ತೆಲುಗಿನ ‘ಭೀಮ್ಲಾ ನಾಯಕ್’​ ಸಿನಿಮಾಗೆ ಪುನೀತ್​ ರಾಜ್​ಕುಮಾರ್​ ಬೆಂಬಲ; ಧನ್ಯವಾದ ಹೇಳಿದ ಪವನ್ ​ಕಲ್ಯಾಣ್​ ಫ್ಯಾನ್ಸ್

TV9 Digital Desk

| Edited By: Rajesh Duggumane

Updated on: Sep 20, 2021 | 9:56 PM

ಮಲಯಾಳಂನ ‘ಅಯ್ಯಪ್ಪನುಮ್​ ಕೋಶಿಯುಮ್​’ ಸಿನಿಮಾದ ರಿಮೇಕ್​ ‘ಭಿಮ್ಲಾ ನಾಯಕ್’. ಪೊಲೀಸ್​ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ.

ತೆಲುಗಿನ ‘ಭೀಮ್ಲಾ ನಾಯಕ್’​ ಸಿನಿಮಾಗೆ ಪುನೀತ್​ ರಾಜ್​ಕುಮಾರ್​ ಬೆಂಬಲ; ಧನ್ಯವಾದ ಹೇಳಿದ ಪವನ್ ​ಕಲ್ಯಾಣ್​ ಫ್ಯಾನ್ಸ್
ತೆಲುಗಿನ ‘ಭೀಮ್ಲಾ ನಾಯಕ್’​ ಸಿನಿಮಾಗೆ ಪುನೀತ್​ ರಾಜ್​ಕುಮಾರ್​ ಬೆಂಬಲ; ಧನ್ಯವಾದ ಹೇಳಿದ ಪವನ್​ ಫ್ಯಾನ್ಸ್
Follow us

ತೆಲುಗಿನಲ್ಲಿ ಸಿದ್ಧಗೊಳ್ಳುತ್ತಿರುವ ‘ಭೀಮ್ಲಾ ನಾಯಕ್’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಪವನ್​ ಕಲ್ಯಾಣ್​​ ಪೊಲೀಸ್​ ಆಗಿ ಕಾಣಿಸಿಕೊಂಡರೆ, ರಾಣಾ ದಗ್ಗುಬಾಟಿ ನೆಗೆಟಿವ್​ ಪಾತ್ರದಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರೆ. ಸಿನಿಮಾದಲ್ಲಿನ ರಾಣಾ ದಗ್ಗುಬಾಟಿ ಪಾತ್ರದ ಝಲಕ್​ಅನ್ನು ಪುನೀತ್​ ರಾಜ್​ಕುಮಾರ್​ ಇಂದು ರಿಲೀಸ್​ ಮಾಡಿದ್ದಾರೆ.  

ಮಲಯಾಳಂನ ‘ಅಯ್ಯಪ್ಪನುಮ್​ ಕೋಶಿಯುಮ್​’ ಸಿನಿಮಾದ ರಿಮೇಕ್​ ‘ಭಿಮ್ಲಾ ನಾಯಕ್’. ಪೊಲೀಸ್​ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ಪೃಥ್ವಿರಾಜ್​ ಹಾಗೂ ಬಿಜು ಮೆನನ್​ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್​ ಪಾತ್ರವನ್ನು ರಾಣಾ ದಗ್ಗುಬಾಟಿ ಹಾಗೂ ಬಿಜು ಮಾಡಿದ್ದ ಪಾತ್ರವನ್ನು ಪವನ್​ ಕಲ್ಯಾಣ್​ ನಿರ್ವಹಿಸುತ್ತಿದ್ದಾರೆ.

ಇಂದು (ಸೆಪ್ಟೆಂಬರ್​ 20) ಫಸ್ಟ್​ ಲುಕ್​ ಜತೆಗೆ ಸಣ್ಣ ವಿಡಿಯೋ ಕೂಡ ರಿಲೀಸ್​ ಆಗಿದೆ. ರಾಣಾ ಸಖತ್​ ಮಾಸ್​ ಆಗಿ ಕಾಣಿಸಿಕೊಂಡಿದ್ದಾರೆ. ಪವನ್​ ಕಲ್ಯಾಣ್​ ಹಾಗೂ ರಾಣಾ ಮುಖಾಮುಖಿ ಆಗುತ್ತಿರುವ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ‘ಬಾಹುಬಲಿ’ ಸಿನಿಮಾದಲ್ಲಿ ರಾಣಾ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಈಗ ಅವರು ಮತ್ತೊಂದು ಖಡಕ್​ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಈ ವಿಡಿಯೋ ಲಿಂಕ್​ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಪವನ್​ ಕಲ್ಯಾಣ್​ ಫ್ಯಾನ್ಸ್​ ಖುಷಿಯಾಗಿದ್ದಾರೆ. ಅಲ್ಲದೆ, ಈ ವಿಡಿಯೋ ಹಂಚಿಕೊಂಡು ಬೆಂಬಲಿಸಿದ ಪುನೀತ್​ ರಾಜ್​ಕುಮಾರ್​ ಅವರಿಗೆ ಧನ್ಯವಾದ ಹೇಳಿದ್ದಾರೆ. ಪುನೀತ್​ ರಾಜ್​ಕುಮಾರ್​ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ಬೆಂಬಲಿಸುತ್ತಿದ್ದಾರೆ. ಹೊಸಬರ ಸಿನಿಮಾಗೆ ಮೆಚ್ಚುಗೆಯ ಮಾತನ್ನು ಹೇಳುತ್ತಿದ್ದಾರೆ.

ಪುನೀತ್​ ರಾಜ್​ಕುಮಾರ್​ ಸದ್ಯ, ‘ಜೇಮ್ಸ್​’ ಹಾಗೂ ‘ದ್ವಿತ್ವ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜತೆಗೆ ಸಂತೋಷ್​ ಆನಂದ್​ರಾಮ್​ ಜತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ‘ಜೇಮ್ಸ್​ ಹಾಗೂ ‘ದ್ವಿತ್ವ’ ಸಿನಿಮಾ ಕೆಲಸಗಳು ಭರದಿಂದ ಸಾಗಿವೆ. ‘ರಾಜಕುಮಾರ’ ಹಾಗೂ ‘ಯುವರತ್ನ’ ನಂತರ ಪುನೀತ್​ ಮತ್ತು ಸಂತೋಷ್​ ಮತ್ತೆ ಒಂದಾಗುತ್ತಿದ್ದಾರೆ.

ಇದನ್ನೂ ಓದಿ: ಪುನೀತ್, ಸಂತೋಷ್ ಆನಂದರಾಮ್, ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ; ಸೆಟ್ಟೇರೋದು ಯಾವಾಗ?

ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ಮತ್ತೊಂದು ಸಿನಿಮಾ; ಸೆಪ್ಟೆಂಬರ್​​ 22ಕ್ಕೆ ಟೈಟಲ್​ ಲಾಂಚ್​

ತಾಜಾ ಸುದ್ದಿ

Related Stories

Click on your DTH Provider to Add TV9 Kannada