ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ
ಖಾಸಗಿ ಕಾರ್ಯಕ್ರಮಕ್ಕೆ ಹಾಸನಕ್ಕೆ ಆಗಮಿಸಿದ್ದ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ರವಿಚಂದ್ರನ್ ಅವರು ಹಾಸನದ ಬಗ್ಗೆ ಮಾತನಾಡಿದರು. ಒಬ್ಬೊರನ್ನ ಒಬ್ಬರು ಭೇಟಿಯಾಗಬೇಕಾದರೆ ಋಣ ಇರಬೇಕು. ನಿಮ್ಮ ಅಭಿಮಾನ, ಪ್ರೀತಿ ಇಲ್ಲಿಗೆ ಕರೆದುಕೊಂಡು ಬಂದಿದೆ’ ಎಂದು ಅವರು ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದ ಸಲುವಾಗಿ ಹಾಸನಕ್ಕೆ ಆಗಮಿಸಿದ್ದ ನಟ ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ರವಿಚಂದ್ರನ್ ಅವರು ಹಾಸನದ ಬಗ್ಗೆ ಮಾತನಾಡಿದರು. ‘25 ವರ್ಷದ ಹಿಂದೆ ‘ಶಾಂತಿ ಕ್ರಾಂತಿ’ ಸಿನಿಮಾ ರಿಲೀಸ್ ಆದ ಸಮಯದಲ್ಲಿ ಹಾಸನಕ್ಕೆ ಬಂದಿದ್ದೆ. ಹಾಸನಕ್ಕೆ ಬಾರದೇ ನಾನು ಸಕಲೇಶಪುರಕ್ಕೆ ಹೋಗೋದೇ ಇಲ್ಲ. ಬೈಪಾಸ್ ಮಾಡಿ, ಬೈಪಾಸ್‌ನಲ್ಲಿ ಹೋಗುವ ಹಾಗೇ ಆಗಿದೆ ಪ್ರಪಂಚ ಈಗ. ಸಕಲೇಶಪುರಕ್ಕೆ ಜಾಸ್ತಿ ಶೂಟಿಂಗ್‌ಗೆ ಹೋಗಬೇಕಾದರೆ ಹಾಸನ ಮೇಲೆ ಹೋಗೊದು ನಾನು. ನನಗೆ ತುಂಬಾ ಇಷ್ಟವಾದ ಜಾಗ ಸಕಲೇಶಪುರ. ನಾನು ಎಲ್ಲೇ ಕಾಲಿಟ್ಟರು ಒಳ್ಳೆಯದಾಗಲಿ ಎಂದು ಬಯಸುವುದು ಸತ್ಯ. ನಾನು ಹಾಸನಕ್ಕೆ ಬಂದ ಕೂಡಲೇ ಮಳೆ ಕೂಡ ಬಂತು. ಒಬ್ಬೊರನ್ನ ಒಬ್ಬರು ಭೇಟಿಯಾಗಬೇಕಾದರೆ ಋಣ ಇರಬೇಕು. ನಿಮ್ಮ ಅಭಿಮಾನ, ಪ್ರೀತಿ ಇಲ್ಲಿಗೆ ಕರೆದುಕೊಂಡು ಬಂದಿದೆ’ ಎಂದು ರವಿಚಂದ್ರನ್ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

