AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧುಮೇಹಿಗಳಿಗೆ ಕೆಎಂಎಫ್ ದೀಪಾವಳಿ ಗಿಫ್ಟ್: ನಂದಿನಿ ಶುಗರ್ ಫ್ರೀ ಸಿಹಿತಿಂಡಿಗಳು ಮಾರುಕಟ್ಟೆಗೆ

ಕೆಎಂಎಫ್ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಮಧುಮೇಹಿಗಳಿಗಾಗಿ ಸಕ್ಕರೆ ರಹಿತ ಸಿಹಿತಿಂಡಿಗಳನ್ನು ದೀಪಾವಳಿಗೆ ಬಿಡುಗಡೆ ಮಾಡಿದೆ. ಆರೋಗ್ಯ ಕಾಳಜಿ ಹಾಗೂ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಈ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ನಂದಿನಿ ಖೋವಾ ಗುಲಾಬ್ ಜಾಮೂನ್, ಶುದ್ಧ ಪೇಡಾ, ಬೆಲ್ಲದ ಬರ್ಫಿ ಸೇರಿದಂತೆ ಶುಗರ್ ಫ್ರೀ ಸಿಹಿ ಲಭ್ಯವಿದೆ.

ಮಧುಮೇಹಿಗಳಿಗೆ ಕೆಎಂಎಫ್ ದೀಪಾವಳಿ ಗಿಫ್ಟ್: ನಂದಿನಿ ಶುಗರ್ ಫ್ರೀ ಸಿಹಿತಿಂಡಿಗಳು ಮಾರುಕಟ್ಟೆಗೆ
ನಂದಿನಿ ಶುಗರ್ ಫ್ರೀ ಸಿಹಿತಿಂಡಿಗಳು ಮಾರುಕಟ್ಟೆಗೆ (ಸಾಂದರ್ಭಿಕ ಚಿತ್ರ)
Ganapathi Sharma
|

Updated on: Oct 16, 2025 | 9:33 AM

Share

ಬೆಂಗಳೂರು, ಅಕ್ಟೋಬರ್ 16: ಡಯಾಬಿಟಿಸ್ ಇರುವವರಿಗೆ ಕೆಎಂಎಫ್ (KMF) ದೀಪಾವಳಿ ಉಡುಗೊರೆ ನೀಡಲಿದೆ. ಮಧುಮೇಹಿಗಳಿಗೆಂದೇ ನಂದಿನಿ ಬ್ರ್ಯಾಂಡ್​ನಲ್ಲಿ ಸಕ್ಕರೆ ರಹಿತ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆರೋಗ್ಯ ಕಾಳಜಿಯ ಹಬ್ಬದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಪೂರಕವಾಗಿ ನಂದಿನಿ ಶುಗರ್ ಫ್ರೀ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ತಿಳಿಸಿದ್ದಾರೆ. ಆರೋಗ್ಯದ ಬಗ್ಗೆ ಜನ ಹೆಚ್ಚಿನ ಕಾಳಜಿ ವಹಿಸಬೇಕಾದ ಈ ಕಾಲದಲ್ಲಿ, ಗ್ರಾಹಕರು ಸಕ್ಕರೆ ರಹಿತ ಸಿಹಿತಿಂಡಿಗಳನ್ನು ಹೆಚ್ಚು ಮೆಚ್ಚುತ್ತಿದ್ದಾರೆ. ಸಕ್ಕರೆ ರಹಿತ ನಂದಿನಿ ಸಿಹಿತಿಂಡಿಗಳು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿರುವುದರಿಂದ ನಾವು ಈ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಸಕ್ಕರೆ ಬಳಕೆ ಮಾಡದೆಯೇ ಆರೋಗ್ಯಕರ ಉತ್ಪನ್ನಗಳನ್ನು ಪರಿಚಯಿಸಲಾಗಿದೆ ಎಂದು ಶಿವಸ್ವಾಮಿ ಹೇಳಿದ್ದಾರೆ.

ಶುಗರ್ ಫ್ರೀ ಸ್ವೀಟ್ಸ್ ಬೆಲೆ ಎಷ್ಟು?

ಹಬ್ಬದ ಕೊಡುಗೆಯ ಭಾಗವಾಗಿ, ಸಕ್ಕರೆ ರಹಿತ ನಂದಿನಿ ಖೋವಾ ಗುಲಾಬ್ ಜಾಮೂನ್ 500 ಗ್ರಾಂ ಪ್ಯಾಕ್‌ಗೆ 220 ರೂ., ಶುದ್ಧ ನಂದಿನಿ ಹಳೆ ಪೇಡಾ (ಸಕ್ಕರೆ ರಹಿತ) 200 ಗ್ರಾಂಗೆ 170 ರೂ. ಮತ್ತು ಬೆಲ್ಲದಿಂದ ತಯಾರಿಸಿದ ನಂದಿನಿ ಬೆಲ್ಲ ಓಟ್ಸ್ ಮತ್ತು ಬೀಜಗಳ ಬರ್ಫಿ 200 ಗ್ರಾಂಗೆ 170 ರೂ. ಬೆಲೆಗೆ ಲಭ್ಯವಿದೆ ಎಂದು ಕೆಎಂಎಫ್ ತಿಳಿಸಿದೆ. ಈ ಉತ್ಪನ್ನಗಳು ಶುದ್ಧ, ರುಚಿಕರ ಮತ್ತು ಕೈಗೆಟುಕುವ ಬೆಲೆಯಲ್ಲಿದ್ದು ಗುಣಮಟ್ಟದ ವಿಚಾರದಲ್ಲಿ ನಂದಿನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಶಿವಸ್ವಾಮಿ ಹೇಳಿದ್ದಾರೆ.

ದಸರಾ ಹಬ್ಬದ ಸಮಯದಲ್ಲಿ, ನಂದಿನಿ ಸಿಹಿ ಉತ್ಪನ್ನಗಳ ಮಾರಾಟವು 750 ಮೆಟ್ರಿಕ್ ಟನ್‌ಗಳನ್ನು ದಾಟಿದೆ. ಇದು ಬ್ರ್ಯಾಂಡ್‌ನ ಶುದ್ಧತೆ ಮತ್ತು ಗುಣಮಟ್ಟದ ಬಗ್ಗೆ ಗ್ರಾಹಕರ ನಿರಂತರ ನಂಬಿಕೆಗೆ ಸಾಕ್ಷಿ ಎಂದು ಕೆಎಂಎಫ್ ಹೇಳಿದೆ.

ಜಿಎಸ್​​ಟಿ ಸುಧಾರಣೆ ನಂತರ ಬೆಲೆ ಪರಿಷ್ಕರಿಸಿದ್ದ ಕೆಎಂಎಫ್

ಇತ್ತೀಚೆಗೆ ಜಿಎಸ್‌ಟಿ ಸುಧಾರಣೆಗಳು ಅನುಷ್ಠಾನಕ್ಕೆ ಬಂದ ನಂತರ ಕೆಎಂಎಫ್ ನಂದಿನಿ ಹಾಲಿನ ಉತ್ಪನ್ನಗಳ ಬೆಲೆ ಪಟ್ಟಿಯನ್ನು ಪರಿಷ್ಕರಿಸಿದೆ. ತುಪ್ಪ, ಪನ್ನೀರ್, ಚೀಸ್, ಐಸ್ ಕ್ರೀಮ್‌ಗಳು, ಚಾಕೊಲೇಟ್‌ಗಳು ಮತ್ತು ಇತರ ಉತ್ಪನ್ನಗಳನ್ನು ಒಳಗೊಂಡಂತೆ ಒಟ್ಟು 21 ನಂದಿನಿ ಹಾಲಿನ ಉತ್ಪನ್ನಗಳ ಬೆಲೆಗಳನ್ನು ಪರಿಷ್ಕರಿಸಲಾಗಿದೆ.

ಇದನ್ನೂ ಓದಿ: Deepavali: ಬೆಂಗಳೂರಿನಿಂದ ವಿವಿಧ ಊರುಗಳಿಗೆ ಕೆಎಸ್​ಆರ್​ಟಿಸಿಯಿಂದ 2500 ಹೆಚ್ಚುವರಿ ಬಸ್

ದರ ಪರಿಷ್ಕರಣೆಯ ನಂತರ, ಈ ಹಿಂದೆ 650 ರೂ ಇದ್ದ ತುಪ್ಪದ (1000 ಮಿಲಿ) ದರ ಈಗ 610 ರೂ. ಆಗಿದೆ. 500 ಗ್ರಾಂ ತೂಕದ ಉಪ್ಪುರಹಿತ ಬೆಣ್ಣೆಯ ಬೆಲೆ ಈಗ 19 ಕಡಿಮೆಯಾಗಿ 286 ರೂ. ಆಗಿದೆ. 1 ಕೆಜಿ ಸಂಸ್ಕರಿಸಿದ ಚೀಸ್ ಬ್ಲಾಕ್ ಬೆಲೆ 530 ರೂ.ನಿಂದ 497 ರೂ.ಗೆ ಇಳಿಕೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ