2014ರಲ್ಲಿ ಯುವರಾಜ ನನ್ನ ಹೆಲಿಕಾಪ್ಟರ್ ಹಾರಾಟಕ್ಕೆ ಅಡ್ಡಿಪಡಿಸಿದ್ದರು: ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ

ಪ್ರಧಾನಿ ಅಭ್ಯರ್ಥಿಗಾಗಿ ನನ್ನ ಹೆಸರನ್ನು ಘೋಷಿಸಲಾಗಿತ್ತು. ನಾನು ಪಠಾಣ್‌ಕೋಟ್ ಮತ್ತು ಹಿಮಾಚಲಕ್ಕೆ ಪ್ರಚಾರಕ್ಕಾಗಿ ಭೇಟಿ ನೀಡಬೇಕಾಗಿತ್ತು. ಆದರೆ ಅವರ ಯುವರಾಜ (ರಾಜಕುಮಾರ) ಅಮೃತಸರದಲ್ಲಿ ಇದ್ದ ಕಾರಣ ನನ್ನ ಹೆಲಿಕಾಪ್ಟರ್‌ಗೆ ಹಾರಲು ಬಿಡಲಿಲ್ಲ

2014ರಲ್ಲಿ ಯುವರಾಜ ನನ್ನ ಹೆಲಿಕಾಪ್ಟರ್ ಹಾರಾಟಕ್ಕೆ ಅಡ್ಡಿಪಡಿಸಿದ್ದರು: ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ
ಜಲಂಧರ್​​ನಲ್ಲಿ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Feb 14, 2022 | 8:18 PM

ಜಲಂಧರ್: “ಯುವರಾಜ್ (ರಾಜಕುಮಾರ)” ಅಮೃತಸರಕ್ಕೆ ವಾಯುಯಾನ ಮಾಡುತ್ತಿದ್ದುದರಿಂದ ಪಂಜಾಬ್‌ನಲ್ಲಿ (Punjab) ತನ್ನ ಹೆಲಿಕಾಪ್ಟರ್ ಅನ್ನು ತಡೆಹಿಡಿಯಲಾಗಿತ್ತು ಎಂದು ಹೇಳುವ ಮೂಲಕ 2014 ರ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.2014 ರ ರಾಷ್ಟ್ರೀಯ ಚುನಾವಣೆಯ ಪ್ರಚಾರಕ್ಕಾಗಿ ಪಂಜಾಬ್‌ಗೆ ಹೋಗಿದ್ದೆ ಎಂದು ಪ್ರಧಾನಿ ಮೋದಿ ಹೇಳಿದರು. ಆಗ ನನ್ನನ್ನು ಬಿಜೆಪಿಯ ಸಂಭಾವ್ಯ ಪ್ರಧಾನಿ ಎನ್ನಲಾಗಿತ್ತು. “ಪ್ರಧಾನಿ ಅಭ್ಯರ್ಥಿಗಾಗಿ ನನ್ನ ಹೆಸರನ್ನು ಘೋಷಿಸಲಾಗಿತ್ತು. ನಾನು ಪಠಾಣ್‌ಕೋಟ್ ಮತ್ತು ಹಿಮಾಚಲಕ್ಕೆ ಪ್ರಚಾರಕ್ಕಾಗಿ ಭೇಟಿ ನೀಡಬೇಕಾಗಿತ್ತು. ಆದರೆ ಅವರ ಯುವರಾಜ (ರಾಜಕುಮಾರ) ಅಮೃತಸರದಲ್ಲಿ ಇದ್ದ ಕಾರಣ ನನ್ನ ಹೆಲಿಕಾಪ್ಟರ್‌ಗೆ ಹಾರಲು ಬಿಡಲಿಲ್ಲ. ಹಾಗಾಗಿ ಪ್ರತಿಪಕ್ಷಗಳಿಗೆ ಕೆಲಸ ಮಾಡಲು ಬಿಡದ ಪರಿಪಾಠ ಕಾಂಗ್ರೆಸ್ಸಿಗಿದೆ ಎಂದು ಪಂಜಾಬ್‌ನಲ್ಲಿ ಭಾನುವಾರದ ಚುನಾವಣೆಗೆ ಮುನ್ನ ಜಲಂಧರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದರು. ಆದಾಗ್ಯೂ, ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಹೆಲಿಕಾಪ್ಟರ್‌ಗೆ ಚಂಡೀಗಢದ ರಾಜೇಂದ್ರ ಪಾರ್ಕ್‌ನಿಂದ ಟೇಕ್ ಆಫ್ ಆಗಲು ಸೋಮವಾರ ಅವಕಾಶ ನೀಡಲಾಗಿಲ್ಲ. ಪ್ರಧಾನಿ ಭೇಟಿಯ ಕಾರಣ “ನೊ-ಫ್ಲೈ ಝೋನ್” ಆಗಿದ್ದರಿಂದ ಚನ್ನಿ ಅವರ ಹೆಲಿಕಾಪ್ಟರ್ ಹಾರಲು ಅನುಮತಿ ನಿರಾಕರಿಸಲಾಗಿತ್ತು ಎಂದು ವರದಿಯಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಚುನಾವಣಾ ರ್ಯಾಲಿಗಾಗಿ ಮುಖ್ಯಮಂತ್ರಿ ಪಂಜಾಬ್‌ನ ಹೋಶಿಯಾರ್‌ಪುರಕ್ಕೆ ತೆರಳುತ್ತಿದ್ದರು. ಆದರೆ, ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್‌ಗೆ ಹೋಶಿಯಾರ್‌ಪುರದಲ್ಲಿ ಇಳಿಯಲು ಅನುಮತಿ ನೀಡಲಾಗಿತ್ತು.

ಪಂಜಾಬ್ ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸರ್ಕಾರ ನಡೆಯದಂತೆ ಅಡ್ಡಿಪಡಿಸಲು ಯತ್ನಿಸಿದ ನಂತರ ಸಿಂಗ್ ಅವರನ್ನು ಅವಮಾನಿಸಿದೆ. ಕಾಂಗ್ರೆಸ್ (Congress) ರಿಮೋಟ್ ಕಂಟ್ರೋಲ್​​ನಲ್ಲಿ ಅಧಿಕಾರ ನಡೆಸುತ್ತದೆ ಎಂದು ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸರ್ಕಾರವು “ರಿಮೋಟ್ ಕಂಟ್ರೋಲ್ ಮೂಲಕ” ಅಮರಿಂದರ್ ಸಿಂಗ್ ಅವರ ಸರ್ಕಾರವನ್ನು ನಡೆಸುತ್ತಿದೆ ಬಗ್ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆಗಳನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ” ಕ್ಯಾಪ್ಟನ್ ಸರ್ಕಾರವನ್ನು ದಿಲ್ಲಿಯಿಂದ ನಡೆಸುವುದು ನಮಗೆ ಇಷ್ಟವಿಲ್ಲ ಎಂದು ಅವರು ಹೇಳಿದರು. ಇದರರ್ಥ ಕಾಂಗ್ರೆಸ್ ಸರ್ಕಾರಗಳು ಒಂದು ಕುಟುಂಬದಿಂದ ರಿಮೋಟ್ ಕಂಟ್ರೋಲ್‌ನಿಂದ ನಡೆಸಲ್ಪಡುತ್ತವೆ, ಸಂವಿಧಾನದಿಂದಲ್ಲ” ಎಂದು ಮೋದಿ ಜಲಂಧರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು. ಕ್ಯಾಪ್ಟನ್ ಕೇಂದ್ರ ಸರ್ಕಾರದ ಜೊತೆ ಕೆಲಸ ಮಾಡಿದ್ದರೆ, ಅವರು ಸಂವಿಧಾನದ ಅಡಿಯಲ್ಲಿ ಫೆಡರಲಿಸಂನ ತತ್ವವನ್ನು ಅನುಸರಿಸಲಿಲ್ಲವೇ? ಕ್ಯಾಪ್ಟನ್ ನಮ್ಮ ಮಾತನ್ನು ಕೇಳಲಿಲ್ಲ ಆದರೆ ಕೇಂದ್ರ ಸರ್ಕಾರದ ಮಾತು ಕೇಳುತ್ತಾರೆ ಎಂದು  ಕಾಂಗ್ರೆಸ್ ನಾಯಕರು ಹೇಳುತ್ತಾರೆ, ಅವರು ಪಂಜಾಬ್ ಸರ್ಕಾರಕ್ಕೆ ಅಡ್ಡಿಪಡಿಸಿದರು ಮತ್ತು ಅಂತಿಮವಾಗಿ ಕ್ಯಾಪ್ಟನ್ ಅವರನ್ನು ಹೊರಹಾಕಿದರು. ಕಾಂಗ್ರೆಸ್ ಈಗ ತನ್ನ ದುಷ್ಕೃತ್ಯಗಳಿಗೆ ಬೆಲೆ ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು.

“ಕಾಂಗ್ರೆಸ್‌ನ ಸ್ಥಿತಿ ನೋಡಿ. ಅವರದೇ ಪಕ್ಷ ಛಿದ್ರವಾಗುತ್ತಿದೆ. ಅವರದೇ ನಾಯಕರೇ ಅವರನ್ನು ಬಯಲಿಗೆಳೆಯುತ್ತಿದ್ದಾರೆ. ಇಷ್ಟೆಲ್ಲಾ ಆಂತರಿಕ ಕಚ್ಚಾಟವಿರುವ ಪಕ್ಷ – ಪಂಜಾಬ್‌ಗೆ ಸ್ಥಿರ ಸರ್ಕಾರ ನೀಡಬಹುದೇ?” ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.  ಪಂಜಾಬ್ ಹೊಸ ಸರ್ಕಾರಕ್ಕಾಗಿ ಭಾನುವಾರ ಮತದಾನ ನಡೆಯಲಿದೆ.

ಪಿಎಂ ಮೋದಿ ತಮ್ಮ ಪಕ್ಷದ ಪ್ರಚಾರಕ್ಕಾಗಿ ಹೊಸ ಘೋಷಣೆಯನ್ನು ಪ್ರಾರಂಭಿಸಿದರು: “ನವ ಪಂಜಾಬ್, ಬಿಜೆಪಿ ದೇ ನಾಲ್, ನವ ಪಂಜಾಬ್, ನಯೀ ಟೀಮ್ ದೇ ನಾಲ್. (ಬಿಜೆಪಿಯೊಂದಿಗೆ ಹೊಸ ಪಂಜಾಬ್, ಹೊಸ ತಂಡದೊಂದಿಗೆ ಹೊಸ ಪಂಜಾಬ್).

ಕಳೆದ ತಿಂಗಳ ಭದ್ರತಾ ಲೋಪದ ನಂತರ ಪಂಜಾಬ್‌ನಲ್ಲಿ ಪ್ರಧಾನಿ ತಮ್ಮ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ರೈತ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ರ್ಯಾಲಿಗೆ ಹೋಗುವ ಮಾರ್ಗದಲ್ಲಿ ಫ್ಲೈಓವರ್‌ನಲ್ಲಿ 20 ನಿಮಿಷಗಳ ಕಾಲ ಕಳೆಯಬೇಕಾಯಿತು.

“ನಾನು ದೇವಿ ಕಾ ತಲಾಬ್‌ಗೆ ಭೇಟಿ ನೀಡಲು ಬಯಸಿದ್ದೆ ಆದರೆ ಭದ್ರತೆಯ ಕಾರಣ ಅದನ್ನು ಅನುಮತಿಸಲಾಗುವುದಿಲ್ಲ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. ಇದು ಪಂಜಾಬ್‌ನಲ್ಲಿ ಭದ್ರತೆಯ ಸ್ಥಿತಿಯಾಗಿದೆ” ಎಂದು ಪ್ರಧಾನಿ ಮೋದಿ ಟೀಕಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಗಳು ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತಿವೆ: ಪಂಜಾಬ್​​ನಲ್ಲಿ ಮೋದಿ ವಾಗ್ದಾಳಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ