ಮಂಡ್ಯ ನಗರದ ಪೊಲೀಸರಿಂದ ಅಮಾನವೀಯ ನಡೆ; ಮಹಿಳೆ ಅಸ್ವಸ್ಥ
ಮಂಡ್ಯ ನಗರದ ಪೊಲೀಸರಿಂದ ಅಮಾನವೀಯ ನಡೆಯೊಂದು ನಡೆದಿದೆ. ದಂಡ ಕಟ್ಟುತ್ತೇನೆ ಎಂದು ಯುವಕ ಹೇಳಿದರು ಕೂಡ ಪೋಲಿಸರು ಬೈಕ್ ಕೀ ಕಿತ್ತುಕೊಂಡಿದ್ದಾರೆ. ಈ ಮಧ್ಯೆ ಯುವಕನ ತಾಯಿ ಅಸ್ವಸ್ಥ.
ಮಂಡ್ಯ: ಮಂಡ್ಯ ನಗರದ ಪೊಲೀಸರಿಂದ ಅಮಾನವೀಯ ನಡೆಯೊಂದು ನಡೆದಿದೆ. ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ಈ ಘಟನೆ ಸಂಭವಿಸಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗನೂರು ಯುವಕ ವಿನೋದ್ ತನ್ನ ತಾಯಿಯ ಜೊತೆ ಬೈಕ್ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ. ಹೆಲ್ಮೆಟ್ ಧರಿಸದ ಕಾರಣ ಮಾರ್ಗಮಧ್ಯ ಮಂಡ್ಯ ಪೊಲೀಸರು ಬೈಕ್ ತಡೆದಿದ್ದಾರೆ. ಎಷ್ಟೂ ಬೇಕಾದರು ದಂಡ ಕಟ್ಟುತ್ತೇನೆ ಎಂದು ಯುವಕ ಹೇಳಿದರು ಕೂಡ ಪೋಲಿಸರು ಬೈಕ್ ಕೀ ಕಿತ್ತುಕೊಂಡು, ಯುವಕ ವಿನೋದ್ ನನ್ನು ಸತಾಯಿಸಿದ್ದಾರೆ. ಈ ಮಧ್ಯೆ ಯುವಕನ ತಾಯಿ ಅಸ್ವಸ್ಥರಾಗಿದ್ದು, ಬೈಕ್ ಸವಾರ ಹಾಗು ಪೊಲೀಸ್ ನಡುವೆ ಮಾತಿನ ಚಕಮಕಿ ಉಂಟಾಗಿದೆ.
ಬೈಕ್ ಕೀ ಕಿತ್ತುಕೊಂಡು, ಕೀ ವಾಪಸ್ಸು ಕೊಡದ ಸತಾಯಿಸುತ್ತಿದ್ದಾರೆ ಎಂದು ಬೈಕ್ ಸವಾರ ವಿನೋದ್ ಆರೋಪಿಸಿದ್ದಾನೆ. ಈ ವೇಳೆ ಏಕವಚನದಲ್ಲೆ ಪೊಲೀಸನಿಗೆ ಯುವಕ ವಿನೋದ್ ತರಾಟೆ ತೆಗೆದುಕೊಂಡಿದ್ದಾನೆ. ಈ ವೇಳೆ ಬೈಕ್ ಹಿಂಬದಿ ಕುಳಿತಿದ್ದ ಯುವಕನ ತಾಯಿ ತಲೆ ಸುತ್ತಿ ಅಸ್ವಸ್ಥಗೊಂಡಿದ್ದು, ಯುವಕ ವಿನೋದ್ ಬೈಕ್ ಬಿಟ್ಟು ತನ್ನ ತಾಯಿಯನ್ನು ಆಟೋದಲ್ಲಿ ಆಸ್ಪತ್ರಗೆ ಕರೆದುಕೊಂಡು ಹೋದ ಎನ್ನಲಾಗುತ್ತಿದೆ. ಘಟನೆಯ ವಿಡಿಯೋವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿಯುವ ಜೊತೆಗೆ ಪೊಲೀಸನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:
ವಿಮಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ: ಫೋಟೋ ವೈರಲ್
ಧನುಷ್-ಐಶ್ವರ್ಯಾ ನಡುವೆ ಹೈದರಾಬಾದ್ನಲ್ಲಿ ನಡೆದಿದ್ದೇನು? ಇಲ್ಲಿದೆ ಇನ್ಸೈಡ್ ಮಾಹಿತಿ