AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಧಕ್ಕೆ ನಿಂತು ಹೋಯ್ತು ಪವನ್ ಕಲ್ಯಾಣ್ ನಟನೆಯ ಸಿನಿಮಾ

‘ಓಜಿ’ ಸಿನಿಮಾನ ಎರಡು ಪಾರ್ಟ್​ಗಳಲ್ಲಿ ತರಬೇಕು ಎಂಬುದು ತಂಡದ ಆಲೋಚನೆ ಆಗಿತ್ತು. ಇದಕ್ಕೆ ಸಿದ್ಧತೆ ಕೂಡ ನಡೆದಿತ್ತು.ಈಗ ನಿರ್ಮಾಪಕ ಡಿವಿವಿ ದಾನಯ್ಯ ಎರಡನೇ ಪಾರ್ಟ್ ಮಾಡುವ ಆಲೋಚನೆ ಕೈ ಬಿಟ್ಟಿದ್ದಾರಂತೆ. ಓಜಿ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ನಿರ್ದೇಶನ ಮಾಡಿದ್ದ ‘ಸಾಹೋ’ ಸಿನಿಮಾ ಕೂಡ ಫ್ಲಾಪ್ ಆಗಿತ್ತು.

ಅರ್ಧಕ್ಕೆ ನಿಂತು ಹೋಯ್ತು ಪವನ್ ಕಲ್ಯಾಣ್ ನಟನೆಯ ಸಿನಿಮಾ
ಪವನ್ ಕಲ್ಯಾಣ್
ರಾಜೇಶ್ ದುಗ್ಗುಮನೆ
|

Updated on:Nov 27, 2025 | 8:59 AM

Share

ಈ ವರ್ಷ ರಿಲೀಸ್ ಆದ ಪವನ್ ಕಲ್ಯಾಣ್ (Pawan Kalyan) ನಟನೆಯ ‘ಒಜಿ’ ಸಿನಿಮಾ ಗೆಲ್ಲುವಲ್ಲಿ ವಿಫಲವಾಯಿತು. ಮೊದಲೆರಡು ದಿನ ಸಿನಿಮಾ ಅಬ್ಬರದ ಕಳೆಕ್ಷನ್ ಮಾಡಿದ್ದೇ ಬಂತು. ನಂತರ ಸಿನಿಮಾ ಸಾಧಾರಣ ಎನಿಸಿಕೊಂಡಿತು. ಇದರಿಂದ ನಿರ್ಮಾಪಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಏಕೆಂದರೆ ಸಾಕಷ್ಟು ಹಣ ಹೂಡಿ, ಸಾಕಷ್ಟು ವರ್ಷ ಕಾದರೂ ಅಂದುಕೊಂಡ ಫಲಿತಾಂಶ ಬಂದಿಲ್ಲ. ಈಗ ಈ ಚಿತ್ರಕ್ಕೆ ಎರಡನೇ ಪಾರ್ಟ್ ಮಾಡುವ ಆಲೋಚನೆ ಇಲ್ಲ ಎನ್ನಲಾಗುತ್ತಿದೆ.

‘ಓಜಿ’ ಸಿನಿಮಾನ ಎರಡು ಪಾರ್ಟ್​ಗಳಲ್ಲಿ ತರಬೇಕು ಎಂಬುದು ತಂಡದ ಆಲೋಚನೆ ಆಗಿತ್ತು. ಇದಕ್ಕೆ ಸಿದ್ಧತೆ ಕೂಡ ನಡೆದಿತ್ತು.ಈಗ ನಿರ್ಮಾಪಕ ಡಿವಿವಿ ದಾನಯ್ಯ ಎರಡನೇ ಪಾರ್ಟ್ ಮಾಡುವ ಆಲೋಚನೆ ಕೈ ಬಿಟ್ಟಿದ್ದಾರಂತೆ. ಓಜಿ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ನಿರ್ದೇಶನ ಮಾಡಿದ್ದ ‘ಸಾಹೋ’ ಸಿನಿಮಾ ಕೂಡ ಫ್ಲಾಪ್ ಆಗಿತ್ತು.

‘ಓಜಿ’ ಚಿತ್ರ ರಿಲೀಸ್ ಆಗಿದ್ದು ಸೆಪ್ಟಂಬರ್ 25ರಂದು. ಈ ಸಿನಿಮಾದ ಬಜೆಟ್ 200 ಕೋಟಿ ರೂಪಾಯಿ. ಈ ಸಿನಿಮಾದ ಬಾಕ್ಸ್ ಆಫೀಸ್​ ಗಳಿಕೆ 200 ಕೋಟಿ ರೂಪಾಯಿ ಆಸುಪಾಸಿನಲ್ಲೇ ಇದೆ. ಹೀಗಾಗಿ, ನಿರ್ಮಾಪಕ ವಿವಿ ದಾನಯ್ಯ ಅವರು ನಷ್ಟ ಕಂಡಿದ್ದಾರೆ ಎನ್ನಲಾಗುತ್ತಿದೆ.

ಪವನ್ ಕಲ್ಯಾಣ್ ಅವರು ಆಂಧ್ರದ ಉಪಮುಖ್ಯಮಂತ್ರಿ ಆಗಿದ್ದಾರೆ. ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಈ ಕಾರಣದಿಂದ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಒಂದೊಮ್ಮೆ ‘ಓಜಿ 2’ ಸಿನಿಮಾ ಸೆಟ್ಟೇರಿದ್ದರೂ ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತಿತ್ತು. ಇದರ ಬದಲು ಸಿನಿಮಾ ನಿಲ್ಲಿಸೋದೆ ಉತ್ತಮ ಎಂಬ ನಿರ್ಧಾರಕ್ಕೆ ನಿರ್ಮಾಪಕರು ಬಂದಿದ್ದಾರೆ.

ಇದನ್ನೂ ಓದಿ: ‘ಓಜಿ’ ಅಬ್ಬರದ ಗಳಿಕೆ; ಇತ್ತೀಚಿನ ವರ್ಷಗಳಲ್ಲೇ ಅತಿ ದೊಡ್ಡ ಗೆಲುವು ಕಂಡ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅವರು ಸತತ ಸೋಲುತ್ತಿರುವುದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ. ಅವರು ರಾಜಕೀಯದ ಜೊತೆ ಸಿನಿಮಾಮಾಡಬೇಕು ಎಂಬುದು ಫ್ಯಾನ್ಸ್ ಕೋರಿಕೆ ಆಗಿತ್ತು. ಆದರೆ, ಪವನ್ ಕಲ್ಯಾಣ್ ಅವರು ಇದನ್ನು ಈಡೇರಿಸುವ ಆಲೋಚನೆ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:57 am, Thu, 27 November 25