AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಫ್ಯಾಮಿಲಿ ಮ್ಯಾನ್ 3’ ಬಳಿಕ ‘ಫರ್ಜಿ 2’ ಬಗ್ಗೆ ಸಿಕ್ತು ಅಪ್​ಡೇಟ್

ರಾಜ್ ಮತ್ತು ಡಿಕೆ ನಿರ್ದೇಶನದ ಬಹು ನಿರೀಕ್ಷಿತ ಫರ್ಜಿ 2 ವೆಬ್ ಸೀರಿಸ್ 2026 ರ ಕೊನೆಯಲ್ಲಿ ಅಥವಾ 2027 ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ರಾಶಿ ಖನ್ನಾ ದೃಢಪಡಿಸಿದ್ದಾರೆ. ಫ್ಯಾಮಿಲಿ ಮ್ಯಾನ್ 3 ಯಶಸ್ಸಿನ ನಂತರ ಬಂದಿರುವ ಈ ಮಾಹಿತಿ, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಶ್ರೀಕಾಂತ್ ತಿವಾರಿ ಪಾತ್ರ ಫರ್ಜಿ 2 ರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

‘ಫ್ಯಾಮಿಲಿ ಮ್ಯಾನ್ 3’ ಬಳಿಕ ‘ಫರ್ಜಿ 2’ ಬಗ್ಗೆ ಸಿಕ್ತು ಅಪ್​ಡೇಟ್
ಫರ್ಜಿ 2
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 27, 2025 | 8:04 AM

Share

ರಾಜ್ ಮತ್ತು ಡಿಕೆ ಭಾರತದ ವೆಬ್ ಸೀರಿಸ್ ಲೋಕದಲ್ಲಿ ಡಾಮಿನೇಷನ್ ಸಾಧಿಸಿದ್ದಾರೆ ಎಂದರೂ ತಪ್ಪಾಗಲಾರದು. ಇವರು ಅದ್ಭುತ ವೆಬ್ ಸೀರಿಸ್​ಗಳನ್ನು ನೀಡುತ್ತಿದ್ದಾರೆ. ಈಗ ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಇದರಲ್ಲಿ ಮನೋಜ್ ಬಾಜ್​ಪಾಯಿ ಹೀರೋ. ಈ ಸರಣಿಯ ಬಳಿಕ ‘ಫರ್ಜಿ 2’ (Farzi 2) ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸರಣಿ ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಮಾಹಿತಿ ನೀಡಲಾಗಿದೆ.

ರಾಜ್ ಮತ್ತು ಡಿಕೆ ಅವರು ‘ಫ್ಯಾಮಿಲಿ ಮ್ಯಾನ್’ ಸರಣಿ ಬಳಿಕ ಸಾಕಷ್ಟು ವೆಬ್ ಸೀರಿಸ್​ಗಳನ್ನು ನಿರ್ದೇಶನ ಮಾಡಿದರು. ಇದರಲ್ಲಿ ಸಾಕಷ್ಟು ಗಮನ ಸೆಳೆದಿದ್ದರಲ್ಲಿ ‘ಫರ್ಜಿ’ ಕೂಡ ಒಂದು. ವಿಜಯ್ ಸೇತುಪತಿ, ಶಾಹಿದ್ ಕಪೂರ್ ಮೊದಲಾದವರು ನಟಿಸಿದ್ದರು. ಪೇಂಟ್ ಮಾಡುವ ಕಲಾಕಾರ ಹೇಗೆ ನಕಲಿ ನೋಟು ಮುದ್ರಿಸೋ ದಂಧೆಗೆ ಇಳಿಯುತ್ತಾನೆ ಎಂಬ ಕಥೆಯನ್ನು ಇದು ಹೊಂದಿದೆ.

ಈ ಸರಣಿಯ ಕ್ಲೈಮ್ಯಾಕ್ಸ್​ನಲ್ಲಿ ದೊಡ್ಡ ತಿರುವು ನೀಡಲಾಗಿತ್ತು. ನಂತರ ಏನಾಗುತ್ತದೆ ಎಂಬ ಕುತೂಹಲ ವೀಕ್ಷಕರಿಗೆ ಮೂಡಿತ್ತು. ಇದಕ್ಕೆ ಉತ್ತರ ಸಿಗೋ ಸಮಯ ಬಂದಿದೆ. 2026 ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ‘ಫರ್ಜಿ 2’ ಸರಣಿ ರಿಲೀಸ್ ಆಗುವ ಸಾಧ್ಯತೆ ಇದೆಯಂತೆ.

ಈ ಬಗ್ಗೆ ಸರಣಿಯ ರಾಶಿ ಖನ್ನಾ ಅವರು ಹೇಳಿದ್ದಾರೆ. ಅವರು ಕೂಡ ‘ಫರ್ಜಿ’ಯಲ್ಲಿ ನಟಿಸಿದ್ದರು. ‘2026ರ ಜನವರಿಯಲ್ಲಿ ಫರ್ಜಿ ಶೂಟಿಂಗ್ ನಡೆಯಲಿದೆ. ಮುಂದಿನ ವರ್ಷ ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ಸರಣಿ ರಿಲೀಸ್ ಆಗಲಿದೆ. ಕಥೆ ಏನು ಎಂಬುದು ನನಗೆ ತಿಳಿದಿಲ್ಲ’ ಎಂದು ಅವರು ಹೇಳಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್​ ವಿಚಾರದಲ್ಲಿ ಲೀಲಾವತಿಗೆ ಕೊಟ್ಟ ಮಾತು ಉಳಿಸಿಕೊಂಡ ವಿನೋದ್​ ರಾಜ್​

ರಾಜ್ ಹಾಗೂ ಡಿಕೆ ಸರಣಿಯಲ್ಲಿ ಸಸ್ಪೆನ್ಸ್ ಹೈಲೈಟ್ ಆಗಿರುತ್ತದೆ. ‘ಫರ್ಜಿ’ ಸರಣಿ ಗಮನ ಸೆಳೆಯಿತು. ಈ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ಫೋನ್​ನಲ್ಲಿ ಮಾತನಾಡುತ್ತಾರೆ. ‘ಫ್ಯಾಮಿಲಿ ಮ್ಯಾನ್ 3’ನಲ್ಲಿ ವಿಜಯ್ ಸೇತುಪತಿ ಅವರ ಅತಿಥಿ ಪಾತ್ರ ಇದೆ. ಇದು ‘ಫರ್ಜಿ’ ಚಿತ್ರದ ಪಾತ್ರವೇ ಇಲ್ಲಿಯೂ ತೋರಿಸಲಾಗಿದೆ. ‘ಫರ್ಜಿ 2’ ಅಲ್ಲಿ ಶ್ರೀಕಾಂತ್ ತಿವಾರಿ ಬರಹಬುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ
ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ
ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ
ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಎಲ್​ಪಿಜಿ ಹೊತ್ತ 2 ಹಡಗುಗಳು
ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಎಲ್​ಪಿಜಿ ಹೊತ್ತ 2 ಹಡಗುಗಳು
ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!
ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!
ಹರಿಹರ ಪಂಚಮಸಾಲಿ ಮಠದಲ್ಲಿ 'ಲೆಕ್ಕ ಕೊಡಿ' ಅಭಿಯಾನ
ಹರಿಹರ ಪಂಚಮಸಾಲಿ ಮಠದಲ್ಲಿ 'ಲೆಕ್ಕ ಕೊಡಿ' ಅಭಿಯಾನ
ರಿಶಿ ಸುನಾಕ್ ಹೆಂಡತಿ ಕನ್ನಡದಲ್ಲಿ ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ?
ರಿಶಿ ಸುನಾಕ್ ಹೆಂಡತಿ ಕನ್ನಡದಲ್ಲಿ ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ?
ಚಿನ್ನದ ದರ ಇಳಿಕೆ ಬೆನ್ನಲ್ಲೇ ಜ್ಯುವೆಲ್ಲರಿಗಳಿಗೆ ಮುಗಿಬೀಳುತ್ತಿರುವ ಜನ!
ಚಿನ್ನದ ದರ ಇಳಿಕೆ ಬೆನ್ನಲ್ಲೇ ಜ್ಯುವೆಲ್ಲರಿಗಳಿಗೆ ಮುಗಿಬೀಳುತ್ತಿರುವ ಜನ!