ಕಾಳಿ ಸ್ವಾಮಿ ವಿರುದ್ಧದ ಜಾಮೀನು ಅರ್ಜಿ ಮುಂದೂಡಿಕೆ; ನಾಳೆಯೂ ಜಾಮೀನು ನಿರಾಕರಿಸಿದ್ರೆ 14 ದಿನ ಜೈಲು ಫಿಕ್ಸ್

ಆಟೋದಲ್ಲಿ ಮಂಡ್ಯ ಜೈಲಿಗೆ ಕಾಳಿ ಸ್ವಾಮಿಯನ್ನು ಕರೆತಂದಿದ್ದಾರೆ. ಮಂಡ್ಯ ಜೆಎಂಎಫ್​ಸಿ ಕೋರ್ಟ್ ನಾಳೆಗೆ ಆದೇಶ ಕಾಯ್ದಿರಿಸಿದೆ. ಒಂದು ವೇಳೆ ನಾಳೆಯೂ ಜಾಮೀನು ನಿರಾಕರಿಸಿದರೆ 14 ದಿನ ಜೈಲು ವಾಸ ಅನುಭವಿಸಬೇಕಾಗುತ್ತದೆ.

ಕಾಳಿ ಸ್ವಾಮಿ ವಿರುದ್ಧದ ಜಾಮೀನು ಅರ್ಜಿ ಮುಂದೂಡಿಕೆ; ನಾಳೆಯೂ ಜಾಮೀನು ನಿರಾಕರಿಸಿದ್ರೆ 14 ದಿನ ಜೈಲು ಫಿಕ್ಸ್
ಕಾಳಿ ಮಠದ ರಿಷಿ ಕುಮಾರ ಸ್ವಾಮೀಜಿ
Follow us
TV9 Web
| Updated By: preethi shettigar

Updated on:Jan 18, 2022 | 8:22 PM

ಮಂಡ್ಯ: ಕೋಮುಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆ ಆರೋಪದಡಿ ಇಂದು ಬೆಳಗ್ಗೆ ಕಾಳಿ ಸ್ವಾಮಿಯನ್ನು (Kali swami) ವಶಕ್ಕೆ ಪೊಲೀಸರು ಪಡೆದಿದ್ದರು. ಇಂದು ಚಿಕ್ಕಮಗಳೂರಿನ ಕಾಳಿಕಾಮಠದ ಋಷಿಕುಮಾರ ಸ್ವಾಮೀಜಿ ವಿರುದ್ಧದ ಜಾಮೀನು ಅರ್ಜಿ (Bail application) ಮುಂದೂಡಿಕೆ ಹಿನ್ನೆಲೆ ಕಾಳಿ ಸ್ವಾಮಿಯನ್ನು ಪೊಲೀಸ್​ ಸಿಬ್ಬಂದಿ ಜೈಲಿಗೆ ಕರೆತಂದಿದ್ದಾರೆ. ಆಟೋದಲ್ಲಿ ಮಂಡ್ಯ ಜೈಲಿಗೆ (Jail) ಕಾಳಿ ಸ್ವಾಮಿಯನ್ನು ಕರೆತಂದಿದ್ದಾರೆ. ಮಂಡ್ಯ ಜೆಎಂಎಫ್​ಸಿ ಕೋರ್ಟ್ ನಾಳೆಗೆ ಆದೇಶ ಕಾಯ್ದಿರಿಸಿದೆ. ಒಂದು ವೇಳೆ ನಾಳೆಯೂ ಜಾಮೀನು ನಿರಾಕರಿಸಿದರೆ 14 ದಿನ ಜೈಲು ವಾಸ ಅನುಭವಿಸಬೇಕಾಗುತ್ತದೆ. ಜೈಲಿನ ಒಳಗೆ ಕಾಲಿಡುವ ಮೊದಲು ಮುಖಕ್ಕೆ ಕಾವಿ ಬಟ್ಟೆಯನ್ನು ಕಾಳಿ ಸ್ವಾಮಿ ಸುತ್ತಿಕೊಂಡಿದ್ದಾರೆ.

2 ಗಂಟೆಯಿಂದ ಕೋರ್ಟ್​ನಲ್ಲೇ ಕುಳಿತಿದ್ದ ಕಾಳಿ ಸ್ವಾಮಿ

ನ್ಯಾಯಾಧೀಶರು ವಾದ-ವಿವಾದ ಆಲಿಸಿದರು. ಕಾಳಿ ಸ್ವಾಮಿ ಪರ ವಕೀಲರಿಂದ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಜಾಮೀನು ನಿರಾಕರಿಸುವಂತೆ ಸರ್ಕಾರಿ ಅಭಿಯೋಜಕರ ಮನವಿ ಮಾಡಿದ್ದಾರೆ. ಸಾಕ್ಷ್ಯ ನಾಶ, ಮತ್ತೆ ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಹೇಳಿಕೆ ಹಿನ್ನೆಲೆ ಜಾಮೀನು ನಿರಾಕರಿಸುವಂತೆ ಸರ್ಕಾರಿ ಅಭಿಯೋಜಕರು ಮನವಿ ಮಾಡಿದರು.

ಧಾರ್ಮಿಕ ಕಾರ್ಯ, ವಿವಿಧ ಸಮಾಜಸೇವಾ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಕಾಳಿ ಸ್ವಾಮಿ ಪರ ವಕೀಲರು ವಾದ ಮಾಡಿದ್ದಾರೆ. ಮೊಬೈಲ್ ವಶಕ್ಕೆ ಪಡೆದು, ಎಫ್​ಎಸ್​ಎಲ್​ಗೆ ಕಳಿಸಲು ಅನುಮತಿಗೆ ಸರ್ಕಾರಿ ಅಭಿಯೋಜಕರು ಮನವಿ ಸಲ್ಲಿಸಿದ್ದಾರೆ. ಇತ್ತ ತಪ್ಪೇನೂ ಮಾಡಿಲ್ಲ, ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ ಎಂದು ಸ್ವಾಮಿ ಪರ ವಕೀಲರು ವಾದ ಮಾಡಿದ್ದಾರೆ. ವಾದ-ವಿವಾದ ಆಲಿಸಿ, ಕೋರ್ಟ್ ತೀರ್ಪು ಕಾಯ್ದಿರಿಸಿದೆ.

ವಿವಾದಾತ್ಮಕ ಹೇಳಿಕೆ

ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವುವಂತೆ ಕಾಳಿ ಸ್ವಾಮೀಜಿ ಬಿಡುಗಡೆ ಮಾಡಿದ್ದ ವಿವಾದಾತ್ಮಕ ವಿಡಿಯೋ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಹಾನಿ ಆಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ಪೊಲೀಸರು  ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಿಷಿ ಕುಮಾರ್ ಸ್ವಾಮೀಜಿ ಮಸೀದಿ ಮುಂದೆ ನಿಂತು ವಿಡಿಯೋ ಮಾಡಿ ಹಿಂದೂಗಳಿಗೆ ಕರೆ ನೀಡಿದ್ದರು. ಶ್ರೀರಂಗಪಟ್ಟಣದ ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರೆ. ಇದು ಮೊದಲು ದೇವಾಲಯವಿತ್ತು. ಇದನ್ನು ಕೆಡವಿದ್ದಾರೆ ಅಂತಾ ಆರೋಪಿಸಿ, ಇದನ್ನು ಆದಷ್ಟು ಬೇಗ ಬಾಬ್ರಿ ಮಸೀದಿ ರೀತಿಯಲ್ಲಿ ಕೆಡವಬೇಕೆಂದು ರಿಷಿ ಕುಮಾರ್ ಸ್ವಾಮೀಜಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಹಿಂದೂಗಳು ಅತಿ ಬೇಗ ಜಾಗೃತರಾಗಿ ಹೊಡೆಯಬೇಕಾದ ಮಸೀದಿಯಲ್ಲಿ ಇದೂ ಒಂದು ಎಂದು ವಿಡಿಯೋ ಮಾಡಿದ್ದರು. ಇಂದು ಬೆಳಿಗನ ಜಾವ 4-30ಕ್ಕೆ ಚಿಕ್ಕಮಗಳೂರು ಮಠದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಕಾಳಿಸ್ವಾಮಿ ಬಿಡುಗಡೆಗೆ ಜಾಮೀನು ಅರ್ಜಿ, ಮನಸ್ಸಿನ ನೋವನ್ನ ಅವರು ಹೊರಹಾಕಿದ್ದಾರೆ: ವಕೀಲ ವಿವಾದಾತ್ಮಕ ಹೇಳಿಕೆ ಸಲುವಾಗಿ ಬಂಧನಕ್ಕೀಡಾಗಿರುವ ರಿಷಿಕುಮಾರ ಸ್ವಾಮೀಜಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ವಕೀಲ ಬಾಲರಾಜ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಬಾಲರಾಜ್ ಅವರು ರಿಷಿಕುಮಾರ ಸ್ವಾಮೀಜಿ ಪರ ವಕೀಲ.

ರಿಷಿಕುಮಾರ ಸ್ವಾಮೀಜಿಯವರ ಹೇಳಿಕೆ ವಿವಾದಾತ್ಮಕ ಅಲ್ಲ. ಮನಸ್ಸಿನ ನೋವನ್ನ ಅವರು ಹೊರಹಾಕಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಸಮನ್ವಿ ಅಸ್ತಿ ವಿಸರ್ಜನೆಗೆ ಸ್ವಾಮೀಜಿ ಶ್ರೀರಂಗಪಟ್ಟಣಕ್ಕೆ ಬಂದಿದ್ರು. ವಾಪಾಸ್ ತೆರಳುವ ವೇಳೆ ಮಸೀದಿಯಲ್ಲಿನ ದೇವಾಲಯದ ಕುರುಹು ಕಂಡು ಮನಸ್ಸಿನ ನೋವು ಹೊರಹಾಕಿದ್ದಾರೆ. ಕಾನೂನು ಹೋರಾಟದ ಮೂಲಕ ಮಸೀದಿ ಕೆಡವಿ ಮಂದಿರ ಕಟ್ಟುತ್ತೇವೆ ಎಂಬುದು ಅವರ ಹೇಳಿಕೆಯ ಭಾವ. ಒಡೆಯುವುದು ಎಂದರೆ ಕಾನೂನಾತ್ಮಕವಾಗಿ ಒಡೆಯುವುದು ಎಂಬುದು ಅವರ ಭಾವನೆ ಎಂದು ರಿಷಿಕುಮಾರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆಯನ್ನು ರಿಷಿಕುಮಾರ ಸ್ವಾಮೀಜಿ ಪರ ವಕೀಲ ಬಾಲರಾಜ್ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಶ್ರೀರಂಗಪಟ್ಟಣ ಮಸೀದಿ ಕೆಡವಬೇಕೆಂಬ ಹೇಳಿಕೆಗೆ ಈಗಲೂ ಬದ್ದ-ರಿಷಿಕುಮಾರ್ ಸ್ವಾಮಿ: ಕಾಳಿ ಸ್ವಾಮಿ ಬಿಡುಗಡೆಗೆ ಜಾಮೀನು ಅರ್ಜಿ

ಲಸಿಕೆ ಹಾಕಿಸಿಕೊಳ್ಳಲು ವ್ಯಕ್ತಿಯನ್ನು ಒತ್ತಾಯಿಸುವಂತಿಲ್ಲ: ಸುಪ್ರೀಂಕೋರ್ಟ್‌ಗೆ ಕೇಂದ್ರ

Published On - 7:37 pm, Tue, 18 January 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ