ಕಾನೂನು ಕುಣಿಕೆಯಿಂದ ಪಾರಾಗಲು ತನ್ನ ಸಾವಿನ ಕುರಿತೇ ಕತೆ ಕಟ್ಟಿ ಮತ್ತೊಂದು ದೇಶಕ್ಕೆ ಪಲಾಯನವಾದ ಅತ್ಯಾಚಾರ ಆರೋಪಿ
ಅಮೇರಿಕಾದ ವ್ಯಕ್ತಿಯೊಬ್ಬ ರೇಪ್ ಸಂಬಂಧಿತ ಪ್ರಕರಣದಲ್ಲಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ತನ್ನ ಸಾವಿನ ಕುರಿತೇ ಕತೆ ಕಟ್ಟಿದ್ದಾನೆ. ಇದೀಗ ಆರೋಪಿ ಸ್ಕಾಟ್ಲಂಡ್ನಲ್ಲಿ ಪತ್ತೆಯಾಗಿದ್ದಾನೆ.
ಅತ್ಯಾಚಾರ ಪ್ರಕರಣದ ಕಾನೂನು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸ್ವತಃ ತನ್ನ ಸಾವಿನ ಕುರಿತೇ ಸುಳ್ಳು ದಾಖಲೆಯನ್ನು ಸೃಷ್ಟಿಸಿದ್ದ ಅಮೇರಿಕಾ ಪ್ರಜೆಯೊಬ್ಬ ಇದೀಗ ಜೀವಂತವಾಗಿ ಬ್ರಿಟನ್ನಲ್ಲಿ ಸಿಕ್ಕಿಬಿದ್ದಿದ್ದಾನೆ. ನಿಕೋಲಸ್ ಅಲಾವರ್ಡಿಯನ್ ಎಂಬ ವ್ಯಕ್ತಿ ವಿಚಾರಣೆ ಎದುರಿಸುತ್ತಿದ್ದ. ಆತ ದೇಶ ಬಿಟ್ಟು ಪಲಾಯನಗೈದಿದ್ದ ಎಂದು ರೋಡ್ ಐಲ್ಯಾಂಡ್ನ ರಾಜ್ಯ ಪೊಲೀಸ್ ಮುಖ್ಯಸ್ಥ ರಾಬರ್ಟ್ ಕ್ರೀಮರ್ ಮಾಹಿತಿ ನೀಡಿದ್ದಾರೆ. ಆರೋಪಿ ನಿಕೋಲಸ್ ಸಿಕ್ಕಿಬೀಳಲು ಕಾರಣವಾಗಿದ್ದು ಕೊರೊನಾ ವೈರಸ್! 34 ವರ್ಷದ ಆತ ಸೋಂಕಿಗೆ ತುತ್ತಾಗಿ ಸ್ಕಾಂಟ್ಲಂಡ್ನ ಗ್ಲಾಸ್ಗೋದಲ್ಲಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ. ಆಗ ಆತನ ಗುರುತು ಬಹಿರಂಗವಾಗಿದ್ದು, ವಶಕ್ಕೆ ಪಡೆಯಲಾಗಿದೆ. ನಿಕೋಲಸ್ 2008ರಲ್ಲಿ ಮೈಸ್ಪೇಸಗ್ ಮೂಲಕ 21 ವರ್ಷದ ಮಹಿಳೆಯ ಪರಿಚಯ ಮಾಡಿಕೊಂಡಿದ್ದ. ನಂತರ ಅವರೀರ್ವರೂ ಜತೆಯಿದ್ದರು. ಆದರೆ ನಂತರ ಮಹಿಳೆ ಸಂಬಂಧವನ್ನು ಕೊನೆಗೊಳಿಸಿದ್ದರು. ನಿಕೋಲಸ್ ಅವರಿಂದ ಹಣವನ್ನೂ ಪಡೆದಿದ್ದ. ಅಲ್ಲದೇ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ.
ಉಟಾಹ್ ಕೌಂಟಿಯ ಅಟಾರ್ನಿಯಾಗಿರುವ ಡೇವಿಡ್ ಲೀವಿಟ್ ಅವರ ಕಚೇರಿ ನಿಕೋಲಸ್ ಪಲಾಯನದ ಕುರಿತು ಮಾಹಿತಿ ನೀಡಿದ್ದು, ನಿಕೋಲಸ್ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಓಹಿಯೋದ ಮುಖ್ಯಸ್ಥರು ಹಾಗೂ ಕಾನೂನು ಮುಖ್ಯಸ್ಥರಿಗೆ ತಾನು ಸತ್ತಿದ್ದೇನೆ ಎಂದು ವಿವಿಧ ಮೂಲಗಳಿಂದ ನಂಬಿಸಿದ್ದ. ಆದರೆ ಆತ ಸ್ಕಾಟ್ಲಾಂಡ್ನಲ್ಲಿ ಮತ್ತೊಂದು ಹೆಸರಿನಿಂದ ಅವಿತಿರುವುದು ತಿಳಿಯಿತು ಎಂದಿದೆ.
ಇದಲ್ಲದೇ ವಂಚನೆ ಪ್ರಕರಣದಲ್ಲೂ ನಿಕೋಲಸ್ ವಿರುದ್ಧ ಆರೋಪವಿದೆ. ಅವರ ಸಾಕುತಂದೆಯ ಕ್ರೆಡಿಟ್ ಕಾರ್ಡ್ಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ನಿಕೋಲಸ್ ಸುಮಾರು 2 ಲಕ್ಷ ಡಾಲರ್ ವಂಚಿಸಿದ್ದ ಎಂದು ಎಫ್ಬಿಐ ತಿಳಿಸಿದೆ. ನಿಕೋಲಸ್ ರೋಡ್ ಐಲ್ಯಾಂಡ್ನ ರಾಜ್ಯ ಸರ್ಕಾರದ ನಿರ್ಧಾರಗಳನ್ನೂ ಟೀಕಿಸುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ನಿಕೋಲಸ್ ಸಾವಿನ ಕುರಿತು ಆತನ ಪತ್ನಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು ತಿಳಿಸಿದ್ದರು. ಆತನನ್ನು ಸಂಸ್ಕಾರ ನಡೆಸಿ, ಅಸ್ತಿಯನ್ನು ಸಮುದ್ರದಲ್ಲಿ ಬಿಡಲಾಗಿದೆ ಎಂದು ಅವರು ಹೇಳಿದ್ದರು. ಇದೀಗ ನಿಕೋಲಸ್ ಸ್ಕಾಟ್ಲಂಡ್ನಲ್ಲಿ ಪತ್ತೆಯಾಗಿದ್ದು, ವಿಚಾರಣೆ ಮುಂದುವರೆಯಲಿದೆ.
ಇದನ್ನೂ ಓದಿ:
ಹೆಂಡತಿ ಜೊತೆ ಅನೈತಿಕ ಸಂಬಂಧ ಆರೋಪ; ಯುವಕನನ್ನು ಕೊಂದು ಪೊಲೀಸರ ಮುಂದೆ ಶರಣಾದ ವ್ಯಕ್ತಿ
ಬ್ರಿಟನ್: ಪ್ರಯಾಣಿಕರಿಗೆ ಕಡ್ಡಾಯ ಕೊವಿಡ್ ಟೆಸ್ಟ್ ನಿಯಮದಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ಸಂಪೂರ್ಣ ಮಾಹಿತಿ ಇಲ್ಲಿದೆ
Published On - 9:26 am, Sun, 16 January 22