Powerful Passports: ಯಾವ ದೇಶಗಳ ಪಾಸ್ ಪೋರ್ಟಿಗೆ ಶಕ್ತಿ ಹೆಚ್ಚು? ಇಲ್ಲಿದೆ ಪಟ್ಟಿ

ವಿಶ್ವದ ಅತಿ ಪ್ರಬಲ ಪಾಸ್ ಪೋರ್ಟ್ ಗಳ ಪಟ್ಟಿಯೊಂದು ಪ್ರಕಟವಾಗಿದ್ದು ಜಪಾನ್ ಅಗ್ರಗಣ್ಯ ಸ್ಥಾನದಲ್ಲಿದೆ. ಭಾರತ 85ನೇ ಸ್ಥಾನದಲ್ಲಿದೆ. ಇದು 2023ರ ಹೆನ್ಲೀ ಪಾಸ್ ಪೋರ್ಟ್ ಸೂಚ್ಯಂಕದ ಪಟ್ಟಿಯಲ್ಲಿ ಕಂಡು ಬಂದ ಮಾಹಿತಿ.

Powerful Passports: ಯಾವ ದೇಶಗಳ ಪಾಸ್ ಪೋರ್ಟಿಗೆ ಶಕ್ತಿ ಹೆಚ್ಚು? ಇಲ್ಲಿದೆ ಪಟ್ಟಿ
ಸಾಂದರ್ಭಿಕ ಚಿತ್ರ Image Credit source: google image
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 11, 2023 | 2:17 PM

ದೆಹಲಿ: ವಿಶ್ವದ ಅತಿ ಪ್ರಬಲ ಪಾಸ್ ಪೋರ್ಟ್ ಗಳ ಪಟ್ಟಿಯೊಂದು (World’s Most Powerful Passwords) ಪ್ರಕಟವಾಗಿದ್ದು ಜಪಾನ್ ಅಗ್ರಗಣ್ಯ ಸ್ಥಾನದಲ್ಲಿದೆ. ಭಾರತ 85ನೇ ಸ್ಥಾನದಲ್ಲಿದೆ. ಇದು 2023ರ ಹೆನ್ಲೀ ಪಾಸ್ ಪೋರ್ಟ್ ಸೂಚ್ಯಂಕದ ಪಟ್ಟಿಯಲ್ಲಿ (Henley Passport Index) ಕಂಡು ಬಂದ ಮಾಹಿತಿ. ಲಂಡನ್ ಮೂಲದ ಗ್ಲೋಬಲ್ ಸಿಟಜನ್ ಶಿಪ್ ಮತ್ತು ಹೆನ್ಲೀ ಅಂಡ್ ಪಾರ್ಟರ್ನ್ಸ್ ಸಂಸ್ಥೆ ಜಂಟಿಯಾಗಿ ಬಿಡುಗಡೆ ಮಾಡಿದ ಪಟ್ಟಿ. ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ ಪೋರ್ಟ್ ಅಸೋಷಿಯೇಶನ್ (IATA) ನೀಡುವ ದತ್ತಾಂಶವನ್ನು ಆಧರಿಸಿ ಹೆನ್ಲೀ ಪಾಸ್ ಪೋರ್ಟ್ ಇಂಡೆಕ್ಸ್ ರೂಪಿಸಲಾಗಿದೆ.

ಈ ಶಕ್ತಿಶಾಲಿ ಪಾಸ್ ಪೋರ್ಟುಗಳ ಪಟ್ಟಿಯನ್ನು ಹೆನ್ಲೀ ಪ್ರತೀ ವರ್ಷವೂ ಪ್ರಕಟಿಸುತ್ತದೆ. ಈ ಬಾರಿಯ ಸೂಚ್ಯಂಕದಲ್ಲಿ ವಿಶ್ವದ 199 ಪಾಸ್ ಪೋರ್ಟುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಹಾಗೆಯೇ 227 ಪ್ರಯಾಣ ಸ್ಥಳಗಳನ್ನು ಪರಿಗಣಿಸಲಾಗಿದೆ.

ಹೆನ್ಲೀ ಪಾಸ್ ಪೋರ್ಟ್ ಇಂಡೆಕ್ಸ್ ಪಟ್ಟಿಯಲ್ಲಿ ಜಪಾನ್ ದೇಶ 193 ಅಂಕಗಳೊಂದಿಗೆ ಅಗ್ರಸ್ಥಾನ ಹೊಂದಿದೆ. ಸಿಂಗಾಪುರ ಮತ್ತು ಸೌತ್ ಕೊರಿಯಾ ತಲಾ 192 ಅಂಕಗಳೊಂದಿಗೆ ಜಂಟಿ ಎರಡನೇ ಸ್ಥಾನ ಪಡೆದಿವೆ. ಅಗ್ರ 10 ಸ್ಥಾನಗಳನ್ನು 30 ದೇಶಗಳು ಹಂಚಿಕೊಂಡಿವೆ.

ಇದನ್ನು ಓದಿ:E- Passports: ಮೈಕ್ರೋಚಿಪ್​ನೊಂದಿಗೆ ಭಾರತದಲ್ಲಿ ಪರಿಚಯ ಆಗಲಿದೆ ಇ-ಪಾಸ್​ಪೋರ್ಟ್​; ಏನಿದರ ವೈಶಿಷ್ಟ್ಯ, ಹೇಗೆ ವಿಭಿನ್ನ?

ಭಾರತದ ಸ್ಥಾನ?

ಭಾರತ 59 ಅಂಕಗಳೊಂದಿಗೆ ಹೆನ್ಲೀ ಪಾಸ್ ಪೋರ್ಟ್ ಇಂಡೆಕ್ಸ್ ನಲ್ಲಿ 85ನೇ ಸ್ಥಾನ ಪಡೆದಿದೆ. ಹಿಂದಿನ 4 ವರ್ಷಗಳಲ್ಲಿ ಭಾರತ 82ರಿಂದ 85ನೇ ಸ್ಥಾನಗಳಲ್ಲೇ ಸುತ್ತಾಡುತ್ತಿದೆ.

ವಿಶ್ವ ಪ್ರಭಾವಿ ಪಾಸ್ ಪೋರ್ಟ್​ಗಳ ಇಂಡೆಕ್ಸ್:

1) ಜಪಾನ್- 193

2) ಸಿಂಗಾಪುರ್, ಸೌತ್ ಕೊರಿಯಾ- 192

3) ಜರ್ಮನಿ, ಸ್ಪೇನ್- 190

4) ಫಿನ್ಲೆಂಡ್, ಇಟಲಿ, ಲುಕ್ಸೆಂಬರ್ಗ್- 189

5) ಆಸ್ಟ್ರಿಯಾ, ಡೆನ್ಮಾರ್ಕ್, ನೆದರ್ ಲೆಂಡ್ಸ್, ಸ್ವೀಡನ್- 188

6) ಫ್ರಾನ್ಸ್, ಐರ್ಲೆಂಡ್, ಪೋರ್ಚುಗಲ್, ಯುಕೆ- 187

7) ಬೆಲ್ಜಿಯಂ, ಚೆಕ್ ರಿಪಬ್ಲಿಕ್, ನ್ಯೂಜಿಲೆಂಡ್, ನಾರ್ವೆ, ಸ್ವಿಟ್ಜರ್ಲೆಂಡ್, ಯುಎಸ್- 186

8) ಆಸ್ಟ್ರೇಲಿಯಾ, ಕೆನಡಾ, ಗ್ರೀಸ್, ಮಾಲ್ಟಾ- 185

9) ಪೋಲೆಂಡ್, ಹಂಗೆರಿ- 184

10) ಲಿತುವೇನಿಯಾ, ಸ್ಲೊವಾಕಿಯಾ- 183

11) ಭಾರತ- 59

ಶಕ್ತಿಶಾಲಿ ಪಾಸ್ ಪೋರ್ಟ್ ಎಂದರೇನು?

ವಿದೇಶಕ್ಕೆ ಹೋಗಲು ಪಾಸ್ ಪೋರ್ಟ್ ಬೇಕು. ಹಾಗೆಯೇ, ಹಲವು ವಿದೇಶೀ ಸ್ಥಳಗಳಿಗೆ ಹೋಗಲು ಪಾಸ್ ಪೋರ್ಟ್ ಜೊತೆಗೆ ವೀಸಾ ಕೂಡ ಬೇಕು. ಕೆಲ ದೇಶಗಳ ಪಾಸ್ ಪೋರ್ಟ್​ದಾರರಿಗೆ ಕೆಲ ಸ್ಥಳಗಳಿಗೆ ಹೋಗಲು ವೀಸಾ ಅಗತ್ಯ ಇರುವುದಿಲ್ಲ. ವೀಸಾ ರಹಿತವಾಗಿ ಅವರು ಪ್ರಯಾಣಿಸಬಹುದು. ಈ ರೀತಿ ಅತಿ ಹೆಚ್ಚು ಸ್ಥಳಗಳಿಗೆ ವೀಸಾರಹಿತವಾಗಿ ಹೋಗಲು ಅವಕಾಶ ಇರುವ ಪಾಸ್ ಪೋರ್ಟ್​ನ್ನು ಅತಿಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ.

ಹೆನ್ಲೀ ಪಾಸ್ ಪೋರ್ಟ್ ಇಂಡೆಕ್ಸ್ ರೀತಿ ಇತರ ಬೇರೆ ಪಟ್ಟಿಗಳೂ ಇವೆ. ಅದರಲ್ಲಿ ಪ್ರಮುಖವಾದುದು ಆರ್ಟಾನ್ ಕ್ಯಾಪಿಟಲ್​​ನದ್ದು. ಇದು ರಿಯಲ್ ಟೈಮ್ ಇಂಡೆಕ್ಸ್ ನೀಡುತ್ತದೆ. ಇದರ ಪಾಸ್ ಪೋರ್ಟ್ ಇಂಡೆಕ್ಸ್ ಪಟ್ಟಿಯಲ್ಲಿ ಯುಎಇ ಮೊದಲ ಸ್ಥಾನದಲ್ಲಿದೆ. ಸ್ವೀಡನ್, ಜರ್ಮನಿ, ಫಿನ್ಲೆಂಡ್, ಲುಕ್ಸೆಂಬರ್ಗ್, ಸ್ಪೇನ್ ದೇಶಗಳು ನಂತರದ ಸ್ಥಾನದಲ್ಲಿವೆ. ಭಾರತದ ಪಾಸ್ ಪೋರ್ಟ್ 71ನೇ ಸ್ಥಾನ ಪಡೆದಿದೆ. ಯೆಮೆನ್, ಸೊಮಾಲಿಯಾ, ಪಾಕಿಸ್ತಾನ, ಇರಾಕ್ ಮತ್ತು ಅಫ್ಘಾನಿಸ್ತಾನ ದೇಶಗಳು ಆರ್ಟನ್ ಪಾಸ್ ಪೋರ್ಟ್ ಇಂಡೆಕ್ಸ್ ನಲ್ಲಿ ಕೊನೆಯ ಸ್ಥಾನದಲ್ಲಿವೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Wed, 11 January 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್