ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಮದುವೆಯಾದ ದಂಪತಿ; ಭಾರತದಲ್ಲಿ ಇದು ಮೊದಲ ಟೆಕ್ನಾಲಜಿಕಲ್ ಮದುವೆ
ದೇಶದಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡಿನ ಜೋಡಿಯೊಂದು ಬ್ಲಾಕ್ ಚೈನ್ ಮೂಲಕ ಮದುವೆಯಾಗಿದ್ದಾರೆ. ಮೆಟಾವರ್ಸ್ನಲ್ಲಿ ಮದುವೆಯಾದ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡಿನ ಜೋಡಿಯೊಂದು ಬ್ಲಾಕ್ ಚೈನ್ (Block Chain) ಮೂಲಕ ಮದುವೆಯಾಗಿದ್ದಾರೆ. ಮೆಟಾವರ್ಸ್ನಲ್ಲಿ ಮದುವೆಯಾದ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಓಪನ್ ಸೀ (OpenSea) ಪ್ಲಾಟ್ಫಾರ್ಮ್ ಮೂಲಕ ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಮದುವೆಯಾಗಿದ್ದಾರೆ. ಇಬ್ಬರೂ ಮಹಾರಾಷ್ಟ್ರ ಮೂಲದವರಾಗಿದ್ದು ಬ್ಲಾಕ್ ಚೈನ್ ತಂತ್ರಜ್ಞಾನದ ಮೂಲಕ ಮದುವೆಯಾದ ಭಾರತದ ಮೊದಲ ದಂಪತಿ ಎನಿಸಿಕೊಂಡಿದ್ದಾರೆ.
ಶ್ರುತಿ ನಾಯರ್ ಮತ್ತು ಅನಿಲ್ ನರಸಿಪುರಮ್ ಎನ್ನುವ ಜೋಡಿ ಕಳೆದ ನವೆಂಬರ್ನಲ್ಲಿ ಕೊರೊನಾ ಕಾರಣದಿಂದ ರಿಜಿಸ್ಟರ್ ಮ್ಯಾರೆಜ್ ಆಗಿದ್ದರು. ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಇದೀಗ ಬ್ಲಾಕ್ ಚೈನ್ ತಂತ್ರಜ್ಞಾನದ ಮೂಲಕ ಮದುವೆಯಾಗಿದ್ದಾರೆ. ಈ ಕುರಿತು ಅನಿಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮದುವೆಯ ಕತೆಯನ್ನು ಹೇಳಿಕೊಂಡಿದ್ದಾರೆ. ನಾನು ಮತ್ತು ಶೃತಿ ಕೊರೊನಾ ಕಾರಣದಿಂದ ಕಳೆದ ನವೆಂಬರ್ 15ರಂದು ರಿಜಿಸ್ಟರ್ ಮ್ಯಾರೆಜ್ ಆಗಿದ್ದೆವು . ಇದೀಗ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಇದೀಗ ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ನೋಂದಾಯಿಸಿಕೊಂಡಿದ್ದೇವೆ ಎಂದಿದ್ದಾರೆ.
ಲಿಂಕ್ಡ್ ಇನ್ ವರದಿಯ ಪ್ರಕಾರ ಶೃತಿ ಈ ಬಗ್ಗೆ ಮಾತನಾಡಿ ಏಥೇರಿಯಂ ಸ್ಮಾರ್ಟ್ ಕಾಂಟ್ರಾಕ್ಟ್ ಆದ ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಮದುವೆಯಾಗಿದ್ದೇವೆ. ನಮ್ಮ ಒಪ್ಪಂದವು ಎನ್ಎಫ್ಟಿ ಮೂಲಕ ಇರುತ್ತದೆ. ನರಸಿಪುರಮ್ ಅವರು ಡಿಸೈನ್ ಪ್ರೊಪೆಸರ್ ಆಗಿದ್ದಾರೆ ಎಂದಿದ್ದಾರೆ. ಮುಂದುವರೆದು ಮಾತನಾಡಿ, ನಾವು ಯಾವುದೇ ರೀತಿಯ ದೊಡ್ಡ ಭರವಸೆಯನ್ನು ನೀಡಿಕೊಳ್ಳುವುದಿಲ್ಲ. ಜತೆಯಾಗಿ ಸದಾಕಾಲ ಇರಲು ಬಯಸುತ್ತೇವೆ ಎಂದಿದ್ದಾರೆ. ಇನ್ನು ಮದುವೆ ಸಾಮಾನ್ಯವಾಗಿ ಹಲವು ದಿನಗಳವರೆಗೆ ನಡೆಯುತ್ತದೆ ಆದರೆ ಈ ತಂತ್ರಜ್ಞಾನದ ಮೂಲಕ ಆದ ಮದುವೆ ಕೇವಲ 15 ನಿಮಿಷಗಳಲ್ಲಿ ಮುಗಿದಿದೆ ಎಂದು ಹಂಚಿಕೊಂಡಿದ್ದಾರೆ. ಸದ್ಯ ಇವರ ಮದುವೆಯ ಸ್ಟೋರಿ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ:
ಆನೆಗೂ ಜೆಸಿಬಿ ವಾಹನಕ್ಕೂ ಫೈಟ್ ಗೆದ್ದೋರ್ಯಾರು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ (viral video)