‘ಭೀಮ್ಲಾ ನಾಯಕ್’ ಸಿನಿಮಾಗೆ ರಾಣಾ ದಗ್ಗುಬಾಟಿ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?

ಮಲಯಾಳಂನ ‘ಅಯ್ಯಪ್ಪನುಮ್​ ಕೋಶಿಯುಮ್​’ ಸಿನಿಮಾದ ರಿಮೇಕ್​ ‘ಭೀಮ್ಲಾ ನಾಯಕ್’. ಪೊಲೀಸ್​ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು.

‘ಭೀಮ್ಲಾ ನಾಯಕ್’ ಸಿನಿಮಾಗೆ ರಾಣಾ ದಗ್ಗುಬಾಟಿ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?
ರಾಣಾ ದಗ್ಗುಬಾಟಿ
TV9kannada Web Team

| Edited By: Madan Kumar

Sep 25, 2021 | 7:26 AM

ರಾಣಾ ದಗ್ಗುಬಾಟಿ ಟಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿ ಮಾಡಿದ್ದಾರೆ. ‘ಬಾಹುಬಲಿ’ ಸಿನಿಮಾದಲ್ಲಿ ಅವರು ನಿರ್ವಹಿಸಿದ ಪಾತ್ರವನ್ನು ಮೆಚ್ಚಿಕೊಳ್ಳದವರೇ ಇಲ್ಲ. ಈ ಸಿನಿಮಾ ತೆರೆಕಂಡ ನಂತರದಲ್ಲಿ ರಾಣಾಗೆ ಬೇಡಿಕೆ ಹೆಚ್ಚಿದೆ. ಹೀರೋ ಆಗಿ ಅಥವಾ ಖಳ ನಟನಾಗಿ ಒಟ್ಟಿನಲ್ಲಿ ಒಳ್ಳೆಯ ಪಾತ್ರ ಸಿಕ್ಕರೆ ಸಿನಿಮಾ ಒಪ್ಪಿಕೊಳ್ಳುತ್ತಾರೆ ಅವರು. ಈಗ ‘ಭೀಮ್ಲಾ ನಾಯಕ್’​ ಸಿನಿಮಾದಲ್ಲಿ ರಾಣಾ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಮಲಯಾಳಂನ ‘ಅಯ್ಯಪ್ಪನುಮ್​ ಕೋಶಿಯುಮ್​’ ಸಿನಿಮಾದ ರಿಮೇಕ್​ ‘ಭೀಮ್ಲಾ ನಾಯಕ್’. ಪೊಲೀಸ್​ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ಪೃಥ್ವಿರಾಜ್​ ಹಾಗೂ ಬಿಜು ಮೆನನ್​ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್​ ಪಾತ್ರವನ್ನು ರಾಣಾ ದಗ್ಗುಬಾಟಿ ಹಾಗೂ ಬಿಜು ಮಾಡಿದ್ದ ಪಾತ್ರವನ್ನು ಪವನ್​ ಕಲ್ಯಾಣ್​ ನಿರ್ವಹಿಸುತ್ತಿದ್ದಾರೆ. ಎರಡೂ ಪಾತ್ರಗಳಿಗೆ ಸಮಾನ ತೂಕವಿದೆ.

ಡ್ಯಾನಿಯಲ್​ ಶೇಖರ್​ ಪಾತ್ರದಲ್ಲಿ ರಾಣಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗಾಗಿ ಅವರು 25 ದಿನಗಳ ಕಾಲ್​ಶೀಟ್​ ನೀಡಿದ್ದಾರೆ. ಈ ಅವಧಿಯಲ್ಲಿ ಅವರ ಪಾರ್ಟ್​ನ ಶೂಟಿಂಗ್​ ಪೂರ್ಣಗೊಳ್ಳಲಿದೆ. ವಿಶೇಷ ಎಂದರೆ, 25 ದಿನಕ್ಕಾಗಿ ಅವರು ಬರೋಬ್ಬರಿ 4 ಕೋಟಿ ರೂಪಾಯಿ ಕೇಳಿದ್ದಾರೆ. ಚಿತ್ರತಂಡ ಇಷ್ಟು ದೊಡ್ಡ ಮೊತ್ತದ ಹಣವನ್ನು ಅವರಿಗೆ ನೀಡೋಕೆ ಒಪ್ಪಿದೆ.

ರಾಣಾ ಖಡಕ್​ ಪಾತ್ರದಲ್ಲಿ ಕಾಣಿಸಿಕೊಂಡರೆ ವೀಕ್ಷಕರಿಗೆ ಇಷ್ಟವಾಗುತ್ತದೆ. ಈ ಸಿನಿಮಾದಲ್ಲಿ ಅವರಿಗೆ ನೀಡಿರುವ ಪಾತ್ರಕ್ಕೆ ನ್ಯಾಯ ಒದಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಾರಣಕ್ಕೆ ರಾಣಾಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ನೀಡೋಕೆ ನಿರ್ಮಾಪಕರು ಹಿಂದೇಟು ಹಾಕಿಲ್ಲ.

ಸೆಪ್ಟೆಂಬರ್​ 20ರಂದು ರಾಣಾ ಫಸ್ಟ್​ ಲುಕ್​ ಜತೆಗೆ ಸಣ್ಣ ವಿಡಿಯೋ ಕೂಡ ರಿಲೀಸ್​ ಆಗಿತ್ತು. ರಾಣಾ ಸಖತ್​ ಮಾಸ್​ ಆಗಿ ಕಾಣಿಸಿಕೊಂಡಿದ್ದರು. ಪವನ್​ ಕಲ್ಯಾಣ್​ ಹಾಗೂ ರಾಣಾ ಮುಖಾಮುಖಿ ಆಗುತ್ತಿರುವ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ‘ಬಾಹುಬಲಿ’ ಸಿನಿಮಾದಲ್ಲಿ ರಾಣಾ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಈಗ ಅವರು ಮತ್ತೊಂದು ಖಡಕ್​ ಪಾತ್ರ ಆಯ್ಕೆ ಮಾಡಿಕೊಂಡಂತಾಗಿದೆ.

ಇದನ್ನೂ ಓದಿ: ಸೆಟ್ಟೇರಿತು ಶಾರುಖ್- ನಯನತಾರಾ ನಟನೆಯ ನೂತನ ಚಿತ್ರ; ಬಣ್ಣಹಚ್ಚಲಿದ್ದಾರಾ ಪ್ರಿಯಾಮಣಿ, ರಾಣಾ ದಗ್ಗುಬಾಟಿ?

ತೆಲುಗಿನ ‘ಭೀಮ್ಲಾ ನಾಯಕ್’​ ಸಿನಿಮಾಗೆ ಪುನೀತ್​ ರಾಜ್​ಕುಮಾರ್​ ಬೆಂಬಲ; ಧನ್ಯವಾದ ಹೇಳಿದ ಪವನ್ ​ಕಲ್ಯಾಣ್​ ಫ್ಯಾನ್ಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada