AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿ ಜನ್ಮದಿನಕ್ಕೆ ಎರಡು ಜಿರಾಫೆ ದತ್ತು ಪಡೆದ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ತಮ್ಮ ತಾಯಿ ಅಂಜನಾ ದೇವಿ ಹುಟ್ಟುಹಬ್ಬದ ಅಂಗವಾಗಿ ವಿಶಾಖಪಟ್ಟಣಂನ ಇಂದಿರಾ ಗಾಂಧಿ ಪ್ರಾಣಿ ಪಾರ್ಕ್‌ನಲ್ಲಿ ಎರಡು ಜಿರಾಫೆಗಳನ್ನು ಒಂದು ವರ್ಷಕ್ಕೆ ದತ್ತು ಪಡೆದಿದ್ದಾರೆ. ಈ ಸಂದರ್ಭದಲ್ಲಿ, ಅವರು ಪ್ರಾಣಿ ರಕ್ಷಣೆಗೆ ಒತ್ತು ನೀಡಿದರು ಮತ್ತು ಕಾರ್ಪೊರೇಟ್‌ಗಳು ವನ್ಯಜೀವಿ ಸಂರಕ್ಷಣೆಯಲ್ಲಿ ಭಾಗವಹಿಸಲು ಕರೆ ನೀಡಿದರು. ಮೃಗಾಲಯಗಳ ಮಹತ್ವವನ್ನು ತಿಳಿಸುತ್ತಾ, ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುವಲ್ಲಿ ಅವುಗಳ ಪಾತ್ರವನ್ನು ಶ್ಲಾಘಿಸಿದರು.

ತಾಯಿ ಜನ್ಮದಿನಕ್ಕೆ ಎರಡು ಜಿರಾಫೆ ದತ್ತು ಪಡೆದ ಪವನ್ ಕಲ್ಯಾಣ್
ಪವನ್ ಕಲ್ಯಾಣ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 30, 2026 | 7:51 AM

Share

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಗುರುವಾರ (ಜನವರಿ 29) ವಿಶಾಖಪಟ್ಟಣಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಅಲ್ಲಿನ ಇಂದಿರಾ ಗಾಂಧಿ ಪ್ರಾಣಿ ಪಾರ್ಕ್​​ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಪವನ್ ಕಲ್ಯಾಣ್ (Pawan Kalyan) ತಮ್ಮ ತಾಯಿ ಅಂಜನಾ ದೇವಿಯ ಹುಟ್ಟುಹಬ್ಬವನ್ನು ಆಚರಿಸಲು ಮೃಗಾಲಯದಿಂದ ಎರಡು ಜಿರಾಫೆಗಳನ್ನು ಒಂದು ವರ್ಷದವರೆಗೆ ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದರು. ಎರಡು ಜಿರಾಫೆಗಳ ವೆಚ್ಚವನ್ನು ಒಂದು ವರ್ಷದವರೆಗೆ ಭರಿಸುವುದಾಗಿ ಅವರು ಬಹಿರಂಗಪಡಿಸಿದರು.

ಪವನ್ ಕಲ್ಯಾಣ್​​​ಗೆ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಇದೆ. ಹೀಗಾಗಿ, ಪ್ರಾಣಿ ರಕ್ಷಣೆಗಾಗಿ ಮುಂದೆ ಬರುವಂತೆ ಕಾರ್ಪೊರೇಟ್‌ಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ, ಪವನ್ ಮೃಗಾಲಯ ಉದ್ಯಾನವನದಲ್ಲಿ ಹೊಸದಾಗಿ ನಿರ್ಮಿಸಲಾದ ಕರಡಿ ಆವರಣವನ್ನು ಉದ್ಘಾಟಿಸಿದರು.

ಇದನ್ನೂ ಓದಿ: ಕಾರು ಉಡುಗೊರೆಯಾಗಿ ಕೊಟ್ಟ ನಟ ಪವನ್ ಕಲ್ಯಾಣ್: ಯಾರಿಗೆ? ಏಕೆ?

ಮೃಗಾಲಯದಲ್ಲಿ ನೀರಾನೆ , ಕೃಷ್ಣಮೃಗಗಳು, ಹುಲಿಗಳು ಮತ್ತು ಸಿಂಹಗಳನ್ನು ಇಡಲಾದ ಪ್ರದೇಶಗಳಿ ಭೇಟಿ ನೀಡಿದರು. ಅವುಗಳಿಗೆ ಒದಗಿಸಲಾದ ಆಹಾರ, ಅವುಗಳ ಹೆಸರುಗಳು ಮತ್ತು ಇತರ ವಿವರಗಳ ಬಗ್ಗೆ ಮೃಗಾಲಯದ ಕ್ಯುರೇಟರ್ ಅವರ ಬಳಿ ವಿಚಾರಿಸಿದ್ದಾರೆ. ಅವರು ಆನೆಗಳು ಮತ್ತು ಜಿರಾಫೆಗಳ ಆವರಣಗಳನ್ನು ಪರಿಶೀಲಿಸಿದರು ಮತ್ತು ಅವುಗಳಿಗೆ ಸ್ವತಃ ಆಹಾರವನ್ನು ನೀಡಿದರು.

f ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್, ‘ನಮ್ಮ ದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಮೃಗಾಲಯಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅವು ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುತ್ತವೆ. ಸುಮಾರು 650 ಎಕರೆ ಪ್ರದೇಶದಲ್ಲಿ ಹರಡಿರುವ ವಿಶಾಖಪಟ್ಟಣ ಮೃಗಾಲಯದಲ್ಲಿ ನೂರಾರು ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ಆಹ್ಲಾದಕರ ವಾತಾವರಣದಲ್ಲಿ ವಾಸಿಸುತ್ತವೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೃಗಾಲಯಗಳ ಅಭಿವೃದ್ಧಿಯಲ್ಲಿ ಕಾರ್ಪೊರೇಟ್‌ಗಳು ಪಾಲುದಾರರಾಗಿರಬೇಕು. ಅವರು ತಮ್ಮ ಇಷ್ಟ ಪ್ರಾಣಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ದತ್ತು ಪಡೆಯಬೇಕು ನಮ್ಮ ಇಡೀ ಕುಟುಂಬವು ಪ್ರಾಣಿ ಪ್ರಿಯರು. ನಾವು ಪ್ರಾಣಿ ಕಲ್ಯಾಣಕ್ಕೆ ಹೆಚ್ಚಿನ ಗಮನ ನೀಡುತ್ತೇವೆ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.