AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜನಾಗೆ ಮತ್ತೆ ಮೋಸ ಮಾಡಿದ ಸಹ ಸ್ಪರ್ಧಿಗಳು, ಬಿಗ್​​ಬಾಸ್ ಮನೆಯಿಂದಲೇ ಹೊರಕ್ಕೆ

Sanjana Galrani: ಕನ್ನಡದ ನಟಿ ಸಂಜನಾ ಗಲ್ರಾನಿ ಬಿಗ್​​ಬಾಸ್ ತೆಲುಗು ಸೀಸನ್ 09ರ ಸ್ಪರ್ಧಿಯಾಗಿದ್ದು, ಕಳೆದ ಮೂರು ವಾರಗಳಲ್ಲಿ ಚೆನ್ನಾಗಿ ಆಡಿ ಮನೆಯ ಪ್ರಮುಖ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಆದರೆ ಆರಂಭದಿಂದಲೂ ಮನೆಯ ಕೆಲವು ಸದಸ್ಯರು ಸಂಜನಾರನ್ನು ಟಾರ್ಗೆಟ್ ಮಾಡುತ್ತಲೇ ಇದ್ದಾರೆ. ಇದೀಗ ಸಂಜನಾರನ್ನು ಮನೆಯಿಂದಲೇ ಹೊರಗೆ ಹಾಕಿದ್ದಾರೆ. ಆದರೆ ಅಲ್ಲೊಂದು ಟ್ವಿಸ್ಟ್ ಇದೆ....

ಸಂಜನಾಗೆ ಮತ್ತೆ ಮೋಸ ಮಾಡಿದ ಸಹ ಸ್ಪರ್ಧಿಗಳು, ಬಿಗ್​​ಬಾಸ್ ಮನೆಯಿಂದಲೇ ಹೊರಕ್ಕೆ
Sanjana Galrani
ಮಂಜುನಾಥ ಸಿ.
|

Updated on: Sep 27, 2025 | 10:45 AM

Share

ನಟಿ ಸಂಜನಾ ಗಲ್ರಾನಿ ತೆಲುಗು ಬಿಗ್​​ಬಾಸ್ ಸೀಸನ್ 09ರಲ್ಲಿ ಸ್ಪರ್ಧಿಯಾಗಿ ಭಾಗಿ ಆಗಿದ್ದಾರೆ. ಶೋ ಪ್ರಾರಂಭವಾಗಿ ನಾಳೆಗೆ ಮೂರು ವಾರಗಳಾಗುತ್ತವೆ. ಸಂಜನಾ ಗಲ್ರಾನಿ ಆರಂಭದಿಂದಲೂ ಬಿಗ್​​ಬಾಸ್ ಮನೆಯಲ್ಲಿ ಇತರೆ ಸ್ಪರ್ಧಿಗಳಿಗಿಂತಲೂ ಭಿನ್ನವಾಗಿ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಫಿಲ್ಟರ್ ಇಲ್ಲದೆ, ನೇರಾ-ನೇರ ಮಾತಿನ ಸಂಜನಾ ಗಲ್ರಾನಿ ಮನೆಯಲ್ಲಿ ಹಲವರ ವಿರೋಧವನ್ನೂ ಸಹ ಕಟ್ಟಿಕೊಂಡಿದ್ದಾರೆ. ಆದರೆ ಇದೇ ಕಾರಣಕ್ಕೆ ಈಗ ಮನೆಯ ಕೆಲ ಸದಸ್ಯರು ಸೇರಿಕೊಂಡು ಸಂಜನಾರನ್ನು ನೇರವಾಗಿ ಮನೆಯಿಂದಲೇ ಹೊರಗೆ ಹಾಕಿದ್ದಾರೆ.

ಶುಕ್ರವಾರದ ಎಪಿಸೋಡ್​​​ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆಯಿತು, ಇಮಾನ್ಯುಯೆಲ್ ಮನೆಯ ಮೂರನೇ ಕ್ಯಾಪ್ಟನ್ ಆದರು. ಕ್ಯಾಪ್ಟೆನ್ಸಿ ಟಾಸ್ಕ್ ಬಳಿಕ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ದಿವ್ಯಾ ನಿಖಿತ ಕಾಲಿಟ್ಟರು. ಮನೆಗೆ ಬಂದವರೇ ಕಾಮನರ್ಸ್ ಮೇಲೆ ಹರಿಹಾಯ್ದರು. ಅವರ ತಪ್ಪುಗಳನ್ನು ಎತ್ತಿ ತೋರಿಸಿದರು. ಆ ಬಳಿಕ ಎಲ್ಲರೂ ದಿನದ ಟಾಸ್ಕ್​​ಗಳನ್ನು ಮುಗಿಸಿ ಮಲಗಿರುವಾಗ ಬಿಗ್​​ಬಾಸ್ ಸೈರನ್ ಭಾರಿಸಿದರು. ನಿದ್ದೆಯಿಂದ ಎದ್ದ ಸ್ಪರ್ಧಿಗಳಿಗೆ ಮಿಡ್ ವೀಕ್ ಎಲಿಮಿನೇಷನ್ ಎಂಬ ಶಾಕ್ ನೀಡಿದರು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಖುಷಿಯಾಗಿದ್ದಾರೆ ಸಂಜನಾ ಗಲ್ರಾನಿ, ವಿಡಿಯೋ ನೋಡಿ

ಸಮಾನ್ಯವಾಗಿ ಸೀಸನ್​​ನ ಕೊನೆಯ ವಾರಗಳಲ್ಲಿ ಮಿಡ್ ವೀಕ್ ಎಲಿಮಿನೇಷನ್ ಮಾಡಲಾಗುತ್ತದೆ. ಆದರೆ ಈ ಬಾರಿ ಮೊದಲಲ್ಲೇ ಮಿಡ್ ವೀಕ್ ಎಲಿಮಿನೇಷನ್ ಮಾಡಲಾಗಿದೆ. ಸ್ಪರ್ಧಿಗಳಲ್ಲಿ ಯಾರಿಗೆ ರೆಡ್ ಸೀಡ್ಸ್ ಸಿಕ್ಕದೆಯೋ ಆ ಐದು ಮಂದಿ ಸೇರಿ ಒಬ್ಬರನ್ನು ಮನೆಯಿಂದ ಹೊರಗೆ ಕಳಿಸಬಹುದು ಎಂದು ಬಿಗ್​​ಬಾಸ್ ಹೇಳಿದರು. ಅದರಂತೆ ಐದು ಮಂದಿ ಒಕ್ಕೂರಲಿನಿಂದ ಸಂಜನಾರನ್ನು ಮನೆಯಿಂದ ಹೊರಗೆ ಕಳಿಸುವ ನಿರ್ಣಯ ತೆಗೆದುಕೊಂಡರು. ಇದು ಕೆಲವರಿಗೆ ಶಾಕ್ ನೀಡಿದರೆ ಇನ್ನು ಕೆಲವರಿಗೆ ಖುಷಿ ನೀಡಿತು.

ಆದರೆ ಬಿಗ್​​ಬಾಸ್ ಇಲ್ಲೊಂದು ಟ್ವಿಸ್ಟ್ ನೀಡಿದರು. ಸಂಜನಾರನ್ನು ಮುಖ್ಯ ದ್ವಾರದಿಂದ ಹೊರಗೆ ಹೋಗುವಂತೆ ಹೇಳಿದ ಬಿಗ್​​ಬಾಸ್, ಸಂಜನಾ ಗೇಟಿನಿಂದ ಹೊರಗೆ ಬರುತ್ತಿದ್ದಂತೆ ಅವರನ್ನು ಸೀಕ್ರೆಟ್ ರೂಂಗೆ ಹಾಕಿದರು. ಅಲ್ಲಿಂದಲೇ ಸಂಜನಾ, ಬಿಗ್​​ಬಾಸ್ ಮನೆಯಲ್ಲಿ ನಡೆಯುತ್ತಿರುವ ಎಲ್ಲ ಚಲನವಲನಗಳನ್ನು ನೋಡುವಂತೆ ಮಾಡಿದ್ದಾರೆ. ಈಗ ಸಂಜನಾ, ಬಿಗ್​​ಬಾಸ್ ಮನೆಯಲ್ಲಿ ಯಾರು ತಮ್ಮ ಪರವಾಗಿ. ಯಾರು ತಮ್ಮ ವಿರೋಧವಾಗಿ ಮಾತನಾಡುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದು, ಮತ್ತೆ ಮನೆ ಒಳಗೆ ಹೋದ ಬಳಿಕ ಅವರ ಆಟ ಭಿನ್ನವಾಗಿ ಇರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ