Video: ನಂದಿನಿ ತುಪ್ಪದ ಬೆಲೆ ಏರಿಕೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೊಟ್ಟ ಸಮರ್ಥನೆ ಏನು?
ನಂದಿನಿ ತುಪ್ಪದ ಬೆಲೆ 610 ರೂ.ನಿಂದ 700ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ನಿರ್ಧಾರವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಈ ಬೆಲೆ ಹೆಚ್ಚಳವು ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ ಎಂಬುದಾಗಿ ಹೇಳಿದ್ದಾರೆ. ನಂದಿನಿ ತುಪ್ಪದ ಬೆಲೆ ಏಕೆ ಏಕಾಏಕಿ 90 ರೂಪಾಯಿ ಹೆಚ್ಚಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಇದು ರೈತರಿಗೆ ಒಳ್ಳೆದಾಗಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು, ನವೆಂಬರ್ 06: ನಂದಿನಿ ತುಪ್ಪದ ಬೆಲೆ 610 ರೂ.ನಿಂದ 700ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ನಿರ್ಧಾರವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಈ ಬೆಲೆ ಹೆಚ್ಚಳವು ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ ಎಂಬುದಾಗಿ ಹೇಳಿದ್ದಾರೆ. ನಂದಿನಿ ತುಪ್ಪದ ಬೆಲೆ ಏಕೆ ಏಕಾಏಕಿ 90 ರೂಪಾಯಿ ಹೆಚ್ಚಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಇದು ರೈತರಿಗೆ ಒಳ್ಳೆದಾಗಲಿದೆ. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಎಂಎಫ್‌ನ ಪ್ರಮುಖ ಉತ್ಪನ್ನವಾದ ನಂದಿನಿ ತುಪ್ಪದ ದರ ಹೆಚ್ಚಳವು ಹಾಲು ಉತ್ಪಾದಕರು ನ್ಯಾಯಯುತ ಬೆಲೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂಬುದು ಅವರ ವಾದವಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

