ಪ್ರಧಾನಿ ನರೇಂದ್ರ ಮೋದಿ, ಅರವಿಂದ್ ಕೇಜ್ರಿವಾಲ್ ಹಿಂದಿವೆ ನಿಗೂಢ ಶಕ್ತಿಗಳು: ಪಂಜಾಬ್​ನಲ್ಲಿ ರಾಹುಲ್ ಗಾಂಧಿ

ಒಂದೇ ಒಂದು ಅವಕಾಶ ಕೊಡಿ’ ಎನ್ನುತ್ತಿರುವವರು ಇಡೀ ರಾಜ್ಯವನ್ನು ಹಾಳು ಮಾಡುತ್ತಾರೆ. ರಾಜ್ಯ ಹೊತ್ತಿ ಉರಿಯಲಿದೆ ಎಂದು ರಾಹುಲ್ ಗಾಂಧಿ ಬಿಜೆಪಿ ಮತ್ತು ಆಪ್ ಪಕ್ಷಗಳನ್ನು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ, ಅರವಿಂದ್ ಕೇಜ್ರಿವಾಲ್ ಹಿಂದಿವೆ ನಿಗೂಢ ಶಕ್ತಿಗಳು: ಪಂಜಾಬ್​ನಲ್ಲಿ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 15, 2022 | 8:07 PM

ಚಂಡಿಗಢ: ಪ್ರಚಾರಕ್ಕೆಂದು ಇಲ್ಲಿಗೆ ಬರುತ್ತಿರುವ ನಾಯಕರ ಮುಖ ನೋಡಿ ಪಂಜಾಬ್​ನ ಮತದಾರರು ಏನನ್ನೂ ನಿರ್ಧರಿಸಬಾರದು. ಈ ನಾಯಕರ ಹಿಂದೆ ಇರುವ ನಿಗೂಢ ಶಕ್ತಿಗಳನ್ನು ಅರಿತು ಯಾರಿಗೆ ಮತ ನೀಡಬೇಕು ಎನ್ನುವುದನ್ನು ನಿರ್ಧರಿಸಬೇಕು. ‘ಒಂದೇ ಒಂದು ಅವಕಾಶ ಕೊಡಿ’ ಎನ್ನುತ್ತಿರುವವರು ಇಡೀ ರಾಜ್ಯವನ್ನು ಹಾಳು ಮಾಡುತ್ತಾರೆ. ರಾಜ್ಯ ಹೊತ್ತಿ ಉರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹರಿಹಾಯ್ದರು. ಕಳೆದ ವರ್ಷವಷ್ಟೇ ಪಕ್ಷದಿಂದ ಹೊರದೂಡಿದ ಮಾಜಿ ಮುಖ್ಯಮಂತ್ರಿಯೊಬ್ಬರು ಬಿಜೆಪಿಯ ಬಾಗಿಲಲ್ಲಿ ನಿಂತಿದ್ದಾರೆ ಎಂದು ಅಮರಿಂದರ್ ಸಿಂಗ್ ಅವರ ವಿರುದ್ಧವೂ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

ಚಂಡಿಗಡದಿಂದ 30 ಕಿಮೀ ದೂರದಲ್ಲಿರುವ ರಾಜ್​ಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪಂಜಾಬ್​ನಲ್ಲಿ ಯಾವುದೇ ಪ್ರಯೋಗಕ್ಕೆ ಮುಂದಾದರೆ ಅಪಾಯ ಎಂದು ಎಚ್ಚರಿಸಿದರು. ಕಾಂಗ್ರೆಸ್ ಪಕ್ಷವು ಅಕ್ಕಪಕ್ಕದ ರಾಜ್ಯಗಳೊಂದಿಗೆ ಶಾಂತಿ ಕಾಪಾಡಿಕೊಳ್ಳುವ ಶಕ್ತಿ ಹೊಂದಿದೆ ಎಂದರು. ‘ಪಂಜಾಬ್​ಗೆ ಅತ್ಯಂತ ಮುಖ್ಯವಾಗಿ ಬೇಕಿರುವುದು ಶಾಂತಿ ಮತ್ತು ಸುವ್ಯವಸ್ಥೆ. ಅದನ್ನು ಸ್ಥಿರವಾಗಿ ಕಾಪಾಡುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ. ರಾಜಕೀಯ ಪಕ್ಷಗಳು ಪಂಜಾಬ್ ರಾಜ್ಯವನ್ನು ಪ್ರಯೋಗಶಾಲೆಯಾಗಿ ನೋಡಬಾರದು. ಅಂತರರಾಷ್ಟ್ರೀಯ ಗಡಿ ಹೊಂದಿರುವ ಪಂಜಾಬ್ ರಾಜ್ಯವು ದೇಶದ ಭದ್ರತೆಯ ದೃಷ್ಟಿಯಿಂದಲೂ ಮಹತ್ವದ ರಾಜ್ಯ. ಪಂಜಾಬ್​ನಲ್ಲಿ ಶಾಂತಿ ಕಾಪಾಡಲು ಏನು ಮಾಡಬೇಕು ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿದೆ’ ಎಂದರು.

‘ಒಂದೇ ಒಂದು ಅವಕಾಶ ಕೊಡಿ ಎನ್ನುತ್ತಿರುವವರು ಪಂಜಾಬ್​ ರಾಜ್ಯವನ್ನು ಸುಟ್ಟು ಹಾಕುತ್ತಾರೆ. ನನ್ನ ಮಾತು ನೆನಪಿಟ್ಟುಕೊಳ್ಳಿ’ ಎಂದು ಆಪ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ನಾನು 2004ರಿಂದ ರಾಜಕಾರಣದಲ್ಲಿದ್ದಾನೆ. ಈಗ ಯಾರಾದರೂ ಬಂದು ಇವರು ಮೋದಿ, ಇವರು ಕೇಜ್ರಿವಾಲ್, ಇವರು ಗಾಂಧಿ ಎಂದು ಹೇಳಿದರೆ, ಹೊಸಬರಿಗೆ ಅವರ ಮುಖಗಳು ಮಾತ್ರ ಗೊತ್ತಾಗುತ್ತವೆ. ಆದರೆ ಅನುಭವ ಇರುವವರಿಗೆ ಈ ಮುಖಗಳ ಹಿಂದಿರುವ ಶಕ್ತಿ ಎಂಥದ್ದು ಎಂದು ಗೊತ್ತಾಗುತ್ತದೆ. ನಾನು ಇಲ್ಲಿ ಬಂದು ನಿಂತಿದ್ದೇನೆ. ನನ್ನ ಹಿಂದೆ ಯಾರಿದ್ದಾರೆ ಎಂದು ಕೇಳಿ. ಮೋದಿ ಬಂದು ನಿಂತಾಗ ಅವರ ಹಿಂದೆ ಇರುವ ನಿಗೂಢ ಶಕ್ತಿಗಳ ಬಗ್ಗೆ ಯೋಚಿಸಿ ನೋಡಿ’ ಎಂದರು.

ನೋಟು ಅಮಾನ್ಯೀಕರಣ ಮತ್ತು ಕೃಷಿ ಕಾನೂನುಗಳನ್ನು ಜಾರಿ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರನ್ನು ರಾಹುಲ್ ತರಾಟೆಗೆ ತೆಗೆದುಕೊಂಡರು. ಮೋದಿ ಅವರಿಗೆ ಬಡಜನರ ಬೆಂಬಲ ಇದೆಯೇ? ಖಂಡಿತ ಇಲ್ಲ. ಮೋದಿ ಆಡಳಿತದಲ್ಲಿ ಬಡವರು ನಲುಗಿ ಹೋಗಿದ್ದಾರೆ. ದೇಶದ ರೈತರ ಬದುಕು ಹಾಳು ಮಾಡಲು ಮೂರು ಕೃಷಿ ಕಾನೂನುಗಳನ್ನು ಮೋದಿ ಜಾರಿ ಮಾಡಿದರು. ಮೋದಿ ಏಕಾಂಗಿ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರ ಹಿಂದೆ ಯಾವ್ಯಾವುದೋ ಶಕ್ತಿಗಳಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರೈತರು ಸತತ ಒಂದು ವರ್ಷ ಪ್ರತಿಭಟನೆ ನಡೆಸಿದರು. ಒಂದು ವೇಳೆ ರೈತರ ಶಕ್ತಿ ಮೋದಿ ಅವರ ಹಿಂದೆ ಇದ್ದಿದ್ದರೆ ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಹೋರಾಟ ನಡೆಸುತ್ತಿದ್ದ 700 ರೈತರು ಸಾಯುತ್ತಿರಲಿಲ್ಲ ಎಂದರು.

ಮೋದಿ ಅವರ ಹಿಂದಿರುವ ಶಕ್ತಿಗಳು ಎಂಥದ್ದು? ದೇಶದ ಮೂರ್ನಾಲ್ಕು ಶತಕೋಟ್ಯಾಧೀಶರು ರೈತರ ಶಕ್ತಿ ಕುಂದಿಸಲು ಯತ್ನಿಸುತ್ತಿದ್ದಾರೆ. ರೈತರಲ್ಲಿ, ಭೂಮಿಯಲ್ಲಿ ಮತ್ತು ಸರ್ಕಾರಿ ಗೋದಾಮುಗಳಲ್ಲಿ ಸಾಕಷ್ಟು ಸಂಪತ್ತು ಇದೆ. ಅವೆಲ್ಲವೂ ನಮಗೆ ಬೇಕು ಎನ್ನುತ್ತಾರೆ ಅವರು ಎಂದು ರಾಹುಲ್ ಗಾಂಧಿ ವಿವರಿಸಿದರು. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಒಂದೇ ಸಮನೆ ಏರುತ್ತಿವೆ. ಯಾವ ಶಕ್ತಿಗಳಿಗೆ ಲಾಭವಾಗುತ್ತಿದೆ ಎಂದು ರಾಹುಲ್ ಪ್ರಶ್ನಿಸಿದರು. ನೋಟು ಅಮಾನ್ಯೀಕರಣ ಮತ್ತು ಜಿಎಸ್​ಟಿ ತಂದ ಶಕ್ತಿಗಳಿಗೇ ಇದರಿಂದಲೂ ಲಾಭವಾಗುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಇಳಿಸಲಿಲ್ಲ. ಆದರೆ ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಚನ್ನಿ ದರಗಳನ್ನು ಕಡಿಮೆ ಮಾಡಿದರು. ಮೋದಿ ಅವರ ಹಿಂದಿರುವ ಶಕ್ತಿಗಳೇ ಚನ್ನಿ ಅವರ ಹಿಂದೆಯೂ ಇದ್ದಿದ್ದರೆ ಅವರಿಗೆ ಎಂದಿಗೂ ಬೆಲೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅವರ ಹಿಂದೆ ನಿಮ್ಮ ಅಂದರೆ ಪಂಜಾಬ್ ಜನರ ಶಕ್ತಿಯಿತ್ತು. ಹೀಗಾಗಿ ಅವರು ನಿಮ್ಮ ಪರವಾಗಿ ಯೋಚಿಸುತ್ತಾರೆ. ಇದು ಮುಖಗಳೊಂದಿಗೆ ಮಾತ್ರವಲ್ಲ ಅದರ ಹಿಂದಿರುವ ಶಕ್ತಿಗಳ ವಿರುದ್ಧವೂ ಹೋರಾಟ ಎಂದರು.

ಇದನ್ನೂ ಓದಿ: ನಾನು ಸತ್ಯವನ್ನಷ್ಟೇ ಹೇಳುತ್ತೇನೆ, ಸುಳ್ಳು ಕೇಳಬೇಕೆಂದರೆ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಭಾಷಣ ಕೇಳಿ: ರಾಹುಲ್ ಗಾಂಧಿ

ಇದನ್ನೂ ಓದಿ: 2014ರಲ್ಲಿ ಯುವರಾಜ ನನ್ನ ಹೆಲಿಕಾಪ್ಟರ್ ಹಾರಾಟಕ್ಕೆ ಅಡ್ಡಿಪಡಿಸಿದ್ದರು: ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ