AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ ವಿಚಾರದಲ್ಲಿ ಲೀಲಾವತಿಗೆ ಕೊಟ್ಟ ಮಾತು ಉಳಿಸಿಕೊಂಡ ವಿನೋದ್​ ರಾಜ್​

ದರ್ಶನ್​ ವಿಚಾರದಲ್ಲಿ ಲೀಲಾವತಿಗೆ ಕೊಟ್ಟ ಮಾತು ಉಳಿಸಿಕೊಂಡ ವಿನೋದ್​ ರಾಜ್​

ರಾಜೇಶ್ ದುಗ್ಗುಮನೆ
| Edited By: |

Updated on:Nov 25, 2025 | 12:27 PM

Share

ನಟ ದರ್ಶನ್ ಅವರು ‘ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಇಲ್ಲದೆ ಈ ಸಿನಿಮಾ ತೆರೆಗೆ ಬರಲಿದೆ. ಸಿನಿಮಾನ ಅವರ ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ. ಈಗ ವಿನೋದ್ ರಾಜ್ ಕೂಡ ಈ ಸಿನಿಮಾಗೆ ಬೆಂಬಲ ನೀಡಿದ್ದಾರೆ. ಅವರು ಈ ಸಿನಿಮಾನ ಪ್ರಚಾರ ಮಾಡಿದ್ದಾರೆ.  

ನಟ ದರ್ಶನ್ ಹಾಗೂ ವಿನೋದ್ ರಾಜ್ ಮಧ್ಯೆ ಆಪ್ತತತೆ ಇದೆ. ಅವರು ಈಗ ದರ್ಶನ್ ಸಿನಿಮಾ ಬೆಂಬಲ ಮಾಡಿದ್ದಾರೆ. ‘ಡೆವಿಲ್’ ಸಿನಿಮಾದ ಪೋಸ್ಟರ್ ಹಿಡಿದು, ಡೆವಿಲ್ ರೀತಿ ಗಹಗಹಿಸಿ ನಕ್ಕಿದ್ದಾರೆ. ಆ ಬಳಿಕ ಡೆೆವಿಲ್ ಸಿನಿಮಾದ ಡೈಲಾಗ್ ಹೇಳಿದ್ದಾರೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ವಿನೋದ್ ರಾಜ್​ ಅವರಿಗೆ ಅನಾರೋಗ್ಯ ಉಂಟಾದಾಗ ದರ್ಶನ್ ಸಹಾಯ ಮಾಡಿದ್ದರಂತೆ. ಈಗ ಅವರು ದರ್ಶನ್ ಸಿನಿಮಾ ಪ್ರಚಾರ ಮಾಡಿ ಋಣ ತೀರಿಸಿದ್ದಾರೆ. ಇನ್ನು, ದರ್ಶನ್ ಅವರನ್ನು ಯಾವಾಗಲೂ ಕೈ ಬಿಡದಂತೆ ವಿನೋದ್ ರಾಜ್​ಗೆ ತಾಯಿ ಲೀಲಾವತಿ ಹೇಳಿದ್ದರಂತೆ. ಆ ಮಾತನ್ನು ಈಗ ಅವರು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 25, 2025 11:50 AM

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More