- Kannada News Karnataka Navratri celebrations in Bengaluru, buyers are mesmerized by the beauty of Dussehra dolls!
ಬೆಂಗಳೂರಿನಲ್ಲಿ ಕಳೆಗಟ್ಟಿದ ನವರಾತ್ರಿ ಸಂಭ್ರಮ: ದಸರಾ ಬೊಂಬೆಗಳ ಸೌಂದರ್ಯಕ್ಕೆ ಸಿಟಿಮಂದಿ ಫಿದಾ, ಇಲ್ಲಿವೆ ಫೋಟೋಸ್
ರಾಜ್ಯದ ಹಲವೆಡೆ ಪಟ್ಟದ ಬೊಂಬೆಗಳನ್ನ ಕೂರಿಸಿ ಪೂಜಿಸುವ ಸಂಪ್ರದಾಯವಿದೆ. ಅದೇ ರೀತಿ ಬೆಂಗಳೂರಿನಲ್ಲೂ ನವರಾತ್ರಿಯ ಸೊಬಗು ಜೋರಾಗಿದೆ. ದಸರಾ ಬೊಂಬೆಗಳ ಸೊಬಗು ಸಿಟಿಮಂದಿಯ ಮನಸೂರೆಗೊಳಿಸ್ತಿದೆ. ಪಟ್ಟದ ರಾಣಿ, ಮದುವೆ ದಿಬ್ಬಣದ ಜೊತೆಗೆ ಗತಕಾಲದ ವೈಭವಗಳನ್ನು ಸಾರುವ ಬೊಂಬೆಗಳು ಬೆಂಗಳೂರಿಗರನ್ನು ತನ್ನತ್ತ ಸೆಳೆಯುತ್ತಿವೆ.
Updated on: Sep 24, 2025 | 12:45 PM

ಸೂಕ್ಷ್ಮ ಕೆತ್ತನೆ ಜೊತೆಗೆ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ನಸುನಗುತ್ತ ಆಕರ್ಷಣೆ ಮಾಡುತ್ತಿರುವ ಬೊಂಬೆಗಳ ಲೋಕ, ಇತ್ತ ಪಟ್ಟದ ರಾಣಿ, ಮದುವೆ ದಿಬ್ಬಣದ ಜೊತೆಗೆ ಗತಕಾಲದ ವೈಭವಗಳನ್ನ ಕಣ್ಣಿಗೆ ಕಟ್ಟಿಕೊಡುತ್ತಿವೆ.

ಸದ್ಯ ಅರಮನೆ ನಗರಿ ಮೈಸೂರಿನಲ್ಲಿ ನವರಾತ್ರಿಯ ರಂಗು ಪಸರಿಸುತ್ತಿದ್ರೆ, ಇತ್ತ ರಾಜಧಾನಿಯಲ್ಲೂ ನವರಾತ್ರಿಯ ಸಂಭ್ರಮ ಮನೆಮಮಾಡಿದೆ. ಸದ್ಯ ದಸರಾ ಬೊಂಬೆಗಳನ್ನ ಕೂರಿಸಿ ಪೂಜೆ ಸಲ್ಲಿಸಲು ಸಜ್ಜಾದ ಸಿಟಿಮಂದಿಗೆ ಬಗೆ ಬಗೆಯ ದಸರಾ ಬೊಂಬೆಗಳು ಕೈಬೀಸಿ ಕರೆಯುತ್ತಿದ್ರೆ, ಇತ್ತ ನವರಾತ್ರಿಯ ಸಂಭ್ರಮಕ್ಕೆ ಬೊಂಬೆಗಳ ಆಗಮನ ಮತ್ತಷ್ಟು ಮೆರಗು ನೀಡೋಕೆ ಸಜ್ಜಾಗಿದೆ

ನವರಾತ್ರಿಯ ಸಂಭ್ರಮದ ಜೊತೆಗೆ ಬೊಂಬೆ ಹಬ್ಬ ಆಚರಿಸೋಕೆ ಕಾದುನಿಂತ ಜನರು ದಸರಾ ಬೊಂಬೆಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಲ್ಲಿ ನವರಾತ್ರಿಯ ಸಮಯದಲ್ಲೇ ನವದುರ್ಗೆಯರ ಜೊತೆಗೆ ದಸರಾ ಬೊಂಬೆಗಳನ್ನ ಕೂಡ ಇಟ್ಟು ಪೂಜಿಸೋ ಆಚರಣೆ ನಡೆದುಬಂದಿದೆ.

ಮಲ್ಲೇಶ್ವರ ಸುತ್ತಮುತ್ತ ದಸರಾ ಬೊಂಬೆಗಳ ಪ್ರದರ್ಶನ ಹಾಗೂ ಮಾರಾಟ ಭರ್ಜರಿಯಾಗಿ ನಡೀತಿದ್ದು, ರಾಜ್ಯ ಮಾತ್ರವಲ್ಲದೇ ಹೊರರಾಜ್ಯಗಳ ಕಲಾವಿದರ ಕೈನಲ್ಲಿ ಅರಳಿದ ದಸರಾ ಬೊಂಬೆಗಳಿಗೆ ಸಖತ್ ಡಿಮ್ಯಾಂಡ್ ಶುರುವಾಗಿದೆ

ನವರಾತ್ರಿ ವೇಳೆ ರಾಜ್ಯದ ಹಲವೆಡೆ ಪಟ್ಟದ ಬೊಂಬೆಗಳನ್ನ ಕೂರಿಸಿ ಪೂಜೆ ಪುನಸ್ಕಾರ ಸಲ್ಲಿಸೋ ಸಂಪ್ರದಾಯ ಇದೆ. ಇತ್ತ ರಾಜಧಾನಿಯಲ್ಲೂ ನವರಾತ್ರಿಯ ಸಂಭ್ರಮ ಮನೆ ಮಾಡಿದ್ದು, ದಸರಾ ಬೊಂಬೆಗಳ ಸೊಬಗು ಸಿಟಿಮಂದಿಯ ಮನಸೂರೆಗೊಳಿಸ್ತಿದೆ. ರಾಜ, ಮಂತ್ರಿ, ಸೈನಿಕರು, ಮದುವೆ ಮಂಟಪ, ಚಾಮುಂಡೇಶ್ವರಿಯ ಬೊಂಬೆಗಳ ಸೌಂದರ್ಯಕ್ಕೆ ಜನರು ಫಿದಾ ಆಗಿದ್ದಾರೆ.




