ಶುಕ್ರವಾರವೂ ಭರ್ಜರಿಯಾಗಿ ಗಳಿಕೆ ಮಾಡಿದ ಪವನ್ ಕಲ್ಯಾಣ್ ‘ಓಜಿ’
OG Movie Collection: ಸದ್ಯ ಚಿತ್ರದ ಒಟ್ಟಾರೆ ಕಲೆಕ್ಷನ್ 104 ಕೋಟಿ ರೂಪಾಯಿ ಆಗಿದೆ. ಸಿನಿಮಾ ಒಂದು ಎರಡೇ ದಿನಕ್ಕೆ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ ಎಂದರೆ ಚಿತ್ರ ಗೆಲುವು ಕಂಡಿದೇ ಎಂದೇ ಅರ್ಥ. ಇದು ಪವನ್ ಕಲ್ಯಾಣ್ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಈ ಗೆಲುವನ್ನು ಅವರು ಖುಷಿಯಿಂದ ಆಚರಿಸಿದ್ದಾರೆ. ಪವನ್ ಕಲ್ಯಾಣ್ ಕೂಡ ಖುಷಿ ಪಟ್ಟಿದ್ದಾರೆ.

ಪವನ್ ಕಲ್ಯಾಣ್ ನಟನೆಯ ‘ಓಜಿ’ ಚಿತ್ರವು (OG Movie) ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದಂತೂ ಸುಳ್ಳಲ್ಲ. ಈ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆಯಿತು ಎನ್ನಬಹುದು. ಈ ಚಲನಚಿತ್ರದ ಶೂಟಿಂಗ್ ಬಹಳ ಸಮಯದಿಂದ ಹಾಗೆಯೇ ಉಳಿದುಕೊಂಡಿತ್ತು. ಈಗ ಪವನ್ ಕಲ್ಯಾಣ್ ಅವರು ಅದನ್ನು ಮಾಡಿಕೊಟ್ಟಿದ್ದಾರೆ. ಈಗ ಪವನ್ ಕಲ್ಯಾಣ್ ‘ಓಜಿ’ ಸಿನಿಮಾ ರಿಲೀಸ್ ಆಗಿದ್ದು ದೊಡ್ಡ ಯಶಸ್ಸು ಕಂಡಿದೆ. ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಓಜಿ’ ಚಿತ್ರ ಸೆಪ್ಟೆಂಬರ್ 25ರಂದು ರಿಲೀಸ್ ಆಗಿದೆ. ಅದಕ್ಕೂ ಒಂದು ದಿನ ಮೊದಲು ಅಂದರೆ ಸೆಪ್ಟೆಂಬರ್ 24ರಂದು ಭರ್ಜರಿಯಾಗಿ ಪ್ರೀಮಿಯರ್ ಶೋ ಮಾಡಲಾಯಿತು. ಈ ವೇಳೆ ಚಿತ್ರಕ್ಕೆ 21 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಸೆಪ್ಟೆಂಬರ್ 25ರಂದು ಸಿನಿಮಾ ಚಿತ್ರವು 63.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು, ಶುಕ್ರವಾರವ ಚಿತ್ರವು 19.25 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಸದ್ಯ ಚಿತ್ರದ ಒಟ್ಟಾರೆ ಕಲೆಕ್ಷನ್ 104 ಕೋಟಿ ರೂಪಾಯಿ ಆಗಿದೆ. ಸಿನಿಮಾ ಒಂದು ಎರಡೇ ದಿನಕ್ಕೆ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ ಎಂದರೆ ಚಿತ್ರ ಗೆಲುವು ಕಂಡಿದೇ ಎಂದೇ ಅರ್ಥ. ಇದು ಪವನ್ ಕಲ್ಯಾಣ್ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಈ ಗೆಲುವನ್ನು ಅವರು ಖುಷಿಯಿಂದ ಆಚರಿಸಿದ್ದಾರೆ. ಪವನ್ ಕಲ್ಯಾಣ್ ಕೂಡ ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ: ‘ಓಜಿ’ ಅಬ್ಬರದ ಕಲೆಕ್ಷನ್; ಮೊದಲ ದಿನವೇ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಪವನ್ ಸಿನಿಮಾ
ಪವನ್ ಕಲ್ಯಾಣ್ ಅವರಿಗೆ ದೊಡ್ಡ ಗೆಲುವು ಸಿಗದೇ ಸಾಕಷ್ಟು ಸಮಯ ಕಳೆದಿದ್ದವು. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಈಗ ಕೊನೆಗೂ ಅದು ನೆರವೇರುತ್ತಿದೆ ಎಂದೇ ಹೇಳಬಹುದು. ಈ ಸಿನಿಮಾದ ಒಟ್ಟೂ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರವನ್ನು ಸುಜಿತ್ ಅವರು ನಿರ್ದೇಶನ ಮಾಡಿದ್ದಾರೆ. ಅವರು ‘ಸಾಹೋ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡೇ ಇರಲಿಲ್ಲ. ಈಗ ಅವರಿಗೂ ದೊಡ್ಡ ಬ್ರೇಕ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:56 am, Sat, 27 September 25



