆ ನಡೆಯುವ ಎತ್ತಿನ ಗಾಡಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗೆಲ್ಲ ಪ್ರಥಮ ಇಲ್ಲವೇ ದ್ವಿತೀಯ ಸ್ಥಾನ ಪಡೆಯುವುದು ಖಚಿತವಾಗಿತ್ತಂತೆ. 80 ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗಿಯಾಗಿರುವ ‘ಕಿಂಗ್ ಗಗನ್’ 70 ಸಲ ಮೊದಲ ಮತ್ತು ಎರಡನೇ ಸ್ಥಾನ ಪಡೆದಿದೆ ಎಂದು ವಿನೋದ ಹೇಳುತ್ತಾರೆ.
ನಿಮಗಿಲ್ಲಿ ಕಾಣುತ್ತಿರುವ ಎತ್ತಿನ ಹೆಸರು ‘ಕಿಂಗ್ ಗಗನ್!’ (King Gagan) ಇದು ನಿಜ ಅರ್ಥದಲ್ಲಿ ಕಿಂಗ್ ಮತ್ತು ಇದರ ಬೆಲೆಯೂ ಗಗನದೆತ್ತರ ಮಾರಾಯ್ರೇ. ಯಾಕೆ ಅಂತೀರಾ ಹಳ್ಳಿಕಾರ್ ತಳಿಯ (Hallikar Breed) ಈ ಒಂಟಿ ಎತ್ತು ಮಂಡ್ಯನಲ್ಲಿ ಬರೋಬ್ಬರಿ ರೂ. 7.68 ಲಕ್ಷಕ್ಕೆ ಮಾರಾಟವಾಯಿತು!! ಹಳ್ಳಿಕಾರ್ ಎತ್ತುಗಳ ಖದರೇ ಹಾಗೆ. ಅದನ್ನು ತನ್ನ ದನದ ಕೊಟ್ಟಿಗೆಯಲ್ಲಿ ಕಟ್ಟಿದವನು ಲಕ್ಷಾಧೀಶ. ಅಂದಹಾಗೆ. ಈ ಎತ್ತು ಇದುವರೆಗೆ ಶ್ರೀರಂಗಪಟ್ಟಣಕ್ಕೆ (Srirangapatna) ಹತ್ತಿರದ ಪಾಲಹಳ್ಳಿ ಗ್ರಾಮದ ನಿವಾಸಿ ವಿನೋದ (Vinod) ಎನ್ನುವವರ ಒಡೆತನದಲ್ಲಿತ್ತು. ಕಳೆದ ಭಾನುವಾರ ವಿನೋದ ‘ಕಿಂಗ್ ಗಗನ್’ ಅನ್ನು ಚಿಕ್ಕಮಗಳೂರು ಜಿಲ್ಲೆ ತೇಗೂರು ಗ್ರಾಮದ ಮಂಜುನಾಥ ಎನ್ನುವವರಿಗೆ ಮಾರಿದರು. ಸ್ಥಳದಲ್ಲೇ ಮಂಜುನಾಥ ಅವರು ವಿನೋದಗೆ ಹಣ ನೀಡುತ್ತಿರುವುದು ನಿಮಗೆ ವಿಡಿಯೋನಲ್ಲಿ ಕಾಣುತ್ತದೆ. ಖರೀದಿಯ ಮಾತುಕತೆ ನಡೆದು ಡೀಲ್ ಕುದುರಿದ ಬಳಿಕ ಮಂಜುನಾಥ ತಮ್ಮ ಹೆಮ್ಮೆಯ ಎತ್ತಿಗೆ ಹಾರ ಹಾಕಿ ಸನ್ಮಾನ ಕೂಡ ಮಾಡುತ್ತಾರೆ.
ವಿನೋದ ಹೇಳುವ ಹಾಗೆ, ‘ಕಿಂಗ್ ಗಗನ್’ ಅನ್ನು ಸುಮಾರು ಒಂದು ವರ್ಷದ ಹಿಂದೆ ರೂ. 4.5 ಲಕ್ಷಕ್ಕೆ ಖರೀದಿಸಿದ್ದರಂತೆ. ಈಗ ಅದನ್ನು ರೂ. 7.68 ಲಕ್ಷಕ್ಕೆ ಮಾರಿದ್ದಾರೆ.
ಮಂಡ್ಯ ಮತ್ತು ಬೇರೆ ಕಡೆ ನಡೆಯುವ ಎತ್ತಿನ ಗಾಡಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗೆಲ್ಲ ಪ್ರಥಮ ಇಲ್ಲವೇ ದ್ವಿತೀಯ ಸ್ಥಾನ ಪಡೆಯುವುದು ಖಚಿತವಾಗಿತ್ತಂತೆ. 80 ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗಿಯಾಗಿರುವ ‘ಕಿಂಗ್ ಗಗನ್’ 70 ಸಲ ಮೊದಲ ಮತ್ತು ಎರಡನೇ ಸ್ಥಾನ ಪಡೆದಿದೆ ಎಂದು ವಿನೋದ ಹೇಳುತ್ತಾರೆ.
ವಿನೋದ ಬಳಿ ‘ಅಪ್ಪಣ್ಣ’ ಹೆಸರಿನ ಮತ್ತೊಂದು ಹಳ್ಳಕಾರ್ ತಳಿಯ ರೇಸ್ ಎತ್ತು ಇದೆಯಂತೆ. ಅದು ಏನಿಲ್ಲವೆಂದರೂ ರೂ. 7 ಲಕ್ಷಕ್ಕೆ ಮಾರಾಟವಾಗುತ್ತದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ಶಮಂತ್ ಬ್ರೋ ಗೌಡ ಖರೀದಿಸಿದ ಐಷಾರಾಮಿ ಕಾರು ರೈಡ್ ಮಾಡಿದ ಕಿಚ್ಚ ಸುದೀಪ್; ವೈರಲ್ ಆಯ್ತು ವಿಡಿಯೋ