ನಮಗೆ ಹಿಜಬ್ ಕೂಡ ಮುಖ್ಯ ಶಿಕ್ಷಣ ಕೂಡ ಅಷ್ಟೇ ಮುಖ್ಯ: ಉಡುಪಿಯಲ್ಲಿ ಹಿಜಬ್​ಗಾಗಿ ತರಗತಿ ಬಹಿಷ್ಕಾರ ಮುಂದುವರಿಕೆ

ನಮಗೆ ಹಿಜಬ್ ಕೂಡ ಮುಖ್ಯ ಶಿಕ್ಷಣ ಕೂಡ ಅಷ್ಟೇ ಮುಖ್ಯ: ಉಡುಪಿಯಲ್ಲಿ ಹಿಜಬ್​ಗಾಗಿ ತರಗತಿ ಬಹಿಷ್ಕಾರ ಮುಂದುವರಿಕೆ
ಪ್ರಾತಿನಿಧಿಕ ಚಿತ್ರ

ಉಡುಪಿಯಲ್ಲಿ ಹಿಜಬ್ ಗಾಗಿ ತರಗತಿ ಬಹಿಷ್ಕಾರ ಮುಂದುವರೆದಿದೆ. ಹಿಜಬ್ ನಮ್ಮ ಧಾರ್ಮಿಕ ಹಕ್ಕು, ಹಿಜಬ್ ಧರಿಸಿ ತರಗತಿಯಲ್ಲಿ ಕುಳಿತು ಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಮುಸಲ್ಮಾನ ವಿದ್ಯಾರ್ಥಿನೀಯರಿಂದ ಪ್ರತಿಭಟನೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jan 20, 2022 | 4:00 PM

ಉಡುಪಿ: ಉಡುಪಿಯಲ್ಲಿ ಹಿಜಬ್ ಗಾಗಿ ತರಗತಿ ಬಹಿಷ್ಕಾರ ಮುಂದುವರೆದಿದೆ. ಹಿಜಬ್ ನಮ್ಮ ಧಾರ್ಮಿಕ ಹಕ್ಕು, ಹಿಜಬ್ ಧರಿಸಿ ತರಗತಿಯಲ್ಲಿ ಕುಳಿತು ಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಪ್ರತಿಭಟನಾನಿರತ ಮುಸಲ್ಮಾನ ವಿದ್ಯಾರ್ಥಿನೀಯರು ಹೇಳಿದರು. ನಗರದ ಮಹಿಳಾ ಸರ್ಕಾರಿ ಪಿಯು ಕಾಲೇಜ್ ಮುಂದೆ ಪ್ಲೇ ಕಾರ್ಡ್ ಹಿಡಿದು ವಿದ್ಯಾರ್ಥಿನೀಯರು ಪ್ರತಿಭಟಿಸಿದರು.

ಮಹಿಳಾ ಕಾಲೇಜ್ ಆದರೂ ಪುರುಷ ಪ್ರಾಧ್ಯಾಪಕರು ಇದ್ದಾರೆ. ಕಾರ್ಯಕ್ರಮ ನಡೆಯುವ ವೇಳೆ ಹಲವಾರು ಪುರುಷ ಅತಿಥಿಗಳು ಕಾಲೇಜಿಗೆ ಬರುತ್ತಾರೆ. ನಾವು ಯಾರ ಮುಂದೆ ಹಿಜಬ್ ಇಲ್ಲದೆ ಓಡಾಡುವ ಹಾಗಿಲ್ಲ. ನಮಗೆ ಹಿಜಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳುವ ಅವಕಾಶ ಮಾಡಿಕೊಡಿ. ನಮಗೆ ಹಿಜಬ್ ಕೂಡ ಮುಖ್ಯ ಶಿಕ್ಷಣ ಕೂಡ ಅಷ್ಟೇ ಮುಖ್ಯ ಮುಖ್ಯವೆಂದು ಪ್ರತಿಭಟನಾನಿರತ ಮುಸಲ್ಮಾನ ವಿದ್ಯಾರ್ಥಿನೀಯರು ಹೇಳುತ್ತಿದ್ದಾರೆ.

ಹಿಜಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳುವ ಅವಕಾಶ ಮಾಡಿಕೊಡಿ ಎಂದು ಮುಸ್ಲಿಂ ಸಮುದಾಯದ 8ಮಂದಿ ವಿದ್ಯಾರ್ಥಿನಿಯರಿಂದ ತರಗತಿ ಬಹಿಷ್ಕಾರ ನಡೆದಿದೆ. ಡಿಸೆಂಬರ್ 27ರಿಂದ ವಿದ್ಯಾರ್ಥಿನೀಯರು ಹೊರಗೆ ಉಳಿದಿದ್ದಾರೆ. ಹಿಜಬ್ ಧರಿಸಿ ಕ್ಲಾಸ್ ಗೆ ಬರಲು ಅವಕಾಶ ನೀಡದ ಕಾಲೇಜು ಸಮವಸ್ತ್ರ ಪಾಲಿಸುವಂತೆ ಪಟ್ಟು ಹಿಡಿದಿದೆ. ಇನ್ನೂ ಈ ಕುರಿತಾಗಿ ಕಾಲೇಜಿನ ಪ್ರಾಂಶುಪಾಲರು ಪದವಿಪೂರ್ವ ಬೋರ್ಡ್ ಗೆ ಪತ್ರ ಬರೆದಿದ್ದು, ಪಿಯು ಬೋರ್ಡ್ ನಿರ್ದೇಶಕರ ಉತ್ತರಕ್ಕಾಗಿ  ಇಡೀ ಆಡಳಿತ ಮಂಡಳಿ ಕಾಯುತ್ತಿದೆ.

ಇದನ್ನು ಓದಿ:

ಮಂಡ್ಯ ನಗರದ ಪೊಲೀಸರಿಂದ ಅಮಾನವೀಯ ನಡೆ; ಮಹಿಳೆ ಅಸ್ವಸ್ಥ

ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ; ವಿಚಾರಣೆ ಜನವರಿ 31ಕ್ಕೆ‌ ಮುಂದೂಡಿದ ಹೈಕೋರ್ಟ್

Follow us on

Related Stories

Most Read Stories

Click on your DTH Provider to Add TV9 Kannada