ಮೊಬೈಲ್ ನೋಡುತ್ತಾ ಮೆಟ್ರೋ ಹಳಿಗೆ ಬಿದ್ದ ವ್ಯಕ್ತಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮೆಟ್ರೋ ಹಳಿಗೆ ಬಿದ್ದ ವ್ಯಕ್ತಿಯನ್ನು 58 ವರ್ಷದ ಶೈಲೇಂದರ್ ಮೆಹತಾ ಎಂದು ಗುರುತಿಸಲಾಗಿದೆ. ಸದ್ಯ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಲಾಗಿದೆ.
ಮೊಬೈಲ್ (Mobile ದೈನಂದಿನ ಬದುಕಿನ ಭಾಗವಾಗಿದೆ. ಪ್ರತೀ ಕ್ಷಣವೂ ಕೈಯಲ್ಲಿ ಮೊಬೈಲ್ ಇರಬೇಕು. ಸಾರ್ವಜನಿಕವಾಗಿ ಓಡಾಡುವಾಗಲಂತೂ ಕೈಯಲ್ಲಿ ಮೊಬೈಲ್, ಕಿವಿಗೆ ಇಯರ್ಫೋನ್ ಹಾಕಿಕೊಂಡು ತಮ್ಮದೇ ಲೋಕದಲ್ಲಿ ಇರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ರೀತಿ ಸಾರ್ವಜನಿಕವಾಗಿಯೂ ತಲೆತಗ್ಗಿಸಿ ಮೊಬೈಲ್ ನೋಡುತ್ತಾ ಹೋಗುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದ ಈ ಹಿಂದೆಯೂ ಸಾಕಷ್ಟು ಅಪಘಾತಗಳು ಸಂಭಿವಿಸಿದೆ. ಈಗ ಅಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಮೊಬೈಲ್ ನೋಡುತ್ತಾ ನಡೆದುಕೊಂಡು ಬರುವಾಗ ಮೆಟ್ರೋ (Metro) ಹಳಿಯ ಮೇಲೆ ಬಿದ್ದ ಘಟನೆ ನಡೆದಿದೆ. ಇದರ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
A passenger namely Mr. Shailender Mehata, R/O Shadhara, slipped and fell down on the metro track @ Shahdara Metro Station, Delhi. Alert CISF personnel promptly acted and helped him out. #PROTECTIONandSECURITY #SavingLives@PMOIndia @HMOIndia @MoHUA_India pic.twitter.com/Rx2fkwe3Lh
— CISF (@CISFHQrs) February 5, 2022
ವಿಡಿಯೋದಲ್ಲಿ ದೆಹಲಿಯ ಶಹದಾರ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ನೋಡಿಕೊಂಡು ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದು. ತಕ್ಷಣ ಆತ ಆಯತಪ್ಪಿ ಮೆಟ್ರೋ ಹಳಿಯ ಮೇಲೆ ಬೀಳುತ್ತಾನೆ. ಅದೃಷ್ಟವಶಾತ್ ಅಲ್ಲಿಯೇ ಇದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಬಂದು ಬಿದ್ದಲ್ಲಿಂದ ಏಳಲು ಕಷ್ಟಪಡುತ್ತಿದ್ದ ವ್ಯಕ್ತಿಯನ್ನು ಮೇಲೆಕ್ಕೆ ಎತ್ತಿ ಪ್ಲಾಟ್ಪಾರ್ಮಗೆ ಹತ್ತಿಸಿದ್ದಾರೆ. ವರದಿಯ ಪ್ರಕಾರ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಮೆಟ್ರೋ ಹಳಿಗೆ ಬಿದ್ದ ವ್ಯಕ್ತಿಯನ್ನು 58 ವರ್ಷದ ಶೈಲೇಂದರ್ ಮೆಹತಾ ಎಂದು ಗುರುತಿಸಲಾಗಿದೆ. ಸದ್ಯ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯವನ್ನು ಸಿಐಎಸ್ಎಫ್ ಟ್ವಿಟರ್ ಖಾತೆ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.
ಇದನ್ನೂ ಓದಿ:
ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಮದುವೆಯಾದ ದಂಪತಿ; ಭಾರತದಲ್ಲಿ ಇದು ಮೊದಲ ಟೆಕ್ನಾಲಜಿಕಲ್ ಮದುವೆ