Afghanistan Earthquake: ಅಫ್ಘಾನಿಸ್ತಾನದಲ್ಲಿ 5.1 ತೀವ್ರತೆಯ ಭೂಕಂಪ ದಾಖಲು
ಅಫ್ಘಾನಿಸ್ತಾನ-ತಜಿಕಿಸ್ತಾನ್ ಗಡಿಯಲ್ಲಿ ಇಂದು (ಶನಿವಾರ) ಸಂಜೆ 6.45ಕ್ಕೆ 5.1 ತೀವ್ರತೆಯ ಭೂಕಂಪನದ ಅನುಭವವಾಗಿದೆ.
ಕಾಬೂಲ್: ಅಫ್ಘಾನಿಸ್ತಾನ-ತಜಕಿಸ್ತಾನ ಗಡಿಯಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 5.1ರಷ್ಟು ದಾಖಲಾಗಿದೆ. ಅಫ್ಘಾನಿಸ್ತಾನ-ತಜಿಕಿಸ್ತಾನ್ ಗಡಿಯಲ್ಲಿ ಇಂದು (ಶನಿವಾರ) ಸಂಜೆ 6.45ಕ್ಕೆ 5.1 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಹಾಗೇ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ನಿಯಂತ್ರಣ ರೇಖೆಯ ಸುತ್ತಲಿನ ಇತರ ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.
Earthquake of Magnitude:5.1, Occurred on 01-01-2022, 18:45:24 IST, Lat: 36.53 & Long: 71.18, Depth: 204 Km ,Location: 84km SE of Fayzabad, Afghanistan for more information download the BhooKamp App https://t.co/oR9HB5c1la@Indiametdept @ndmaindia pic.twitter.com/1aXRd8ISyP
— National Center for Seismology (@NCS_Earthquake) January 1, 2022
ವರದಿಗಳ ಪ್ರಕಾರ, ಭೂಕಂಪವಾಗಿದ್ದರಿಂದ ಭಯಭೀತರಾದ ಜನರು ತಮ್ಮ ಮನೆಗಳಿಂದ ಓಡಿ ಬಂದಿದ್ದಾರೆ. ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಇದನ್ನೂ ಓದಿ: Earthquake in Afghanistan: ಅಫ್ಘಾನಿಸ್ತಾನದ ಫೈಜಾಬಾದ್ನಲ್ಲಿ 4.3 ತೀವ್ರತೆಯ ಭೂಕಂಪ