Video ಅಫ್ಘಾನ್ ಸಂಗೀತಗಾರನ ಕಣ್ಮುಂದೆಯೇ ಸಂಗೀತವಾದ್ಯಗಳನ್ನು ಸುಟ್ಟುಹಾಕಿದ ತಾಲಿಬಾನ್ ಗುಂಪು

ಅಫ್ಘಾನಿಸ್ತಾನದ ಹಿರಿಯ ಪತ್ರಕರ್ತ ಅಬ್ದುಲ್ಹಕ್ ಒಮೆರಿ ಅವರು ಪೋಸ್ಟ್ ಮಾಡಿದ ವಿಡಿಯೊದಲ್ಲಿ ಬಂಧೂಕು ಹಿಡಿದ ವ್ಯಕ್ತಿಯೊಬ್ಬ ಕಣ್ಣೀರಿಡುವ ಸಂಗೀತಗಾರನನ್ನು ನೋಡಿ ನಗುತ್ತಿರುವುದನ್ನು ತೋರಿಸುತ್ತದೆ.

Video  ಅಫ್ಘಾನ್ ಸಂಗೀತಗಾರನ ಕಣ್ಮುಂದೆಯೇ ಸಂಗೀತವಾದ್ಯಗಳನ್ನು ಸುಟ್ಟುಹಾಕಿದ ತಾಲಿಬಾನ್ ಗುಂಪು
ಸಂಗೀತಗಾರನ ವಾದ್ಯಗಳನ್ನು ಸುಟ್ಟುಹಾಕಿದ ತಾಲಿಬಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 16, 2022 | 1:17 PM

ಕಾಬೂಲ್: ಅಫ್ಘಾನಿಸ್ತಾನದ (Afghanistan) ಪಕ್ತಿಯಾ ಪ್ರಾಂತ್ಯದಲ್ಲಿ ಸಂಗೀತಗಾರನ ಮುಂದೆಯೇ ತಾಲಿಬಾನ್ (Taliban) ಉಗ್ರರು ಸಂಗೀತ ವಾದ್ಯವನ್ನು ಸುಟ್ಟುಹಾಕಿದ ವಿಡಿಯೊವನ್ನು ಆಫ್ಘನ್ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ್ದಾರೆ. ವಾದ್ಯ ಉರಿಯುತ್ತಿದ್ದಂತೆ ಅದನ್ನು ನೋಡಿ ಸಂಗೀತಗಾರ ಕಣ್ಣೀರಿಡುತ್ತಿರುವುದು ವಿಡಿಯೊದಲ್ಲಿದೆ. ಅಫ್ಘಾನಿಸ್ತಾನದ ಹಿರಿಯ ಪತ್ರಕರ್ತ ಅಬ್ದುಲ್ಹಕ್ ಒಮೆರಿ(Abdulhaq Omeri) ಅವರು ಪೋಸ್ಟ್ ಮಾಡಿದ ವಿಡಿಯೊದಲ್ಲಿ ಬಂಧೂಕು ಹಿಡಿದ ವ್ಯಕ್ತಿಯೊಬ್ಬ ಕಣ್ಣೀರಿಡುವ ಸಂಗೀತಗಾರನನ್ನು ನೋಡಿ ನಗುತ್ತಿರುವುದನ್ನು ತೋರಿಸುತ್ತದೆ ಮತ್ತು ಇನ್ನೊಬ್ಬರು ಅವನ “ದಯನೀಯ ಸ್ಥಿತಿಯನ್ನು” ವಿಡಿಯೊ ಮಾಡುತ್ತಿರುವುದು ಕಾಣುತ್ತಿದೆ.  “ತಾಲಿಬಾನ್, ಸ್ಥಳೀಯ ಸಂಗೀತಗಾರ ಅಳುತ್ತಿದ್ದಂತೆ ಸಂಗೀತಗಾರನ ಸಂಗೀತ ವಾದ್ಯವನ್ನು ಸುಟ್ಟುಹಾಕಿದರು. ಈ ಘಟನೆಯು ಅಫ್ಘಾನಿಸ್ತಾನದ ಝಜೈಅರುಬ್ ಜಿಲ್ಲೆಯ ಪಕ್ತಿಯಾ ಪ್ರಾಂತ್ಯ ಸಂಭವಿಸಿದೆ ಎಂದು ಒಮೆರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಹಿಂದೆ ತಾಲಿಬಾನ್‌ಗಳು ವಾಹನಗಳಲ್ಲಿ ಸಂಗೀತವನ್ನು ನಿಷೇಧಿಸಿದ್ದರು. ಇದಲ್ಲದೆ ತಾಲಿಬಾನ್, ಮದುವೆಗಳಲ್ಲಿ ಲೈವ್ ಸಂಗೀತವನ್ನು ನಿಷೇಧಿಸಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಹಾಲ್‌ಗಳಲ್ಲಿ ಆಚರಿಸಲು ಆದೇಶಿಸಿದೆ ಎಂದು ಅಕ್ಟೋಬರ್‌ನಲ್ಲಿ ಅಫ್ಘಾನಿಸ್ತಾನದ ಹೋಟೆಲ್‌ನ ಮಾಲೀಕರು ಸ್ಪುಟ್ನಿಕ್‌ಗೆ ತಿಳಿಸಿದರು.

ಇತ್ತೀಚೆಗೆ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದ ಬಟ್ಟೆ ಅಂಗಡಿಗಳಲ್ಲಿ “ಮಾನೆಕ್ವಿನ್‌ಗಳ” ಶಿರಚ್ಛೇದಕ್ಕೆ ತಾಲಿಬಾನ್ ಆದೇಶಿಸಿದ್ದಾರೆ ಎಂದು ಆಫ್ಘನ್ ಮಾಧ್ಯಮವನ್ನು ಉಲ್ಲೇಖಿಸಿ ವರದಿ ಮಾಡಿದ ಸ್ಪುಟ್ನಿಕ್ ನ್ಯೂಸ್ ಏಜೆನ್ಸಿ ತಿಳಿಸಿದೆ. ಬಟ್ಟೆ ಅಂಗಡಿಗಳಲ್ಲಿ ಬಳಸುವ “ಮಾನೆಕ್ವಿನ್” ಗಳನ್ನು ಷರಿಯಾ ಕಾನೂನಿನ ಉಲ್ಲಂಘನೆ ಎಂದು ಹೇಳುತ್ತದೆ ತಾಲಿಬಾನ್. ಕಾಬೂಲ್‌ನ ಬೀದಿಗಳಲ್ಲಿ ಇಂತಹ ಘಟನೆಗಳು ಮತ್ತೆ ಕಾಣಿಸಿಕೊಳ್ಳಲಾರಂಭಿಸಿವೆ. ತಾಲಿಬಾನ್‌ನ ಸದ್ಗುಣ ಪ್ರಚಾರ ಮತ್ತು ಉಪಟಳ ತಡೆಗಟ್ಟುವಿಕೆ ಸಚಿವಾಲಯವು ಅಫ್ಘಾನಿಸ್ತಾನದ ಟಿವಿ ಚಾನೆಲ್‌ಗಳಿಗೆ ನಾಟಕಗಳು ಮತ್ತು ಸೋಪ್ ಒಪೆರಾಗಳಲ್ಲಿ ಮಹಿಳೆಯರನ್ನು ತೋರಿಸುವುದನ್ನು ನಿಲ್ಲಿಸುವಂತೆ ಕರೆ ನೀಡಿದ್ದು, ಧಾರ್ಮಿಕ ಮಾರ್ಗಸೂಚಿಗಳನ್ನು ಅನುಸರಿಸಲು ಹೇಳಿತ್ತು.

ಈ ಹೊಸ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲಾಗುವುದಿಲ್ಲ ಎಂದು ಗುಂಪು ಹೇಳಿದ್ದರೂ, ಈ ಗುಂಪು ತಮ್ಮ ಕಠಿಣವಾದ ಷರಿಯಾ ಕಾನೂನನ್ನು ದೇಶದಲ್ಲಿ ಜಾರಿಗೆ ತರಲು ಬದ್ಧವಾಗಿದೆ ಎಂದು ಇತಿಹಾಸವು ತೋರಿಸಿದೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.

20 ವರ್ಷಗಳ ನಂತರ ತಾಲಿಬಾನ್ ಮತ್ತೊಮ್ಮೆ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವುದರಿಂದ, ಭಯೋತ್ಪಾದಕ ಗುಂಪಿನ ಆಡಳಿತದಲ್ಲಿ ಅಫ್ಘಾನ್ ಮಹಿಳೆಯರು ಅನಿಶ್ಚಿತ ಭವಿಷ್ಯವನ್ನು ಎದುರಿಸುವ ಸಾಧ್ಯತೆಯಿದೆ ಎಂದು ತಜ್ಞರು ನಂಬಿದ್ದಾರೆ.

ಇದನ್ನೂ ಓದಿ: ಟೆಕ್ಸಾಸ್ ಯಹೂದಿ ಮಂದಿರದಲ್ಲಿದ್ದ ಒತ್ತೆಯಾಳುಗಳ ಬಿಡುಗಡೆ; ಅವರು ಸುರಕ್ಷಿತರಾಗಿದ್ದಾರೆ ಎಂದ ಗವರ್ನರ್ ಗ್ರೆಗ್ ಅಬಾಟ್

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ