ಪವನ್ ಕಲ್ಯಾಣ್ ಅಭಿಮಾನಿಗಳಿಗೆ ‘ಭೀಮ್ಲಾ ನಾಯಕ್’ ನಿರ್ಮಾಪಕರ ಕ್ಷಮೆ; ಖುಷಿಪಟ್ಟಿದ್ದು ರಾಜಮೌಳಿ
‘ಸರ್ಕಾರು ವಾರಿ ಪಾಟ' ಸಿನಿಮಾವನ್ನು ಈ ಹಿಂದೆಯೇ ಏ.1ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ‘ಭೀಮ್ಲಾ ನಾಯಕ್' ತಂಡದವರು ಕೂಡ ತಮ್ಮ ಸಿನಿಮಾವನ್ನು ಫೆ.25ಕ್ಕೆ ಮುಂದೂಡಿಕೆ ಮಾಡಿದೆ.
ತೆಲುಗಿನಲ್ಲಿ ಸಿದ್ಧಗೊಂಡಿರುವ ‘ಭೀಮ್ಲಾ ನಾಯಕ್’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಪವನ್ ಕಲ್ಯಾಣ್ ಪೊಲೀಸ್ ಆಗಿ ಕಾಣಿಸಿಕೊಂಡರೆ, ರಾನಾ ದಗ್ಗುಬಾಟಿ ಮಾಜಿ ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಸಂಕ್ರಾಂತಿ ರೇಸ್ನಲ್ಲಿತ್ತು. ಆದರೆ, ಈಗ ಚಿತ್ರ ಇದರಿಂದ ಹಿಂದೆ ಸರಿದಿದೆ. ಇದಕ್ಕಾಗಿ ‘ಭೀಮ್ಲಾ ನಾಯಕ್’ ನಿರ್ಮಾಪಕ ನಾಗ ವಂಶಿ ಅವರು ಪವನ್ ಕಲ್ಯಾಣ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.
‘ಎಲ್ಲಾ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಇದು ನನ್ನ ಕೈಯಲ್ಲಿ ಇರಲಿಲ್ಲ. ನಮ್ಮ ನಾಯಕ ಪವನ್ ಕಲ್ಯಾಣ್ ಅವರ ಮಾತುಗಳನ್ನು ನಾನು ಪಾಲಿಸಬೇಕಿತ್ತು. ಅವರು ಯಾವಾಗಲೂ ಈ ಉದ್ಯಮದ ಕಲ್ಯಾಣಕ್ಕೆ ಮಹತ್ವ ಕೊಡುತ್ತಾರೆ. ಈ ಶಿವರಾತ್ರಿಯಲ್ಲಿ ಒಂದು ಬಿರುಗಾಳಿ ಬರಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಫೆಬ್ರವರಿ 25ರಂದು ಭೀಮ್ಲಾ ನಾಯಕ್’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸಿನಿಮಾ ಸಂಕ್ರಾಂತಿ ರೇಸ್ನಿಂದ ಹಿಂದೆ ಸರಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಿದ್ದಕ್ಕೆ ರಾಜಮೌಳಿ ಖುಷಿಪಟ್ಟಿದ್ದು, ಪವನ್ ಕಲ್ಯಾಣ್ ತಂಡಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ.
‘ಸರ್ಕಾರು ವಾರಿ ಪಾಟ’ ಸಿನಿಮಾವನ್ನು ಈ ಹಿಂದೆಯೇ ಏ.1ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ‘ಭೀಮ್ಲಾ ನಾಯಕ್’ ತಂಡದವರು ಕೂಡ ತಮ್ಮ ಸಿನಿಮಾವನ್ನು ಫೆ.25ಕ್ಕೆ ಮುಂದೂಡಿಕೆ ಮಾಡಿ, ‘ಆರ್‌ಆರ್‌ಆರ್’ ಮತ್ತು ‘ರಾಧೆ ಶ್ಯಾಮ್’ ಸಿನಿಮಾಗಳ ಜೊತೆಗೆ ಆಗುತ್ತಿದ್ದ ಬಾಕ್ಸ್ ಆಫೀಸ್ ಕ್ಲ್ಯಾಶ್ಅನ್ನು ತಪ್ಪಿಸಿದ್ದಾರೆ.
Despite trying hard, #BheemlaNayak couldn’t make it for Jan 12 release, due to some unavoidable factors
Fans & telugu audience, the wait has got a little longer. We request you to be with us and support us, you are in for a POWERFUL treat!
Reporting in Theatres, 25th Feb 2022? pic.twitter.com/B166olsf4d
— Sithara Entertainments (@SitharaEnts) December 21, 2021
ಮಲಯಾಳಂನ ‘ಅಯ್ಯಪ್ಪನುಮ್ ಕೋಶಿಯುಮ್’ ಸಿನಿಮಾದ ರಿಮೇಕ್ ‘ಭಿಮ್ಲಾ ನಾಯಕ್’. ಪೊಲೀಸ್ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ಪೃಥ್ವಿರಾಜ್ ಹಾಗೂ ಬಿಜು ಮೆನನ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್ ಪಾತ್ರವನ್ನು ರಾಣಾ ದಗ್ಗುಬಾಟಿ ಹಾಗೂ ಬಿಜು ಮಾಡಿದ್ದ ಪಾತ್ರವನ್ನು ಪವನ್ ಕಲ್ಯಾಣ್ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ‘ಭೀಮ್ಲಾ ನಾಯಕ್’ ಸಿನಿಮಾಗೆ ರಾಣಾ ದಗ್ಗುಬಾಟಿ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?
‘ಬಜರಂಗಿ ಭಾಯಿಜಾನ್ 2’ ಸಿನಿಮಾ ಘೋಷಣೆ ಮಾಡಿದ ಸಲ್ಮಾನ್ ಖಾನ್; ಈ ಬಾರಿ ರಾಜಮೌಳಿ ನಿರ್ದೇಶನ?