ಆ ಕಂಬಗಳನ್ನು ನೋಡಿದರೆ ಹಿಂದೂಗಳು ಪ್ರಚೋದನೆಗೊಳಗಾಗುತ್ತಾರೆ: ಕಾಳಿ ಸ್ವಾಮಿ
ಸರ್ಕಾರ ದಯವಿಟ್ಟು ಮುಂಬರುವ ಹನುಮ ಜಯಂತಿ ಒಳಗಾಗಿ ಮಸೀದಿ ಬಾಗಿಲು ಹಾಕಿಸಬೇಕು. ಮುಂದೆ ಆಗುವಂತಹ ಅನಾಹುತಗಳ ಮಸೀದಿ ಬಂದ್ ಮಾಡಿಸಬೇಕು. ನಾನು ಹೋರಾಟಕ್ಕೆ ಶತ ಸಿದ್ಧ, ಶತ ಬದ್ಧ. ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ನನ್ನ ಮನಸ್ಸಿನ ಭಾವನೆಯನ್ನು ಹಂಚಿಕೊಂಡಿದ್ದೇನೆ ಎಂದು ಕಾಳಿ ಮಠದ ರಿಷಿಕುಮಾರ್ ಸ್ವಾಮೀಜಿ ತಿಳಿಸಿದ್ದಾರೆ.
ಮಂಡ್ಯ: ಆ ಕಂಬಗಳನ್ನು ನೋಡಿದರೆ ಪ್ರತಿಯೊಬ್ಬ ಹಿಂದು ಮಗುವೂ, ಪ್ರತಿಯೊಬ್ಬ ಹಿಂದೂವು ಪ್ರಚೋದನೆಗೆ ಒಳಪಡುತ್ತಾನೆ. ಕಂಬದ ಸಿಂಬಿಗಳು, ನಾಗ ಕಟ್ಟೆಗಳು, ನಾಗ ಬಂದುಗಳನ್ನು ನೋಡಿದರೆ ಪ್ರಚೋದನೆಗೆ ಒಳಗಾಗುತ್ತಾರೆ. ನಾನು ಒಬ್ಬ ಯತಿ, ಇನ್ನೆಷ್ಟು ಪ್ರಚೋದನೆಗೆ ಹೋಗಬಹುದು? ನನಗೆ ಕಾನೂನಿನ ಮೇಲೆ ಅಪಾರ ನಂಬಿಕೆ ಇದೆ. ಬಾಬ್ರಿ ಮಸೀದಿ (Babri Masjid) ರಾಮಮಂದಿರ ಆಗೋದಕ್ಕೆ ಕಾನೂನು ಕಾರಣ. ಕೋರ್ಟ್ನಲ್ಲಿ(Court) ನನಗೆ ನ್ಯಾಯ ಸಿಗಲಿದೆ ಎಂದು ಮಂಡ್ಯದಲ್ಲಿ ಕಾಳಿ ಮಠದ ಕಾಳಿ ಸ್ವಾಮೀಜಿ (Kali Swamy) ಹೇಳಿಕೆ ನೀಡಿದ್ದಾರೆ.
ಬಾಬರಿ ಮಸೀದಿ ಉತ್ಖನನ ಮಾಡಿ ಕೆಳಗಿರುವ ಕಂಬ ತೆಗೆದು ಇಲ್ಲಿ ದೇವಸ್ಥಾನ ಇತ್ತು ಅಂತ ಹೇಳಬೇಕಾಯಿತು. ಆದರೆ ಶ್ರೀರಂಗಪಟ್ಟಣ ಮಸೀದಿಯ ದಾಖಲೆ ತರಿಸಿಕೊಂಡರೆ ಸಾಕು ದೇವಾಲಯ ಅಂತ ಗೊತ್ತಾಗುತ್ತದೆ. ಸರ್ಕಾರ ದಯವಿಟ್ಟು ಮುಂಬರುವ ಹನುಮ ಜಯಂತಿ ಒಳಗಾಗಿ ಮಸೀದಿ ಬಾಗಿಲು ಹಾಕಿಸಬೇಕು. ಮುಂದೆ ಆಗುವಂತಹ ಅನಾಹುತಗಳ ಮಸೀದಿ ಬಂದ್ ಮಾಡಿಸಬೇಕು. ನಾನು ಹೋರಾಟಕ್ಕೆ ಶತ ಸಿದ್ಧ, ಶತ ಬದ್ಧ. ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ನನ್ನ ಮನಸ್ಸಿನ ಭಾವನೆಯನ್ನು ಹಂಚಿಕೊಂಡಿದ್ದೇನೆ ಎಂದು ಕಾಳಿ ಮಠದ ರಿಷಿಕುಮಾರ್ ಸ್ವಾಮೀಜಿ ತಿಳಿಸಿದ್ದಾರೆ.
ಜೈಲಿನಿಂದ ಹೊರ ಬಂದ ಕಾಳಿ ಸ್ವಾಮಿ
ವಿವಾದಾತ್ಮಕ ಹೇಳಿಕೆ ಸಲುವಾಗಿ ಬಂಧನಕ್ಕೀಡಾಗಿರುವ ರಿಷಿಕುಮಾರ್ ಸ್ವಾಮೀಜಿ ಅವರು ಜೈಲಿನಿಂದ ಹೊರ ಬಂದಿದ್ದಾರೆ. ಅದ್ಧೂರಿ ಸ್ವಾಗತದ ಮೂಲಕ ಕಾಳಿ ಸ್ವಾಮೀಜಿಯನ್ನು ಬರ ಮಾಡಿಕೊಂಡಿದ್ದಾರೆ. ಹಾರ ಹಾಕಿ, ಕಾಳಿ ಸ್ವಾಮಿ ಪರ ಘೋಷಣೆ ಕೂಗಿ ಸ್ವಾಗತ ಮಾಡಿಕೊಳ್ಳಲಾಗಿದೆ. ಈ ವೇಳೆ ಜೈಲು ಸಿಬ್ಬಂದಿ ಹಾಗೂ ಸ್ವಾಮೀಜಿ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ. ಘೋಷಣೆ ಕೂಗದಂತೆ ಜೈಲು ಸಿಬ್ಬಂದಿ ತಡೆದಿದ್ದಾರೆ. ಕುತಂತ್ರದಿಂದ ಸ್ವಾಮೀಜಿಯನ್ನು ಬಂಧಿಸಿರುವುದಾಗಿ ಎಂದು ಆರೋಪಿಸಿ ಸ್ವಾಮೀಜಿ ಬೆಂಬಲಿಗರು ಘೋಷಣೆ ಕೂಗಿದ್ದಾರೆ.
ವಿವಾದಾತ್ಮಕ ಹೇಳಿಕೆ
ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವುವಂತೆ ಕಾಳಿ ಸ್ವಾಮೀಜಿ ಬಿಡುಗಡೆ ಮಾಡಿದ್ದ ವಿವಾದಾತ್ಮಕ ವಿಡಿಯೋ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಹಾನಿ ಆಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಿಷಿ ಕುಮಾರ್ ಸ್ವಾಮೀಜಿ ಮಸೀದಿ ಮುಂದೆ ನಿಂತು ವಿಡಿಯೋ ಮಾಡಿ ಹಿಂದೂಗಳಿಗೆ ಕರೆ ನೀಡಿದ್ದರು. ಶ್ರೀರಂಗಪಟ್ಟಣದ ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರೆ. ಇದು ಮೊದಲು ದೇವಾಲಯವಿತ್ತು. ಇದನ್ನು ಕೆಡವಿದ್ದಾರೆ ಅಂತಾ ಆರೋಪಿಸಿ, ಇದನ್ನು ಆದಷ್ಟು ಬೇಗ ಬಾಬ್ರಿ ಮಸೀದಿ ರೀತಿಯಲ್ಲಿ ಕೆಡವಬೇಕೆಂದು ರಿಷಿ ಕುಮಾರ್ ಸ್ವಾಮೀಜಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಹಿಂದೂಗಳು ಅತಿ ಬೇಗ ಜಾಗೃತರಾಗಿ ಹೊಡೆಯಬೇಕಾದ ಮಸೀದಿಯಲ್ಲಿ ಇದೂ ಒಂದು ಎಂದು ವಿಡಿಯೋ ಮಾಡಿದ್ದರು. ಇಂದು ಬೆಳಿಗನ ಜಾವ 4-30ಕ್ಕೆ ಚಿಕ್ಕಮಗಳೂರು ಮಠದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:
ಕಾಳಿ ಸ್ವಾಮಿ ವಿರುದ್ಧದ ಜಾಮೀನು ಅರ್ಜಿ ಮುಂದೂಡಿಕೆ; ನಾಳೆಯೂ ಜಾಮೀನು ನಿರಾಕರಿಸಿದ್ರೆ 14 ದಿನ ಜೈಲು ಫಿಕ್ಸ್
Published On - 9:15 pm, Wed, 19 January 22