AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ಈ ವರ್ಷ 18 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್

GST collections rises by 6.2pc to Rs 1,93,384 in 2026 January: ಜನವರಿಯಲ್ಲಿ 1.93 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ಸಂಗ್ರಹ ಆಗಿದೆ. ರೀಫಂಡ್ ಕಳೆದು ಉಳಿಯುವ ನಿವ್ವಳ ಜಿಎಸ್​ಟಿ ಸಂಗ್ರಹ 1.70 ಲಕ್ಷ ಕೋಟಿ ರೂ ಇದೆ. ಒಟ್ಟೂ ಜಿಎಸ್​ಟಿಯಲ್ಲಿ ಶೇ. 6.2 ಏರಿಕೆ ಆಗಿದ್ದರೆ, ನಿವ್ವಳ ಜಿಎಸ್​ಟಿ ಸಂಗ್ರಹದಲ್ಲಿ ಶೇ 7.6ರಷ್ಟು ಹೆಚ್ಚಳವಾಗಿದೆ. ರೀಫಂಡ್ ಪ್ರಮಾಣ ಕಡಿಮೆ ಆದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಹೆಚ್ಚು ತೆರಿಗೆ ಉಳಿತಾಯವಾಗಿದೆ.

ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ಈ ವರ್ಷ 18 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್
ಜಿಎಸ್​ಟಿx
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 01, 2026 | 6:39 PM

Share

ನವದೆಹಲಿ, ಫೆಬ್ರುವರಿ 1: ಭಾರತದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ (GST collections) ಜನವರಿಯಲ್ಲಿ 1,93,384 ಕೋಟಿ ರೂ ಆಗಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹದಲ್ಲಿ ಶೇ. 6.2ರಷ್ಟು ಹೆಚ್ಚಿದೆ. 2025ರ ಜನವರಿಯಲ್ಲಿ ಜಿಎಸ್​ಟಿ ಸಂಗ್ರಹ 1,82,094 ಕೋಟಿ ರೂ ಇತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ, ಅಂದರೆ 2025ರ ಏಪ್ರಿಲ್​ನಿಂದ 2026ರ ಜನವರಿವರೆಗೆ 10 ತಿಂಗಳಲ್ಲಿ ಸಂಗ್ರಹವಾದ ಒಟ್ಟು ಜಿಎಸ್​ಟಿ 18,43,423 ಕೋಟಿ ರೂ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 8.3ರಷ್ಟು ಸಂಗ್ರಹ ಹೆಚ್ಚಳ ಆಗಿದೆ.

2026ರ ಜನವರಿಯಲ್ಲಿ ಒಟ್ಟು ಸಂಗ್ರಹ 1,93,384 ಕೋಟಿ ರೂ ಇದ್ದರೆ, ನಿವ್ವಳ ಜಿಎಸ್​ಟಿ ಆದಾಯ 1,70,719 ಕೋಟಿ ರೂ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಿವ್ವಳ ಜಿಎಸ್​ಟಿ ಸಂಗ್ರಹದಲ್ಲಿ ಶೇ. 7.6ರಷ್ಟು ಹೆಚ್ಚಾಗಿದೆ. ಈ ಹಣಕಾಸು ವರ್ಷದ 10 ತಿಂಗಳಲ್ಲಿ ನಿವ್ವಳ ಜಿಎಸ್​ಟಿ 15,95,752 ಕೋಟಿ ರೂ ಸಂಗ್ರಹ ಆಗಿದೆ.

ಇದನ್ನೂ ಓದಿ: Union Budget 2026-27: ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್​​

ಜಿಎಸ್​ಟಿ ರೀಫಂಡ್​ಗಳಲ್ಲಿ ಶೇ 3.1ರಷ್ಟು ಇಳಿಕೆ ಆಗಿದೆ. ಜನವರಿಯಲ್ಲಿ 22,665 ಕೋಟಿ ರೂ ಮೊತ್ತದಷ್ಟು ರೀಫಂಡ್​ಗಳಾಗಿವೆ. ದೇಶೀಯ ರೀಫಂಡ್​ಗಳು 13,119 ಕೋಟಿ ರೂ ಇದ್ದು, ಶೇ. 7.1ರಷ್ಟು ಇಳಿಕೆಯಾಗಿದೆ. ರಫ್ತು ರೀಫಂಡ್​ಗಳು 9,546 ಕೋಟಿ ರೂನಷ್ಟು ಇದ್ದು, ಇದರಲ್ಲಿ ಶೇ. 2.9ರಷ್ಟು ಏರಿಕೆ ಆಗಿದೆ.

ದೇಶೀಯ ಜಿಎಸ್​ಟಿ ಸಂಗ್ರಹ 1,41,132 ಕೋಟಿ ರೂ ಇದೆ. ಆಮದು ಜಿಎಸ್​ಟಿ ಸಂಗ್ರಹ ಶೇ. 10.1ರಷ್ಟು ಹೆಚ್ಚಳ ಆಗಿ 52,253 ಕೋಟಿ ರೂ ಇದೆ.

ಇದನ್ನೂ ಓದಿ: ಬಜೆಟ್ 2026 ಪ್ರಕಟಣೆ; ಬಾಂಗ್ಲಾದೇಶದಿಂದ ಹಿಡಿದು ಮಾರಿಷಸ್​ವರೆಗೆ ವಿವಿಧ ದೇಶಗಳಿಗೆ ಭಾರತ ಮಾಡುವ ಧನಸಹಾಯವೆಷ್ಟು?

ಹರ್ಯಾಣ, ಮಹಾರಾಷ್ಟ್ರ, ಗುಜರಾತ್, ಹಿಮಾಚಲಪ್ರದೇಶ ಮತ್ತು ಪಂಜಾಬ್ ರಾಜ್ಯಗಳು ಶೇ 10ಕ್ಕಿಂತ ಹೆಚ್ಚು ಸೆಟಲ್ಮೆಂಟ್ ನಂತರದ ಜಿಎಸ್​ಟಿ ಆದಾಯ ಗಳಿಸಿವೆ. ಕರ್ನಾಟಕ, ತಮಿಳುನಾಡು ರಾಜ್ಯಗಳೂ ಕೂಡ ಉತ್ತಮ ಆದಾಯ ಏರಿಕೆ ಕಂಡಿವೆ. ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ, ಛತ್ತೀಸ್​ಗಡ್, ಲಡಾಖ್, ಲಕ್ಷದ್ವೀಪ್ ರಾಜ್ಯಗಳಲ್ಲಿ ಜಿಎಸ್​ಟಿ ಆದಾಯದಲ್ಲಿ ಇಳಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More