ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ಮತ್ತೊಂದು ಸಿನಿಮಾ; ಸೆಪ್ಟೆಂಬರ್​​ 22ಕ್ಕೆ ಟೈಟಲ್​ ಲಾಂಚ್​

ವಿಜಯ್​ ಕಿರಂಗದೂರು ಆರು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜತೆಗೆ ತಮ್ಮ ನಿರ್ಮಾಣದ 12ನೇ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ಮತ್ತೊಂದು ಸಿನಿಮಾ; ಸೆಪ್ಟೆಂಬರ್​​ 22ಕ್ಕೆ ಟೈಟಲ್​ ಲಾಂಚ್​
ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ಮತ್ತೊಂದು ಸಿನಿಮಾ; ಸೆಪ್ಟೆಂಬರ್​​ 22ಕ್ಕೆ ಟೈಟಲ್​ ಲಾಂಚ್​

‘ಕೆಜಿಎಫ್’ ಹಿಟ್​ ಆದ ನಂತರದಲ್ಲಿ ಹೊಂಬಾಳೆ ಫಿಲ್ಮ್ಸ್​ ವಿಜಯ್​ ಕಿರಗಂದೂರು ಸಾಲುಸಾಲು ಸಿನಿಮಾಗಳನ್ನು ಘೋಷಣೆ ಮಾಡುತ್ತಿದ್ದಾರೆ. ಈಗ 12ನೇ ಸಿನಿಮಾ ಟೈಟಲ್​ ಲಾಂಚ್​ಗೆ ಹೊಂಬಾಳೆ ಫಿಲ್ಮ್ಸ್​ ಮುಹೂರ್ತ ಫಿಕ್ಸ್​ ಮಾಡಿದೆ. ಸೆಪ್ಟೆಂಬರ್ 22ರಂದು ಚಿತ್ರದ ಟೈಟಲ್​ ಲಾಂಚ್​ ಹಾಗೂ ಫಸ್ಟ್​ ಲುಕ್​ ರಿವೀಲ್​ ಆಗಲಿದೆ.

2014ರಲ್ಲಿ ತೆರೆಗೆ ಬಂದ ‘ನಿನ್ನಿಂದಲೇ’ ಸಿನಿಮಾ ಮೂಲಕ ವಿಜಯ್​ ಕಿರಗಂದೂರು ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟರು. ಇದಾದ ನಂತರ 2015ರಲ್ಲಿ ಇವರ ನಿರ್ಮಾಣದ ‘ಮಾಸ್ಟರ್​ಪೀಸ್​’ ತೆರೆಗೆ ಬಂತು. 2017ರಲ್ಲಿ ‘ರಾಜಕುಮಾರ’​ ಸಿನಿಮಾ ರಿಲೀಸ್​ ಆಯಿತು. ‘ಕೆಜಿಎಫ್​: ಚಾಪ್ಟರ್​ 1’ ನಿರ್ಮಾಣ ಮಾಡಿ 2018ರಲ್ಲಿ ಅದನ್ನು ರಿಲೀಸ್​ ಮಾಡಿತು ಹೊಂಬಾಳೆ ಫಿಲ್ಮ್ಸ್​. ಈ ಸಿನಿಮಾ ದೊಡ್ಡ ಯಶಸ್ಸು ಪಡೆಯಿತು. ಈ ವರ್ಷ ‘ಯುವರತ್ನ’ ಸಿನಿಮಾ ರಿಲೀಸ್​ ಆಗಿದೆ. ‘ಕೆಜಿಎಫ್​ 2’ 2022ಕ್ಕೆ ರಿಲೀಸ್ ಆಗುತ್ತಿದೆ. ಈ ಆರು ಸಿನಿಮಾಗಳ ಪೈಕಿ ಮೂರು ಚಿತ್ರಗಳಲ್ಲಿ ಪುನೀತ್​ ಹಾಗೂ ಮೂರು ಚಿತ್ರಗಳಲ್ಲಿ ಯಶ್​ ನಟಿಸಿದ್ದರು.

ಈಗ ಹೊಂಬಾಳೆ ಫಿಲ್ಮ್ಸ್​ ಬೇರೆಬೇರೆ ನಟರ ಜತೆ ಸಿನಿಮಾ ಮಾಡುತ್ತಿದೆ. ತೆಲುಗಿನ ‘ಸಲಾರ್​’ ಸಿನಿಮಾ ನಿರ್ಮಾಣ ಜವಾಬ್ದಾರಿ ಹೊಂಬಾಳೆ ಹೊತ್ತುಕೊಂಡಿದೆ. ಈ ಸಿನಿಮಾದಲ್ಲಿ ಪ್ರಭಾಸ್​ ಹೀರೋ. ಶ್ರೀಮುರಳಿ ನಟನೆಯ ‘ಭಗೀರ’, ಪುನೀತ್​ ನಟನೆಯ ‘ದ್ವಿತ್ವ’, ರಕ್ಷಿತ್​ ಶೆಟ್ಟಿ ನಿರ್ದೇಶನದ ‘ರಿಚರ್ಡ್​ ಆ್ಯಂಟೋನಿ’ ರಿಷಬ್​ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳುತ್ತಿರುವ ‘ಕಾಂತಾರ’ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡುತ್ತಿದೆ.

ವಿಜಯ್​ ಕಿರಂಗದೂರು ಆರು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜತೆಗೆ ತಮ್ಮ ನಿರ್ಮಾಣದ 12ನೇ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಪ್ರತಿಯೊಬ್ಬರಲ್ಲೂ ಹಸಿವಿದೆ. ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ ಅನ್ನದಾತೋ ಸುಖೀಭವ’ ಎಂದು ಹೊಂಬಾಳೆ ಫಿಲ್ಮ್ಸ್​ ಬರೆದುಕೊಂಡಿರುವುದು ಸಾಕಷ್ಟು ಕುತೂಹಲ ಹುಟ್ಟಿಸಿದೆ. ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುವವರು ಯಾರು? ಈ ಸಿನಿಮಾದಲ್ಲಿ ನಟಿಸುವವರು ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಉತ್ತರ ಸೆಪ್ಟೆಂಬರ್​ 22ರ ಮಧ್ಯಾಹ್ನ 3 ಗಂಟೆಗೆ ಸಿಗಲಿದೆ.

ಇದನ್ನೂ ಓದಿ: ​ಯಶ್​ ಎಂಟ್ರಿಗೆ ಜಾಗ ಬಿಟ್ಟುಕೊಟ್ಟ ಪ್ರಭಾಸ್​; ‘ಕೆಜಿಎಫ್​ 2’ ಚಿತ್ರಕ್ಕಾಗಿ ‘ಸಲಾರ್​’ ರಿಲೀಸ್​ ದಿನಾಂಕ ಬದಲು?

‘ಕೆಜಿಎಫ್​’ ನಿರ್ಮಾಪಕ ವಿಜಯ್​ ಕಿರಗಂದೂರು ಹೇಳಿದ ಮಾತಿನಿಂದ ಮುಗಿಯಿತು ‘ಕಿರಿಕ್​ ಪಾರ್ಟಿ’ ವಿವಾದ

Read Full Article

Click on your DTH Provider to Add TV9 Kannada