AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಜರಂಗಿ ಭಾಯಿಜಾನ್ 2’ ಸಿನಿಮಾ ಘೋಷಣೆ ಮಾಡಿದ ಸಲ್ಮಾನ್​ ಖಾನ್​; ಈ ಬಾರಿ ರಾಜಮೌಳಿ ನಿರ್ದೇಶನ?

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’​ ಸಿನಿಮಾ ತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ಮುಂಬೈನಲ್ಲಿ ಅದ್ದೂರಿಯಾಗಿ ಪ್ರೀ ರಿಲೀಸ್​ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಲ್ಮಾನ್​ ಖಾನ್​ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

‘ಬಜರಂಗಿ ಭಾಯಿಜಾನ್ 2’ ಸಿನಿಮಾ ಘೋಷಣೆ ಮಾಡಿದ ಸಲ್ಮಾನ್​ ಖಾನ್​; ಈ ಬಾರಿ ರಾಜಮೌಳಿ ನಿರ್ದೇಶನ?
ಆರ್​ಆರ್​ಆರ್​ ತಂಡ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Dec 20, 2021 | 3:58 PM

Share

2015ರಲ್ಲಿ ಸಲ್ಮಾನ್​ ಖಾನ್​ ನಟಿಸಿದ ‘ಬಜರಂಗಿ ಭಾಯಿಜಾನ್​’ ಸಿನಿಮಾ ಸೂಪರ್​ ಹಿಟ್​ ಆಯಿತು. ಅದಕ್ಕೆ ನಿರ್ದೇಶನ ಮಾಡಿದವರು ಕಬೀರ್​ ಖಾನ್​. ಕಥೆ ಬರೆದವರು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​. ರಾಜಮೌಳಿ ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡಬೇಕು ಎಂಬುದು ವಿಜಯೇಂದ್ರ ಪ್ರಸಾದ್​ ಅವರ ಆಸೆ ಆಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ‘ಬಜರಂಗಿ ಭಾಯಿಜಾನ್​ 2’ ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ. ಈ ಚಿತ್ರವನ್ನು ರಾಜಮೌಳಿ ನಿರ್ದೇಶನ ಮಾಡುತ್ತಾರಾ ಎನ್ನುವ ಪ್ರಶ್ನೆ ಕಾಡಿದೆ.

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’​ ಸಿನಿಮಾ ತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ಮುಂಬೈನಲ್ಲಿ ಅದ್ದೂರಿಯಾಗಿ ಪ್ರೀ ರಿಲೀಸ್​ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಲ್ಮಾನ್​ ಖಾನ್​ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಸಲ್ಮಾನ್​ ಖಾನ್​ ‘ಬಜರಂಗಿ ಭಾಯಿಜಾನ್​ 2’ ಮಾಡುವ ವಿಚಾರ ಬಿಚ್ಚಿಟ್ಟರು.

2015ರಲ್ಲಿ ‘ಬಜರಂಗಿ ಭಾಯಿಜಾನ್’ ತೆರೆಗೆ ಬಂದಿತ್ತು. ಆರು ವರ್ಷದ ಪಾಕಿಸ್ತಾನಿ ಹುಡುಗಿ ಭಾರತದಲ್ಲಿ ಕಳೆದು ಹೋಗುತ್ತಾಳೆ. ಆಕೆಯನ್ನು ಮರಳಿ ಪಾಕಿಸ್ತಾನಕ್ಕೆ ತಲುಪಿಸುವ ಕಥೆ ಸಿನಿಮಾದಲ್ಲಿದೆ. ಈಗ ಹೊಸ ಕಥೆಯೊಂದಿಗೆ ‘ಬಜರಂಗಿ ಭಾಯಿಜಾನ್​ 2’ ಸಿನಿಮಾ ಬರುತ್ತಿದೆ. ​ಈ ಬಗ್ಗೆ ಮಾತನಾಡಿರುವ ಸಲ್ಮಾನ್​ ಖಾನ್​, ‘ರಾಜಮೌಳಿ ಮತ್ತು ಅವರ ತಂದೆಯೊಂದಿಗೆ ನಾನು ಒಳ್ಳೆಯ ಸಂಬಂಧವನ್ನು ಹೊಂದಿದ್ದೇನೆ. ವಿಜಯೇಂದ್ರ ಪ್ರಸಾದ್​ ಅವರು ‘ಬಜರಂಗಿ ಭಾಯಿಜಾನ್’ಗೆ ಕಥೆ ಬರೆದಿದ್ದರು. ಶೀಘ್ರದಲ್ಲೇ ನಾವು ಇದರ ಎರಡನೇ ಭಾಗಕ್ಕಾಗಿ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತೇವೆ’ ಎಂದಿದ್ದಾರೆ.

ಸೂಕ್ತವಲ್ಲದ ಸಮಯದಲ್ಲಿ ವಿಜಯೇಂದ್ರ ಪ್ರಸಾದ್​ ಅವರು ರಾಜಮೌಳಿಗೆ ‘ಬಜರಂಗಿ ಭಾಯಿ​ಜಾನ್’​ ಚಿತ್ರದ ಕಥೆ ಹೇಳಿದ್ದರು. ಆ ಸಂದರ್ಭದಲ್ಲಿ ರಾಜಮೌಳಿ ‘ಬಾಹುಬಲಿ’ ಚಿತ್ರದಲ್ಲಿನ ಯುದ್ಧದ ಸನ್ನಿವೇಶದ ಶೂಟಿಂಗ್​ ಮಾಡುತ್ತಿದ್ದರು. ಹೀಗಾಗಿ, ‘ಬಜರಂಗಿ ಭಾಯಿಜಾನ್’​ ಕಥೆಯ ಕಡೆಗೆ ರಾಜಮೌಳಿಗೆ ಗಮನ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಇದನ್ನು ರಾಜಮೌಳಿ ನಿರ್ದೇಶನ ಮಾಡಿರಲಿಲ್ಲ. ಈಗ ಪಾರ್ಟ್​ 2 ಸಿದ್ಧಗೊಳ್ಳುತ್ತಿದ್ದು, ರಾಜಮೌಳಿ ನಿರ್ದೇಶನ ಸಿನಿಮಾಗೆ ಇರಲಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಅದಕ್ಕೆ, ಇನ್ನಷ್ಟೇ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: ರಾಜಮೌಳಿ ರಿಜೆಕ್ಟ್​ ಮಾಡಿದ್ದ ಸಲ್ಮಾನ್​ ಖಾನ್ ಸಿನಿಮಾ ಸೂಪರ್​ ಹಿಟ್​; ವಿಜಯೇಂದ್ರ ಪ್ರಸಾದ್​ ಪಶ್ಚಾತ್ತಾಪ

ಓಟಿಟಿಯಲ್ಲಿ ನೋಡಬಹುದು ‘ಭಜರಂಗಿ 2’ ಸಿನಿಮಾ; ಶಿವರಾಜ್​ಕುಮಾರ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ