ಪವಾಡಸದೃಶ ರೀತಿಯಲ್ಲಿ ಬಚಾವಾದ ಪರ್ವತಾರೋಹಿ; ಇಲ್ಲಿದೆ ವೈರಲ್ ವಿಡಿಯೋ
ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಹರಿದಾಡುತ್ತಿದೆ. ಬೆಟ್ಟದ ಮೇಲಿಂದ ಭಾರವಾದ ಬಂಡೆಯೊಂದು ಉರುಳಿದ್ದು, ಪರ್ವತಾರೋಹಿಯೊಬ್ಬ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ.
ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಹರಿದಾಡುತ್ತಿದೆ. ಬೆಟ್ಟದ ಮೇಲಿಂದ ಭಾರವಾದ ಬಂಡೆಯೊಂದು ಉರುಳಿದ್ದು, ಪರ್ವತಾರೋಹಿಯೊಬ್ಬ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಪಾಕಿಸ್ತಾನದ ಕಾರಕೋರಂ ಶ್ರೇಣಿಯ ಸ್ಪಂಟಿಕ್ ಶಿಖರದ ಬೇಸ್ ಕ್ಯಾಂಪ್‌ನಲ್ಲಿ ಈ ಘಟನೆ ನಡೆದಿದೆ. ಈತ ಮೊದಲು ಅದೃಷ್ಟವನ್ನು ನಂಬಿದ್ದನೋ ಗೊತ್ತಿಲ್ಲ. ಆದರೆ ಈ ಘಟನೆ ನಂತರ ಆತ ಕಂಡಿತ ಪವಾಡಗಳನ್ನು ನಂಬುತ್ತಾನೆ. 2018ರಲ್ಲಿಯೇ ಈ ಘಟನೆ ನಡೆದಿದೆ. ಆದರೆ ಈಗ ವ್ಯಾಪಕವಾಗಿ ವೈರಲ್ ಆಗುತ್ತಿದೆ. ದೃಶ್ಯದಲ್ಲಿ ನಾವು ಸ್ಪಂಟಿಕ್ ಬೇಸ್ ಕ್ಯಾಂಪ್‌ನಲ್ಲಿ ಪರ್ವತಾರೋಹಿಗಳು ತಮ್ಮ ಡೇರೆಗಳನ್ನು ಹಾಕಿದ್ದಾರೆ. ಇಬ್ಬರೂ ಪರ್ವತಾರೋಹಿಗಳು ಬೆಟ್ಟದ ಮೇಲೆ ನಿಂತ್ತಿದ್ದು, ಭಾರೀ ವೇಗದ ಬಂಡೆಯೊಂದು ದಿಢೀರನೇ ಉಳಿರುತ್ತದೆ. ಬೆಟ್ಟದ ಕೆಳಗಡೆ ಇರುವ ಪರ್ವತಾರೋಹಿ ಜಸ್ಟ್ ಮಿಸ್ ಆಗಿದ್ದಲ್ಲದೇ ಪವಾಡಸದೃಶವಾಗಿ ಪಾರಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
View this post on Instagram
ಇನ್ನೂ ಈ ವಿಡಿಯೋವನ್ನು ಇಟ್ಸ್ಹಿಮಾಲಯಾಸ್ ಎನ್ನುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 2018ರಲ್ಲಿ ಪಾಕಿಸ್ತಾದ 7 ಸಾವಿರ ಮೀ ಶಿಖರದ ಮೇಲಿರುವ ಬೇಸ್ ಕ್ಯಾಂಪ್‌ನಲ್ಲಿ ನಿಜವಾದ ಬಂಡೆ ಕಲ್ಲೋಂದು ಉರುಳಿದೆ. ಇದು ಸಾವಿನ ಬಂಡೆಯಾಗಿದ್ದು, “ಯಾರು ಅದೃಷ್ಟವನ್ನು ನಂಬುವುದಿಲ್ಲ? ಅವರನ್ನು ಟ್ಯಾಗ್ ಮಾಡಿ ಎಂದು ಬರೆದುಕೊಂಡಿದ್ದಾರೆ. ಕಾರಕೋರಂನಲ್ಲಿರುವ ಸ್ಪಂಟಿಕ್ ಶಿಖರವು 7,000 ಮೀಟರ್ ಎತ್ತರದಲ್ಲಿದ್ದು, ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ ಜಿಲ್ಲೆಯಲ್ಲಿದೆ. ಆರೋಹಿಗಳು ಸಾಮಾನ್ಯವಾಗಿ ತಮ್ಮ ದಂಡಯಾತ್ರೆಯನ್ನು ಬಾಲ್ಟಿಸ್ತಾನ್‌ನ ಸ್ಕಾರ್ಡುದಿಂದ ಪ್ರಾರಂಭಿಸುತ್ತಾರೆ. ಮೂಲ ಶಿಬಿರವನ್ನು ತಲುಪಿದ ನಂತರ, ಅವರು ಶಿಖರದ ಕಡೆಗೆ ತಮ್ಮ ಚಾರಣವನ್ನು ಪ್ರಾರಂಭಿಸುವ ಮೊದಲು ಅಲ್ಲಿ ಕ್ಯಾಂಪ್ ಮಾಡುತ್ತಾರೆ ಎನ್ನಲಾಗುತ್ತಿದೆ. ಇನ್ನೂ ಈ ವಿಡಿಯೋ ಇಲ್ಲಿಯವರೆಗೂ ಸುಮಾರು 30 ಸಾವಿರ ವೀಕ್ಷಣೆಯನ್ನು ಕಂಡಿದ್ದೆ.
ಇದನ್ನೂ ಓದಿ;
ಮೊಬೈಲ್ ನೋಡುತ್ತಾ ಮೆಟ್ರೋ ಹಳಿಗೆ ಬಿದ್ದ ವ್ಯಕ್ತಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ