‘ಐ ಆ್ಯಮ್ ಗಾಡ್ ಸಿನಿಮಾದಲ್ಲಿ 35 ಸಾಂಗ್ಸ್ ಇದೆ’; ರವಿಚಂದ್ರನ್
ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರು ಅಭಿಮಾನಿಯೊಬ್ಬರ ಆಹ್ವಾನದ ಮೇರೆಗೆ ಹಾಸನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ತಮ್ಮ ಹೊಸ ಸಿನಿಮಾ ‘ಐ ಆಮ್ ಗಾಡ್, ದಿ ಕ್ರೇಜಿ’ ಕುರಿತು ಮಾತನಾಡಿದ ರವಿಚಂದ್ರನ್, ಇದು ಪ್ರೇಮಲೋಕದಂತಹ ಹೊಸ ಸೃಷ್ಟಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 35 ಹಾಡುಗಳನ್ನು ಹೊಂದಿರುವ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಗಳು ಮೂಡಿವೆ.
ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರು ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಹಾಸನಕ್ಕೆ ಭೇಟಿ ನೀಡಿದ್ದಾರೆ. ಅಪರೂಪಕ್ಕೆ ಕರೆಗಳನ್ನು ಸ್ವೀಕರಿಸುವ ರವಿಚಂದ್ರನ್, ಅಭಿಮಾನಿ ಗೌತಮ್ ಅವರ ನಿರಂತರ ಕೋರಿಕೆಗೆ ಮಣಿದು ಇಲ್ಲಿನ ಆಟೋ ಶೋರೂಮ್ ಉದ್ಘಾಟನೆಗೆ ಆಗಮಿಸಿದ್ದಾರೆ.‘ಯಾರನ್ನಾದರೂ ಭೇಟಿ ಮಾಡಬೇಕೆಂದರೆ ಋಣ ಇರಬೇಕು, ಅದು ನಿಮ್ಮ ಅಭಿಮಾನ, ಪ್ರೀತಿಯಿಂದ ಸಾಧ್ಯವಾಗಿದೆ’ ಎಂದು ರವಿಚಂದ್ರನ್ ನುಡಿದರು.
ಈ ಸಂದರ್ಭದಲ್ಲಿ, ತಮ್ಮ ಮುಂಬರುವ ಚಿತ್ರ ‘ಐ ಆ್ಯಮ್ ಗಾಡ್, ದಿ ಕ್ರೇಜಿ’ ಕುರಿತು ಮಾತನಾಡಿದ ಅವರು, ಇದು 35 ಹಾಡುಗಳನ್ನು ಒಳಗೊಂಡಿರುವ ಚಿತ್ರವಾಗಿದ್ದು, ‘ಮತ್ತೊಂದು ಪ್ರೇಮಲೋಕ ಸೃಷ್ಟಿ ಮಾಡಿದ್ದೀನಿ’ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಶೇಷ ಎಂದರೆ ಇದು ಎಐ ಸಿನಿಮಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

