ಕುಡುಕ, ಅನಕ್ಷರಸ್ಥ ವ್ಯಕ್ತಿಯ ಕೈಗೆ ಪಂಜಾಬ್​ ಆಡಳಿತ ಕೊಡುವುದಾದರೂ ಹೇಗೆ?-ಸಿಎಂ ಚರಣಜಿತ್​ ಸಿಂಗ್ ಛನ್ನಿ ವಾಗ್ದಾಳಿ

ಆಪ್​​ ಪಕ್ಷ ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಈ ಸಲ ಜನರಿಗೆ ಕೊಟ್ಟಿತ್ತು. ಈ ಅಭಿಯಾನಕ್ಕೆ ಜನತಾ ಚುನೇಗಿ ಅಪ್ನಾ ಸಿಎಂ ಎಂಬ ಹೆಸರನ್ನೂ ಇಡಲಾಗಿತ್ತು.

ಕುಡುಕ, ಅನಕ್ಷರಸ್ಥ ವ್ಯಕ್ತಿಯ ಕೈಗೆ ಪಂಜಾಬ್​ ಆಡಳಿತ ಕೊಡುವುದಾದರೂ ಹೇಗೆ?-ಸಿಎಂ ಚರಣಜಿತ್​ ಸಿಂಗ್ ಛನ್ನಿ ವಾಗ್ದಾಳಿ
ಚರಣಜಿತ್​ ಸಿಂಗ್ ಛನ್ನಿ
Follow us
TV9 Web
| Updated By: Lakshmi Hegde

Updated on: Feb 17, 2022 | 4:12 PM

ಭಟಿಂಡಾ: ಪಂಜಾಬ್​ನಲ್ಲಿ ಫೆ.20ರಂದು ವಿಧಾನಸಭೆ ಚುನಾವಣೆ (Punjab Assembly Election 2022) ನಡೆಯಲಿದೆ. ಇಲ್ಲಿ ಬಿಜೆಪಿ-ಕಾಂಗ್ರೆಸ್ ಮತ್ತು ಆಮ್​ ಆದ್ಮಿ ಪಕ್ಷದ (Aam Aadmi Party) ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈಗಾಗಲೇ ಅಧಿಕಾರದಲ್ಲಿರುವ ಕಾಂಗ್ರೆಸ್​ ಮತ್ತೆ ಆಡಳಿತ ಹಿಡಿಯಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದರೆ, ಬಿಜೆಪಿ ಈ ಬಾರಿ ಹೇಗಾದರೂ ಪಂಜಾಬ್​ನಲ್ಲೂ ಕಮಲವನ್ನೇ ಅರಳಿಸಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇವರಡರ ಮಧ್ಯೆ ಆಮ್​ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್​ ತಾವೇನೂ ಕಡಿಮೆ ಇಲ್ಲ ಎಂಬಂತೆ ಪಂಜಾಬ್​ ಚುನಾವಣೆಯಲ್ಲಿ ಸಕ್ರಿಯರಾಗಿದ್ದಾರೆ. ಜನರಿಗೆ ಆಕರ್ಷಕ ಭರವಸೆಗಳನ್ನೂ ನೀಡಿದ್ದಾರೆ. ಹಾಗೇ, ತಮ್ಮ ಪಕ್ಷದ ಅಭ್ಯರ್ಥಿ ಭಗವಂತ್​ ಮನ್​ ಎಂದು ಘೋಷಿಸಿದ್ದಾರೆ.  ಇನ್ನು ರಾಜಕೀಯ ಪಕ್ಷಗಳ ಮುಖಂಡರು ಪರಸ್ಪರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಇದೀಗ ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ, ಆಪ್​ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮನ್​ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಭಟಿಂಡಾದಲ್ಲಿ ಮಾತನಾಡಿದ ಅವರು, ಭಗವಂತ್​ ಮನ್​ ಒಬ್ಬ ಕುಡುಕ ಮತ್ತು ಅನಕ್ಷರಸ್ಥ ವ್ಯಕ್ತಿ ಎಂದು ಕಿಡಿಕಾರಿದ್ದಾರೆ.  ಅವರು 12 ತರಗತಿ ಪಾಸು ಮಾಡಲು ಮೂರು ವರ್ಷ ತೆಗೆದುಕೊಂಡರು. ಅಂಥ ವ್ಯಕ್ತಿಯನ್ನು ಪಂಜಾಬ್​ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದೆ. ಪಂಜಾಬ್ ಆಡಳಿತವನ್ನು ಈ ಅನಕ್ಷರಸ್ಥ, ಕುಡುಕ ವ್ಯಕ್ತಿಯ ಕೈಗೆ ಕೊಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಆಪ್​​ ಪಕ್ಷ ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಈ ಸಲ ಜನರಿಗೆ ಕೊಟ್ಟಿತ್ತು. ಈ ಅಭಿಯಾನಕ್ಕೆ ಜನತಾ ಚುನೇಗಿ ಅಪ್ನಾ ಸಿಎಂ ಎಂಬ ಹೆಸರನ್ನೂ ಇಡಲಾಗಿತ್ತು. ಚುನಾವಣೆಯಲ್ಲಿ ಮತ ಹಾಕುವಂತೆ ಜನರನ್ನು ಕೇಳಿ, ಸಿಎಂ ಅಭ್ಯರ್ಥಿಯನ್ನು ತಾವೇ ಆಯ್ಕೆ ಮಾಡುವುದು ಇತರ ರಾಜಕೀಯ ಪಕ್ಷಗಳ ನಿಯಮ. ಆದರೆ ನಾವು ಚುನಾವಣೆಗೂ ಮೊದಲೇ, ಸಿಎಂ ಅಭ್ಯರ್ಥಿಯ ಆಯ್ಕೆಯನ್ನೇ ಜನರಿಗೆ ಬಿಟ್ಟಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್​ ಹೇಳಿದ್ದರು. ಅಲ್ಲದೆ, ಈ ಐಡಿಯಾ ಭಗವಂತ್​ ಮನ್​​ರದ್ದೇ ಎಂದೂ ತಿಳಿಸಿದ್ದರು. ಬಳಿಕ ಇದೇ ಭಗವಂತ್​ ಮನ್​ರನ್ನು ಸಿಎಂ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅಂದಹಾಗೇ ಭಗವಂತ್​ ಮನ್​, ಸಂಗ್ರೂರ್​​ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಸಂಸದರಾದವರು. ಇವರು ಒಬ್ಬ ಹಾಸ್ಯನಟನಾಗಿದ್ದು, ಬಳಿಕ ರಾಜಕೀಯಕ್ಕೆ ಇಳಿದಿವರು. ಈ ಬಾರಿ ಧುರಿಯಿಂದ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: ಸಿಂಗಾಪುರ ಸಂಸತ್ತಿನಲ್ಲಿ ಜವಾಹರ್​ ಲಾಲ್​ ನೆಹರೂ ಉಲ್ಲೇಖ; ಭಾರತಕ್ಕೆ ಶ್ರೇಷ್ಠ ಮೌಲ್ಯಗಳ ಅಡಿಪಾಯ ಹಾಕಲಾಗಿದೆ ಎಂದ ಪ್ರಧಾನಿ ಲಿ ಸೇನ್​​​​ ಲೂಂಗ್

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್