AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರ ಪತ್ನಿ ಐದು ತಿಂಗಳ ಗರ್ಭಿಣಿ’; ಸಂಪತ್ ಸಾವಿನ ಬಗ್ಗೆ ಬೇಸರ ಹೊರಹಾಕಿದ ವೈಷ್ಣವಿ

Vaishnavi Gowda: ವೈಷ್ಣವಿ ಗೌಡ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ‘ಅಗ್ನಿಸಾಕ್ಷಿ’ ಧಾರಾವಾಹಿ. ಈ ಧಾರಾವಾಹಿ ಮೂಲಕ ಅವರು ಸನ್ನಿಧಿ ಎಂದೇ ಜನಪ್ರಿಯತೆ ಪಡೆದರು. ಈ ಧಾರಾವಾಹಿಯಲ್ಲಿ ವೈಷ್ಣವಿ ಸಹೋದರನ ಪಾತ್ರವನ್ನು ಸಂಪತ್ ಮಾಡಿದ್ದರು.

‘ಅವರ ಪತ್ನಿ ಐದು ತಿಂಗಳ ಗರ್ಭಿಣಿ’; ಸಂಪತ್ ಸಾವಿನ ಬಗ್ಗೆ ಬೇಸರ ಹೊರಹಾಕಿದ ವೈಷ್ಣವಿ
ಪತ್ನಿ ಜೊತೆ ಸಂಪತ್​- ವೈಷ್ಣವಿ ಗೌಡ
ರಾಜೇಶ್ ದುಗ್ಗುಮನೆ
|

Updated on:Apr 26, 2023 | 8:08 AM

Share

‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಫೇಮಸ್ ಆದ ನಟ ಸಂಪತ್ ಜಯರಾಮ್ (Sampath Jaya Ram) ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೆಂಡತಿಗೆ ಹೆದರಿಸಲು ಹೋಗಿ ಅವರು ಜೀವ ಕಳೆದುಕೊಂಡರು ಎಂದು ನಟ ರಾಜೇಶ್ ಧ್ರುವ ಹೇಳಿದ್ದರು. ಈಗ ಸಂಪತ್ ಸಾವಿನ ಬಗ್ಗೆ ನಟಿ ವೈಷ್ಣವಿ ಗೌಡ ಮಾತನಾಡಿದ್ದಾರೆ. ವೈಷ್ಣವಿ ಗೌಡ ಅವರು ‘ಅಗ್ನಿಸಾಕ್ಷಿ’ (Agnisakshi Serial) ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಸಂಪತ್ ರಾಜ್ ಜೊತೆ ಅವರಿಗೆ ಒಳ್ಳೆಯ ಒಡನಾಟ ಇತ್ತು. ಈಗ ಅವರನ್ನು ಕಳೆದುಕೊಂಡಿದ್ದು ವೈಷ್ಣವಿ ಗೌಡ ಅವರಿಗೆ ಬೇಸರ ಮೂಡಿಸಿದೆ. ಸಂಪತ್ ಪತ್ನಿಯ ಪರಿಸ್ಥಿತಿ ನೆನೆದು ಬೇಸರಗೊಂಡಿದ್ದಾರೆ.

ವೈಷ್ಣವಿ ಗೌಡ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ‘ಅಗ್ನಿಸಾಕ್ಷಿ’ ಧಾರಾವಾಹಿ. ಈ ಧಾರಾವಾಹಿ ಮೂಲಕ ಅವರು ಸನ್ನಿಧಿ ಎಂದೇ ಫೇಮಸ್ ಆದರು. ಈ ಧಾರಾವಾಹಿಯಲ್ಲಿ ವೈಷ್ಣವಿ ಸಹೋದರನ ಪಾತ್ರವನ್ನು ಸಂಪತ್ ಮಾಡಿದ್ದರು. ಸಂಪತ್ ತೆಗೆದುಕೊಂಡ ನಿರ್ಧಾರ ವೈಷ್ಣವಿಗೆ ಬೇಸರ ತರಿಸಿದೆ. ಅವರು ಈ ಬಗ್ಗೆ ಹಿಂದುಸ್ತಾನ್ ಟೈಮ್ಸ್ ಜೊತೆ ಮಾತನಾಡಿದ್ದಾರೆ.

‘ಸಂಪತ್ ಸೆಟ್‌ನಲ್ಲಿ ಯಾವಾಗಲೂ ನಗುತ್ತಿದ್ದರು ಮತ್ತು ಇತರರನ್ನು ನಗಿಸುತ್ತಿದ್ದರು. ಅವರು ಧಾರಾವಾಹಿಯಲ್ಲಿ ನನ್ನ ಸಹೋದರನ ಪಾತ್ರ ನಿರ್ವಹಿಸಿದ್ದರು. ನಮ್ಮಿಬ್ಬರ ಕಾಂಬಿನೇಷನ್ ದಿನಾಲೂ ಇರುತ್ತಿರಲಿಲ್ಲ. ಆದರೆ, ಇದ್ದಾಗೆಲ್ಲ ಅವರು ಖುಷಿಯಿಂದ ಮಾತನಾಡುತ್ತಿದ್ದರು. ಜೀವನದ ಬಗ್ಗೆ ಅವರು ಎಂದಿಗೂ ದೂರಿಲ್ಲ. ಸೆಟ್‌ನಲ್ಲಿ ಅವರು ಯಾವಾಗಲೂ ಬೇಸರದಲ್ಲಿ ಇದ್ದಿದ್ದನ್ನು ನೋಡಿಲ್ಲ’ ಎಂದು ವೈಷ್ಣವಿ ಗೌಡ ಹೇಳಿದ್ದಾರೆ.

‘ಅಗ್ನಿಸಾಕ್ಷಿ ಕೊನೆಗೊಂಡಾಗಿನಿಂದ ಸಂಪತ್​ನ​ ಭೇಟಿ ಆಗಿರಲಿಲ್ಲ. ಅವರು ನನ್ನನ್ನು ಪಾರ್ಟಿ ಮತ್ತು ಮದುವೆಗೆ ಕರೆದಿದ್ದರು. ಆದರೆ ಶೂಟಿಂಗ್​ನಲ್ಲಿ ಬ್ಯುಸಿ ಇದ್ದ ಕಾರಣ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ನಾನು ಕಾಲ್​​ನಲ್ಲಿ ಮಾತನಾಡಿ ಅವರಿಗೆ ಶುಭಾಶಯ ತಿಳಿಸಿದ್ದೆ. ಸಂಪತ್​ಗೆ ಮದುವೆಯಾಗಿ ಒಂದು ವರ್ಷವೂ ಆಗಿಲ್ಲ. ನನಗೆ ತಿಳಿದಿರುವ ಪ್ರಕಾರ ಅವರ ಪತ್ನಿ ಐದು ತಿಂಗಳ ಗರ್ಭಿಣಿ. ಹೀಗಿರುವಾಗ ಅವರಿಗೆ ಯಾವ ವಿಚಾರ ಆತ್ಮಹತ್ಯೆಗೆ ಪ್ರೇರೇಪಿಸಿತೋ ಗೊತ್ತಿಲ್ಲ’ ಎಂದಿದ್ದಾರೆ ವೈಷ್ಣವಿ.

ಇದನ್ನೂ ಓದಿ: Sampath Jayaram: ಕನ್ನಡ ಸೀರಿಯಲ್​ ನಟ ಸಂಪತ್​ ಜಯರಾಮ್​ ಆತ್ಮಹತ್ಯೆ; ಕಂಬನಿ ಮಿಡಿದ ಸೆಲೆಬ್ರಿಟಿಗಳು

ವೈಷ್ಣವಿ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಸ್ಪರ್ಧಿ ಆಗಿದ್ದರು. ಅವರು ಈಗ ಜೀ ಕನ್ನಡದಲ್ಲಿ ಪ್ರಸಾರ ಆಗಲಿರುವ ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿ ಹಲವು ತಿಂಗಳು ಕಳೆದಿದೆ. ಆದರೆ, ಧಾರಾವಾಹಿ ಪ್ರಸಾರ ದಿನಾಂಕ ಈವರೆಗೆ ಘೋಷಣೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:04 am, Wed, 26 April 23

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ