ಅಪಘಾತದಿಂದ ಚೇತರಿಸಿಕೊಂಡ ಬೆನ್ನಲ್ಲೇ ಸಾಯಿ ಧರಮ್​ ತೇಜ್​ ಕಡೆಯಿಂದ ಗುಡ್​ ನ್ಯೂಸ್​; ಮಾವನ ​ ಜತೆ ಸಿನಿಮಾ?

‘ವಿನೋಧ್ಯ ಸೀತಂ​’ ಚಿತ್ರವನ್ನು ನೋಡಿ ಪವನ್​ ಕಲ್ಯಾಣ್​ ಇಷ್ಟಪಟ್ಟಿದ್ದಾರೆ. ಅವರು ಈ ಚಿತ್ರವನ್ನು ರಿಮೇಕ್​ ಮಾಡೋಕೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಲೀಡ್​ ರೋಲ್​ನಲ್ಲಿ ಪವನ್​ ಕಲ್ಯಾಣ್​ ಕಾಣಿಸಿಕೊಂಡರೆ, ಎರಡನೇ ಮುಖ್ಯ ಪಾತ್ರದಲ್ಲಿ ಅವರ ಸೋದರ ಅಳಿಯ ಸಾಯಿ ಧರಮ್​ ತೇಜ್​ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಅಪಘಾತದಿಂದ ಚೇತರಿಸಿಕೊಂಡ ಬೆನ್ನಲ್ಲೇ ಸಾಯಿ ಧರಮ್​ ತೇಜ್​ ಕಡೆಯಿಂದ ಗುಡ್​ ನ್ಯೂಸ್​; ಮಾವನ ​ ಜತೆ ಸಿನಿಮಾ?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 05, 2022 | 6:30 PM

ಕಳೆದ ವರ್ಷ ಸೆಪ್ಟೆಂಬರ್​ 10ರಂದು ನಡೆದ ಬೈಕ್​ ಅಪಘಾತದಲ್ಲಿ ನಟ ಸಾಯಿ ಧರಮ್​ ತೇಜ್​ (Sai Dharam Tej) ಅವರು ತೀವ್ರವಾಗಿ ಗಾಯಗೊಂಡಿದ್ದರು. ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಮರಳಿದ್ದರು. ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಹೊಸಹೊಸ ಸಿನಿಮಾ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರ ಕಡೆಯಿಂದ ಗುಡ್​ನ್ಯೂಸ್​ ಒಂದು ಸಿಕ್ಕಿದೆ. ಸೋದರ ಮಾವ ಪವನ್​ ಕಲ್ಯಾಣ್ (Pawan Kalyan)​ ಜತೆಗೆ ಸಾಯಿ ಧರಮ್​ ತೇಜ್​ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ವಿಚಾರ ಕೇಳಿ ಸಾಯಿ ಧರಮ್​ ತೇಜ್​ ಫ್ಯಾನ್ಸ್​ ಹಾಗೂ ಪವನ್​ ಕಲ್ಯಾಣ್​ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ತಮಿಳು ಸಿನಿಮಾ ‘ವಿನೋಧ್ಯ ಸೀತಂ​’ ಚಿತ್ರ ಈಗ ತೆಲುಗಿಗೆ ರಿಮೇಕ್​ ಆಗುತ್ತಿದೆ. ಮೂಲ ಚಿತ್ರದಲ್ಲಿ ತಂಬಿ ರಾಮಯ್ಯ ಹಾಗೂ ಸಮುದ್ರಖಣಿ ನಟಿಸಿದ್ದರು. ಇದರ ರಿಮೇಕ್​ನಲ್ಲಿ ಪವನ್​ ಕಲ್ಯಾಣ್​ ಹಾಗೂ ಸಾಯಿ ಧರಮ್​ ತೇಜ್​ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ.

‘ವಿನೋಧ್ಯ ಸೀತಂ​’ ಚಿತ್ರವನ್ನು ನೋಡಿ ಪವನ್​ ಕಲ್ಯಾಣ್​ ಇಷ್ಟಪಟ್ಟಿದ್ದಾರೆ. ಅವರು ಈ ಚಿತ್ರವನ್ನು ರಿಮೇಕ್​ ಮಾಡೋಕೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಲೀಡ್​ ರೋಲ್​ನಲ್ಲಿ ಪವನ್​ ಕಲ್ಯಾಣ್​ ಕಾಣಿಸಿಕೊಂಡರೆ, ಎರಡನೇ ಮುಖ್ಯ ಪಾತ್ರದಲ್ಲಿ ಅವರ ಸೋದರ ಅಳಿಯ ಸಾಯಿ ಧರಮ್​ ತೇಜ್​ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಸಿನಿಮಾ ಸೆಟ್ಟೇರಿದ್ದೇ ಹೌದಾದಲ್ಲಿ ಪವನ್​ ಕಲ್ಯಾಣ್​ ಮತ್ತು ಸಾಯಿ ಧರಮ್​ ತೇಜ್​ ಒಟ್ಟಾಗಿ ನಟಿಸಲಿದ್ದಾರೆ.

ಸಮುದ್ರ ಖಣಿ ಅವರು ‘ವಿನೋಧ್ಯ ಸೀತಂ​’ ಚಿತ್ರವನ್ನು ನಿರ್ದೇಶನ​ ಮಾಡುವುದರ ಜತೆಗೆ ನಟಿಸಿದ್ದರು. ತೆಲುಗು ವರ್ಷನ್​ಗೆ ಈಗ ಅವರೇ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ತ್ರಿವಿಕ್ರಮ್​ ಶ್ರೀನಿವಾಸ್​ ಅವರು ಈ ಚಿತ್ರಕ್ಕೆ ಸ್ಕ್ರೀನ್​ಪ್ಲೇ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಅವರೇ ಈ ಚಿತ್ರವನ್ನು ತೆಲುಗಿನಲ್ಲಿ ನಿರ್ಮಾಣ ಮಾಡಲಿದ್ದಾರೆ. ಈ ಬಗ್ಗೆ ಶೀಘ್ರವೇ ಘೋಷಣೆ ಮಾಡುವ ಸಾಧ್ಯತೆ ಇದೆ.

ಸಾಯಿ ಧರಮ್​ ತೇಜ್​ ಅವರು ಸದ್ಯ ತಮ್ಮ 15ನೇ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫೈನಲ್​ ಆಗಿಲ್ಲ. ಪವನ್​ ಕಲ್ಯಾಣ್​ ಅವರು ಬಹುನಿರೀಕ್ಷಿತ ‘ಭೀಮ್ಲಾ ನಾಯಕ್​’ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಮಲಯಾಳಂನ ‘ಅಯ್ಯಪ್ಪನುಮ್​ ಕೋಶಿಯುಮ್​’ ಸಿನಿಮಾದ ರಿಮೇಕ್​ ‘ಭೀಮ್ಲಾ ನಾಯಕ್’. ಪೊಲೀಸ್​ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ಪೃಥ್ವಿರಾಜ್ ಸುಕುಮಾರ್​ ಹಾಗೂ ಬಿಜು ಮೆನನ್​ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್​ ಪಾತ್ರವನ್ನು ರಾಣಾ ದಗ್ಗುಬಾಟಿ ಹಾಗೂ ಬಿಜು ಮಾಡಿದ್ದ ಪಾತ್ರವನ್ನು ಪವನ್​ ಕಲ್ಯಾಣ್​ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಫೆಬ್ರವರಿ 25 ಅಥವಾ ಏಪ್ರಿಲ್​ 1ರಂದು ತೆರೆಗೆ ಬರಲಿದೆ.

ಇದನ್ನೂ ಓದಿ: ಪವನ್​ ಕಲ್ಯಾಣ್​ ಅಭಿಮಾನಿಗಳಿಗೆ ‘ಭೀಮ್ಲಾ ನಾಯಕ್​’ ನಿರ್ಮಾಪಕರ ಕ್ಷಮೆ; ಖುಷಿಪಟ್ಟಿದ್ದು ರಾಜಮೌಳಿ

ಬಿಡುಗಡೆ ಆಗ್ತಿದೆ ಸಾಲುಸಾಲು ಸ್ಟಾರ್ ಚಿತ್ರಗಳು; ಇಲ್ಲಿದೆ ಪ್ರಮುಖ 9 ಸಿನಿಮಾಗಳ ರಿಲೀಸ್ ದಿನಾಂಕ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ