Vasant Panchami 2022: ವಿದ್ಯೆಯ ಅಧಿದೇವತೆ ತಾಯಿ ಸರಸ್ವತಿ ಆವಿರ್ಭವಿಸಿದ ದಿನ -ನಿಸರ್ಗ ವಸಂತೋತ್ಸವ ಇಂದಿನಿಂದ ಆರಂಭ

Spring season: ಉತ್ತರ ಭಾರತದಲ್ಲಿ ವಸಂತ ಪಂಚಮಿಯಂದು ಗಾಳಿಪಟಗಳನ್ನು ಹಾರಿಸುತ್ತಾರೆ. ಪಂಜಾಬಿನಲ್ಲಿ ಒಂದು ವಿಶ್ವ ಪ್ರಸಿದ್ಧ ಗಾಳಿಪಟ ಉತ್ಸವ ನಡೆಯುತ್ತದೆ. ಇದರಲ್ಲಿ ದೊಡ್ಡವರು ಚಿಕ್ಕವರೆಲ್ಲರೂ ಸೇರಿ ಗಾಳಿಪಟಗಳನ್ನು ಖರೀದಿಸಿ ಹಾರಿಸುತ್ತ ಆನಂದ ಪಡೆಯುತ್ತಾರೆ.

Vasant Panchami 2022: ವಿದ್ಯೆಯ ಅಧಿದೇವತೆ  ತಾಯಿ ಸರಸ್ವತಿ ಆವಿರ್ಭವಿಸಿದ ದಿನ -ನಿಸರ್ಗ ವಸಂತೋತ್ಸವ ಇಂದಿನಿಂದ ಆರಂಭ
Spring Season: ವಿದ್ಯೆಯ ಅಧಿದೇವತೆ ತಾಯಿ ಸರಸ್ವತಿ ಆವಿರ್ಭವಿಸಿದ ದಿನ -ನಿಸರ್ಗ ವಸಂತೋತ್ಸವ ಇಂದಿನಿಂದ ಆರಂಭ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 05, 2022 | 9:43 AM

ಮಾಘ ಶುಕ್ಲ ಪಂಚಮಿಯನ್ನು ವಸಂತ ಪಂಚಮಿ ಎಂದು ಕರೆಯುತ್ತಾರೆ. ಈ ದಿನದಿಂದ ಪ್ರಾರಂಭವಾಗುವ ವಸಂತೋತ್ಸವ ನಿಸರ್ಗದ ಉತ್ಸವವೇ ಆಗಿದೆ. ಯಾವಾಗಲೂ ಸುಂದರವಾಗಿ ಕಾಣಿಸುವ ನಿಸರ್ಗವು ವಸಂತ ಋತುವಿನಲ್ಲಿ ಬಣ್ಣಬಣ್ಣದ ಹೂವುಗಳಿಂದ ಇನ್ನಷ್ಟು ರಮಣೀಯವಾಗಿ (spring season) ಕಾಣಿಸುತ್ತದೆ. ಮಹರ್ಷಿ ವಾಲ್ಮೀಕಿಯವರು ರಾಮಾಯಣದಲ್ಲಿ ವಸಂತ ಋತುವಿನ ಅತೀ ಸುಂದರವಾದ ವರ್ಣನೆಯನ್ನು ನೀಡಿದ್ದಾರೆ. ಭಗವಾನ್ ಶ್ರೀಕೃಷ್ಣನು ‘ಋತುನಾಂ ಕುಸುಮಾಕರ’ ಎಂದು ವಸಂತ ಋತುವಿಗೆ ‘ಋತುರಾಜ’ (vasantotsava) ಎಂದು ಬಿರುದನ್ನಿತ್ತಿದ್ದಾನೆ (Vasant Panchami 2022).

ಯಾವಾಗಲೂ ಮನೋಹರವಾಗಿರುವ ನಿಸರ್ಗವು ವಸಂತ ಋತುವಿನಲ್ಲಿ ಮನಸ್ಸಿಗೆ ಇನ್ನಷ್ಟು ಮುದ ನೀಡುತ್ತದೆ. ಅತುಲನೀಯ ಸೌಂದರ್ಯದಿಂದ ನಿಸರ್ಗವು ನಮ್ಮೆಲ್ಲರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಮನುಷ್ಯರಲ್ಲಿ ಈ ಸೌಂದರ್ಯವನ್ನು ಅವಲೋಕಿಸುವ ಸಮಯ ಇರಬೇಕು! ಮನುಷ್ಯನ ಕಷ್ಟಗಳನ್ನು ಕ್ಷಣ ಮಾತ್ರದಲ್ಲಿ ಮರೆಸುವ ಅಪೂರ್ವ ಗಾರುಡಿಗ ನಿಸರ್ಗ. ಇಂತಹ ನಿಸರ್ಗದ ಮಡಿಲಲ್ಲಿ ನಾವು ಹೋದರೆ ನಮಗೆ ಈಶ್ವರನ ಸಾಮೀಪ್ಯದ ಅನುಭವವಾಗುತ್ತದೆ.

ಉತ್ತರ ಭಾರತದಲ್ಲಿ ವಸಂತ ಪಂಚಮಿಯಂದು ಗಾಳಿಪಟಗಳನ್ನು ಹಾರಿಸುತ್ತಾರೆ. ಪಂಜಾಬಿನಲ್ಲಿ ಒಂದು ವಿಶ್ವ ಪ್ರಸಿದ್ಧ ಗಾಳಿಪಟ ಉತ್ಸವ ನಡೆಯುತ್ತದೆ. ಇದರಲ್ಲಿ ದೊಡ್ಡವರು ಚಿಕ್ಕವರೆಲ್ಲರೂ ಸೇರಿ ಗಾಳಿಪಟಗಳನ್ನು ಖರೀದಿಸಿ ಹಾರಿಸುತ್ತ ಆನಂದ ಪಡೆಯುತ್ತಾರೆ.

ವಸಂತ ಪಂಚಮಿಯಂದು ಸರಸ್ವತೀದೇವಿಯ ಪೂಜೆ: ಸರಸ್ವತೀದೇವಿಯು ವಿದ್ಯೆ, ಬುದ್ಧಿ, ಜ್ಞಾನ ಮತ್ತು ವಿವೇಕದ ಅಧಿದೇವತೆಯಾಗಿದ್ದಾಳೆ. ಬುದ್ಧಿ ಮತ್ತು ವಿವೇಕವೂ ಪ್ರಖರವಾಗಲು, ವಾಣಿಯು ಮಧುರ ಮತ್ತು ನಿರರ್ಗಳವಾಗಲು, ಜ್ಞಾನ ಸಾಧನೆಯಲ್ಲಿ ಉನ್ನತಿಯನ್ನು ಸಾಧಿಸಲು ನಾವು ಸರಸ್ವತೀದೇವಿಯ ಉಪಾಸನೆಯನ್ನು ಮಾಡುತ್ತೇವೆ.

ಈ ಬಾರಿ 2022ರಲ್ಲಿ ವಸಂತ ಪಂಚಮಿ ಮುಹೂರ್ತ ಹೀಗಿದೆ: ಶನಿವಾರ ಫೆಬ್ರವರಿ 5 – ಬೆಳಗ್ಗೆ 07:07 ರಿಂದ 12:35 ವರೆಗೆ ಅವಧಿ – 5 ಗಂಟೆ 28 ನಿಮಿಷ Vasant Panchami on Saturday, February 5, 2022 07:07 AM to 12:35 PM

ವಸಂತ ಪಂಚಮಿಯ ದಿನ ಬ್ರಹ್ಮದೇವರ ಮುಖದಿಂದ ಸರಸ್ವತೀದೇವಿಯು ಅವತರಿಸಿದಳು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇದರಿಂದ ಜಡ ಮತ್ತು ಚೇತನಕ್ಕೆ ವಾಣಿಯ ಸಾಮರ್ಥ್ಯ ದೊರೆಯಿತು. ಆದುದರಿಂದ ವಸಂತ ಪಂಚಮಿಯನ್ನು ‘ವಿದ್ಯಾ ಜಯಂತಿ’ ಎಂದೂ ಕರೆಯುತ್ತಾರೆ ಮತ್ತು ಈ ದಿನದಂದು ಸರಸ್ವತೀ ದೇವಿಯ ಉಪಾಸನೆಯನ್ನು ಮಾಡುವ ಸಂಪ್ರದಾಯವಿದೆ. ಭಗವದ್ಗೀತೆಯ 10ನೇ ಅಧ್ಯಾಯದ 35ನೇ ಶ್ಲೋಕದಲ್ಲಿ ಶ್ರೀಕೃಷ್ಣನು ವಸಂತ ಋತುವನ್ನು ‘ತನ್ನ ವಿಭೂತಿ’ ಎಂದು ಹೇಳುತ್ತಾನೆ. ‘ವಸಂತ ಋತು ಎಂದರೆ ನಾನೇ’ ಎಂದೂ ಹೇಳುತ್ತಾನೆ.

ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ನೆನಪಾಗುವುದಿಲ್ಲವೇ? ತಪ್ಪದೇ ಸರಸ್ವತಿ ಮಂತ್ರ ಪಠಿಸಿ! ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆಯಬೇಕಾದರೆ ಕಠಿಣ ಪರಿಶ್ರಮದೊಂದಿಗೆ ಸರಸ್ವತಿ ದೇವಿಯ ಆಶೀರ್ವಾದವೂ ಮುಖ್ಯವಾಗಿರುತ್ತದೆ. ನಿಮ್ಮ ಮಕ್ಕಳ ಉತ್ತಮ ಜ್ಞಾನಕ್ಕೆ ಯಾವ ಮಂತ್ರವನ್ನು ಪಠಿಸಬೇಕು ಗೊತ್ತಾ? ಅದುವೇ ಸರಸ್ವತಿ ಮಂತ್ರ… ಪರೀಕ್ಷೆ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ಭಯವಾಗುತ್ತದೆ. ಪರೀಕ್ಷೆಯಲ್ಲಿ ರಾತ್ರಿ ಹಗಲೆನ್ನದೇ ಓದಿದರೂ ಕೂಡ ಕೆಲವೊಮ್ಮೆ ಓದಿದ್ದು ನೆನಪಿರುವುದಿಲ್ಲ. ಪೋಷಕರಿಗೂ ಕೂಡ ತಮ್ಮ ಮಕ್ಕಳು ಉತ್ತಮ ಅಂಕ ಪಡೆಯಬೇಕೆನ್ನುವ ಆಸೆಯಿರುತ್ತದೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕಾದರೆ ಕೇವಲ ಕಠಿಣ ಪರಿಶ್ರಮ ಮಾತ್ರವಲ್ಲ, ದೇವರ ಆಶೀರ್ವಾದ ಕೂಡ ಇರಬೇಕು.

ಸರಸ್ವತಿ ಪೂಜಾ ವಿಧಾನ ಸರಸ್ವತಿಯನ್ನು ಹಿಂದೂ ಧರ್ಮದಲ್ಲಿ ಜ್ಞಾನ ದೇವತೆ, ವಿದ್ಯಾ ದೇವತೆಯೆಂದು ಕರೆಯಲಾಗುತ್ತದೆ. ಸರಸ್ವತಿಯನ್ನು ಪೂಜಿಸುವುದರಿಂದ ಏಕಾಗ್ರತೆ, ಜ್ಞಾನ, ಜ್ಞಾಪಕ ಶಕ್ತಿಯು ಹೆಚ್ಚಾಗುತ್ತದೆ. ಸರಸ್ವತಿಯ ಆಶೀರ್ವಾದವನ್ನು ಪಡೆಯಲು ಸರಳವಾದ ಮಂತ್ರಗಳು ಇಲ್ಲಿವೆ. ಇದನ್ನು ಪಠಿಸಲು ಹೆಚ್ಚು ಸಮಯದ ಅವಶ್ಯಕತೆ ಕೂಡ ಇರುವುದಿಲ್ಲ!

ಸರಸ್ವತಿಯನ್ನು ಪ್ರತಿನಿತ್ಯ ಹೀಗೆ ಪೂಜಿಸಿ ಪ್ರತಿದಿನ ಬೆಳಗ್ಗೆ ಎದ್ದಾಕ್ಷಣ ಸ್ನಾನ ಮಾಡಿ, ಸರಸ್ವತಿ ದೇವಿಗೆ ಶ್ರೀಗಂಧ, ಅಕ್ಷತೆ, ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಿ. ಧೂಪ – ದೀಪಗಳನ್ನು ಸರಸ್ವತಿ ದೇವಿಗೆ ಬೆಳಗಿ. ನಂತರ ಕೆಲವೊಂದು ತಿನ್ನಬಹುದಾದ ಸಿಹಿ ವಸ್ತುಗಳನ್ನು ದೇವಿಗೆ ಅರ್ಪಿಸಿ. ಪೂಜೆಯ ವೇಳೆ ಈ ಕೆಳಗಿನ ಮಂತ್ರಗಳನ್ನು ಪಠಿಸಿ. ಇದರಿಂದ ನಿಮ್ಮ ಜ್ಞಾಪಕ ಶಕ್ತಿ, ಏಕಾಗ್ರತೆ ಹೆಚ್ಚಾಗುತ್ತದೆ.

ಮುಂಜಾನೆಯಿಂದ ಸಂಜೆಯವರೆಗೆ

1) ನಾವು ದೇವಿಯ ಬಳಿ ಏನನ್ನಾದರೂ ಕೇಳುವ ಮುನ್ನ ಆಕೆಗೆ ಧನ್ಯವಾದವನ್ನು ಸಲ್ಲಿಸಿ: ಓಂ ಸರಸ್ವತ್ಯೈ ಚ ವಿದ್ಮಹೇ | ಬ್ರಹ್ಮಪತ್ನ್ಯೈ ಚ ಧೀಮಹೀ | ತನ್ನೋ ದೇವಿ ಪ್ರಚೋದಯಾತ್‌ |

2) ಸರಸ್ವತಿಯ ಗಮನವನ್ನು ಸೆಳೆಯಲು ಬೀಜ ಮಂತ್ರವನ್ನು ಪಠಿಸಿ: || ಓಂ ಐಂ ಸರಸ್ವತ್ಯೈ ನಮಃ ||

3) ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಈ ಮಂತ್ರವನ್ನು ಪಠಿಸಿ: ಸರಸ್ವತಿ ನಮಸ್ತುಭ್ಯಂ || ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||

4) ಅಜ್ಞಾನವನ್ನು ದೂರಾಗಿಸಲು ಈ ಮಂತ್ರವನ್ನು ಪಠಿಸಿ: ಶುಕ್ಲಾಂ ಬ್ರಹ್ಮ ವಿಚಾರ ಸಾರ ಪರಮಾ ಆದ್ಯಾಂ ಜಗತ್ ವ್ಯಾಪಿನಿಂ ವೀಣಾ ಪುಸ್ತಕ ಧಾರಿಣೀಂ ಅಭಯದಾಂ ಜಾಡ್ಯಾಂಧಕಾರಾಪಹಾಂ ಹಸ್ತೇ ಸ್ಪಟಿಕ ಮಾಲಿಕಾಂ ವಿಧಾತೀಂ ಪದ್ಮಾಸನೇ ಸುಸ್ಥಿತಾಂ ವಂದೇ ತಾಂ ಜಗದೀಶ್ವರೀಂ ಭಗವತೀಂ ಬುದ್ಧಿ ಪ್ರದಾಂ ಶಾರದಾಂ.

5) ನೆನಪಿನ ಶಕ್ತಿಯನ್ನು ಹೆಚ್ಚಿಸಲು ಹಾಗೂ ಅದನ್ನು ಉಳಿಸಿಕೊಳ್ಳಲು ಈ ಮಂತ್ರವನ್ನು ಪಠಿಸಿ: ಸರಸ್ವತಿ ನಮಸ್ತುಭ್ಯಂ || ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||

6) ಜ್ಞಾನ, ಸಂಪತ್ತು ಮತ್ತು ಬುದ್ಧಿವಂತಿಕೆಗಾಗಿ ಈ ಮಂತ್ರವನ್ನು ಪಠಿಸಿ: ಓಂ ಅರಂ ಮುಖ ಕಮಲ ವಾಸಿನಿ ಪಾಪಾತ್ಮಾಂ ಕ್ಷಯಂ ಕರಾರೀ ವದ ವದ ವಾಗ್ವಾದಿನೀ ಸರಸ್ವತಿ ಐಂಗ್‌ ಹ್ರೀಂಗ್‌ ನಮಃ ಸ್ವಾಹಾ |

ಈ ಮಂತ್ರಗಳನ್ನು ಪೂರ್ಣ ಭಕ್ತಿ ಮತ್ತು ತನ್ಮಯತೆಯಿಂದ ಜಪಿಸಿದರೆ ಸರಸ್ವತಿ ದೇವಿಯು ಸಂತೋಷಗೊಳ್ಳುತ್ತಾಳೆ. ಆದರೆ ಕಠಿಣ ಪರಿಶ್ರಮ ಯಾವಾಗಲೂ ಯಶಸ್ಸಿನ ಕೀಲಿಯಾಗಿದೆ ಆದ್ದರಿಂದ ಕಠಿಣ ಪರಿಶ್ರಮದತ್ತ ಗಮನವಿರಲಿ.(ನಿತ್ಯಸತ್ಯ ಸತ್ಸಂಗ್ -ಸಂಗ್ರಹ)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್