- Kannada News Photo gallery Mysuru Dasara Jamboo Savari: Millions of people witnessed the wonderful moment, Karnataka news in kannada
Mysuru Dasara: ಮೈಸೂರು ದಸರಾ ಜಂಬೂಸವಾರಿ: ಅದ್ಭುತ ಕ್ಷಣ ಕಣ್ತುಂಬಿಕೊಂಡ ಕೋಟ್ಯಂತರ ಜನರು
Jamboo Savari: ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಇಂದು ದಸರಾ ಸಂಭ್ರಮ ಮನೆ ಮಾಡಿತ್ತು. ಮುಡಾ ಸಂಕಷ್ಟದ ನಡುವೆಯೇ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಅದ್ಧೂರಿ ಚಾಲನೆ ನೀಡಿದರು. ಜಂಬೂಸವಾರಿಯ ಅದ್ಭುತ ಕ್ಷಣಗಳು ಇಲ್ಲಿವೆ.
Updated on: Oct 12, 2024 | 7:15 PM

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಅದ್ಧೂರಿ ಚಾಲನೆ ದೊರೆತಿದೆ. ಐತಿಹಾಸಿಕ ಜಂಬೂಸವಾರಿಗೆ ಮಲ್ಲಿಗೆ ನಗರಿ ಮೈಸೂರು ಸುಂದರವಾಗಿ ಸಜ್ಜಾಗಿತ್ತು. ಗಜಪಡೆಗಳ ಕ್ಯಾಪ್ಟನ್ ಅಭಿಮನ್ಯು ಪಡೆ ಚಿನ್ನದ ಅಂಬಾರಿ ಹೊತ್ತು ಸಾಗಿದ್ದಾನೆ. ಈ ಐತಿಹಾಸಿಕ ಕ್ಷಣವನ್ನು ಕ್ಯೋಟ್ಯಾಂತರ ಜನರು ಕಣ್ತುಂಬಿಕೊಂಡಿದ್ದಾರೆ.

ಇಂದು ಮಧ್ಯಾಹ್ನ 1.41 ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಿಸಲಾಯಿತು. ಬಳಿಕ ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಚಾಲನೆ ನೀಡಲಿದರು. ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಸಾಥ್ ನೀಡಿದ್ದಾರೆ.

ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ವೇಳೆ ರಾಜವಂಶಸ್ಥ ಯದುವೀರ ಗೈರಾಗಿದ್ದರು. ಗೈರಾಗುವ ಬಗ್ಗೆ ಟಿವಿ9ಗೆ ಮೊದಲೇ ಯದುವೀರ ಒಡೆಯರ್ ತಿಳಿಸಿದ್ದರು. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಪುಷ್ಪಾರ್ಚನೆ ಮಾಡಲಾಗಿದೆ.

ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ಆಸೀನರಾಗಿದ್ದು ಹೀಗೆ. ಅಭಿಮನ್ಯುವಿನ ಮಾವುತ ವಸಂತ ಮುಖದಲ್ಲಿ ಮಂದಹಾಸ.

750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು 5ನೇ ಬಾರಿಗೆ ಹೊತ್ತ ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯವಾಗಿ ಹೆಜ್ಜೆಹಾಕಿದ್ದಾನೆ. ಈ ವೇಳೆ ಕ್ಯಾಪ್ಟನ್ ಅಭಿಮನ್ಯುಗೆ ಕುಮ್ಕಿ ಆನೆಗಳಾದ ಹಿರಣ್ಯ ಮತ್ತು ಲಕ್ಷ್ಮೀ ಸಾಥ್ ನೀಡಿದ್ದು, ಧನಂಜಯ ನಿಶಾನೆ ಆನೆಯಾಗಿದ್ದ. ಒಟ್ಟು 9 ಆನೆಗಳು ದಸರಾ ಮೆರವಣಿಗೆಯಲ್ಲಿ ಸಾಗಿವೆ.

ಅರಮನೆಯಿಂದ ಆರಂಭಗೊಂಡಿದ್ದ ಜಂಬೂಸವಾರಿ ಅರಮನೆ, ಜಯಚಾಮರಾಜ ವೃತ್ತ, ಕೃಷ್ಣರಾಜೇಂದ್ರ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಆರ್ಎಂಸಿ ವೃತ್ತ, ಬಂಬೂಬಜಾರ್ ಮೂಲಕ ಬನ್ನಿಮಂಟಪ ತಲುಪಿತು.

ಇನ್ನು 140 ಕ್ಕೂ ಹೆಚ್ಚು ಕಲಾ ತಂಡ ಹಾಗೂ 36 ಜಿಲ್ಲೆಗಳ 51 ಸ್ತಬ್ಧ ಚಿತ್ರಗಳು ಜಂಬೂಸವಾರಿಯಲ್ಲಿ ಭಾಗಿಯಾಗಿದ್ದವು. ಜಂಬೂ ಸವಾರಿ ನೋಡಲು ಬಂದ ಜನರಿಂದ ತಮಟೆ, ಡೋಲು ವಾದ್ಯಕ್ಕೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ವಿಶ್ವವಿಖ್ಯಾತ ಜಂಬೂಸವಾರಿಯನ್ನು ಕೋಟ್ಯಂತರ ಭಕ್ತರು ಕಾತರ ಕಾದು ಕಣ್ತಿಂಬಿಕೊಂಡಿದ್ದಾರೆ. ಅಂಬಾರಿಯಲ್ಲಿ ಆಸಿನವಾಗಿದ್ದ ನಾಡ ದೇವತೆ ಚಾಮುಂಡೇಶ್ವರಿಯನ್ನು ಕಂಡು ಭಕ್ತರು ಪುನೀತರಾದರು.

ಇನ್ನು ಜಂಬೂಸವಾರಿ ನಡೆಯುವ ದಾರಿಯುದ್ದಕ್ಕೂ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.



















