Fact Check: ಗೂಗಲ್​ನ್ನು ಹ್ಯಾಕ್​ ಮಾಡಿದ ಬಿಹಾರಿ ಮೂಲದ ಹುಡುಗ; ಇದರ ಸತ್ಯಾಸತ್ಯತೆ ಏನು?

ಬಿಹಾರದ ರಿತುರಾಜ್ ಚೌಧರಿ ಅವರು ಗೂಗಲ್​ನ್ನು ಹ್ಯಾಕ್ ಮಾಡಿದ್ದು, ಅವರ ಕೌಶಲ್ಯಕ್ಕೆ ಪ್ರಭಾವಿತಗೊಂಡು ಟೆಕ್​ ಕಂಪನಿಯು ಅವರಿಗೆ 3.66 ಕೋಟಿ ರೂ. ಸಂಬಳ ನೀಡಲಾಗಿದೆಯೇ?

Fact Check: ಗೂಗಲ್​ನ್ನು ಹ್ಯಾಕ್​ ಮಾಡಿದ ಬಿಹಾರಿ ಮೂಲದ ಹುಡುಗ; ಇದರ ಸತ್ಯಾಸತ್ಯತೆ ಏನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 07, 2022 | 12:50 PM

ಕಳೆದ ಕೆಲವು ದಿನಗಳಿಂದ ಗೂಗಲ್​ನ್ನು ಬಿಹಾರದ ಹುಡುಗನೊಬ್ಬ ಹ್ಯಾಕ್  ಮಾಡಿರುವ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಗೂಗಲ್ ಹ್ಯಾಕ್ (Google hack) ಮಾಡಿದ ನಂತರ ಆ ಹುಡುಗನಿಗೆ ಕಂಪನಿಯಿಂದ ಕೋಟಿಗಟ್ಟಲೆ ಸಂಬಳದ ಆಫರ್ ಸಿಕ್ಕಿದೆ ಎಂದು ವರದಿಗಳು ಹೇಳುತ್ತಿವೆ. ಬಿಹಾರದ ರಿತುರಾಜ್ ಚೌಧರಿ ಅವರು ಗೂಗಲ್​ನ್ನು ಹ್ಯಾಕ್ ಮಾಡಿದ್ದು, ಅವರ ಕೌಶಲ್ಯಕ್ಕೆ ಪ್ರಭಾವಿತಗೊಂಡು ಟೆಕ್​ ಕಂಪನಿಯು ಅವರಿಗೆ 3.66 ಕೋಟಿ ರೂ. ಸಂಬಳದ ಪ್ಯಾಕೇಜ್‌ನೊಂದಿಗೆ ಉದ್ಯೋಗವನ್ನು ನೀಡಿದೆ ಎಂದು ವಾಟ್ಸಾಪ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿದೆ.

ಈ ಸುಳ್ಳು ಸುದ್ದಿಯ ಜಾಡನ್ನು ಹಿಡಿದು ಎನ್​ಡಿಎ ಸುದ್ದಿ ಸಂಸ್ಥೆಯೊಂದು ಇದರ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ. ಬಿಹಾರಿ ಮೂಲದ ಹಡುಗನೊಬ್ಬನು ಗೂಗಲ್​ನ್ನು ಹ್ಯಾಕ್ ಮಾಡಿಲ್ಲ ಮತ್ತು ಆತನಿಗೆ ಕಂಪನಿಯಿಂದ ಅಂತಹ ಯಾವುದೇ ಉದ್ಯೋಗದ ಪ್ರಸ್ತಾಪವು ಮಾಡಿಲ್ಲ ಎಂದು ವರದಿಯ ಮೂಲಕ ತಿಳಿದುಬಂದಿದೆ. ಬಿಹಾರದ ಬೇಗುಸರಾಯ್ ಜಿಲ್ಲೆಯ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ರಿತುರಾಜ್ ಚೌಧರಿ ಅವರು ಗೂಗಲ್​ನ್ನು ಹ್ಯಾಕ್ ಮಾಡಿಲ್ಲ, ಆದರೆ ಜಾಗತಿಕ ಸರ್ಚ್ ಇಂಜಿನ್‌ಲ್ಲಾದ ದೋಷವನ್ನು ಕಂಡುಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ರಿತುರಾಜ್ ಚೌಧರಿ ಅವರು ಪ್ರಸಿದ್ಧ ಸರ್ಚ್ ಇಂಜಿನ್ ಗೂಗಲ್‌ನಲ್ಲಿ ದೋಷವನ್ನು ಕಂಡುಹಿಡಿದಿದ್ದಾರೆ, ಇದು ಹ್ಯಾಕರ್‌ಗಳು ಅದರ ಭದ್ರತಾ ವ್ಯವಸ್ಥೆಗೆ ಪ್ರವೇಶಿಸಲು ಮತ್ತು ಕಂಪನಿಯ ಪ್ರಮುಖ ಡೇಟಾವನ್ನು ಸೋರಿಕೆ ಮಾಡಲು ಸುಲಭವಾಗಬಹುದಾಗಿತ್ತು.

ಚೌಧರಿ ದೋಷವನ್ನು ಕಂಡುಹಿಡಿದ ನಂತರ, ಅವರು ಅದನ್ನು ಗೂಗಲ್‌ಗೆ ವರದಿ ಮಾಡಿದರು. ಗೂಗಲ್​ ಅದನ್ನು ಧೃಡಿಕರಿಸಿ ಹೌದು ಇದು ಹ್ಯಾಕರ್​ಗಳು ಸರ್ಚ್ ಇಂಜಿನ್‌ನ ಪ್ರವೇಶವನ್ನು ಪಡೆಯಲು ಸಹಾಯ ಮಾಡಬಹುದೆಂದು ಒಪ್ಪಿಕೊಂಡಿದೆ. ಟೆಕ್ ಕಂಪನಿಯು ವಿದ್ಯಾರ್ಥಿಗೆ ಅವನ ಆವಿಷ್ಕಾರಕ್ಕಾಗಿ ಬಹುಮಾನ ನೀಡಲು ನಿರ್ಧರಿಸಿತು. ಸರ್ಚ್ ಇಂಜಿನ್‌ನ ಡೇಟಾಬೇಸ್‌ನಲ್ಲಿ ಚೌಧರಿ ಈ ಸಂಭಾವ್ಯ ಕಂಡುಹಿಡಿದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಗೂಗಲ್, ಅವರಿಗೆ ಗೂಗಲ್ ಹಾಲ್ ಆಫ್ ಫೇಮ್ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ. ಅದರ ಸಂಶೋಧಕರ ಪಟ್ಟಿಯಲ್ಲಿ ರಿತುರಾಜ್ ಅವರ ಹೆಸರನ್ನು ಸೇರಿಸಿಲಾಗಿದೆ.

ರಿತುರಾಜ್ ಅವರು ಬಗ್ ಹಂಟಿಂಗ್ ಪ್ರಸ್ತುತ ಪಿ-2 ರ ಹಂತದಲ್ಲಿದೆ. ಅವರು P-0 ತಲುಪಿದ ತಕ್ಷಣ, Google ಅವರಿಗೆ ಬಹುಮಾನ ನೀಡುತ್ತದೆ. ಇದರೊಂದಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಯೂ ಭವಿಷ್ಯದಲ್ಲಿ ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ರಿತುರಾಜ್ ಐಐಟಿ ಮಣಿಪುರದಲ್ಲಿ ಬಿಟೆಕ್ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಉದ್ಯಮಿ ರಾಕೇಶ್ ಕುಮಾರ್ ಚೌಧರಿ ಅವರ ಪುತ್ರ ರಿತುರಾಜ್ ಅವರು ತಮ್ಮ ಇಂಜಿನಿಯರಿಂಗ್ ಜೊತೆಗೆ ಸೈಬರ್ ಭದ್ರತೆಯ ಬಗ್ಗೆಯೂ ಸಂಶೋಧನೆ ಮಾಡುತ್ತಿದ್ದಾರೆ.

ಇದನ್ನೂ ಓದಿ;

ಪಾಕ್ ಪರ ಟ್ವೀಟ್ ಮಾಡಿದ ಹುಂಡೈ: ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು