IND vs BAN: 25 ಬೌಂಡರಿ, 22 ಸಿಕ್ಸರ್, 297 ರನ್…; ಹೈದರಾಬಾದ್‌ನಲ್ಲಿ ಭಾರತ ಬರೆದ ದಾಖಲೆ ಒಂದೆರಡಲ್ಲ..!
IND vs BAN: ಹೈದರಾಬಾದ್‌ನಲ್ಲಿ ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕಿಳಿದಿದ್ದ ಬಾಂಗ್ಲಾದೇಶ ತಂಡಕ್ಕೆ ಭಾರತದ ಬ್ಯಾಟ್ಸ್‌ಮನ್‌ಗಳು ನರಕ ದರ್ಶನ ಮಾಡಿಸಿದ್ದಾರೆ. ಪಂದ್ಯದುದ್ದಕ್ಕೂ ಬೌಂಡರಿ, ಸಿಕ್ಸರ್ಗಳ ಮಳೆಗರೆದ ಟೀಂ ಇಂಡಿಯಾ ಬ್ಯಾಟರ್ಸ್ ನಿಗದಿತ 20 ಓವರ್‌ಗಳಲ್ಲಿ ಬರೋಬ್ಬರಿ 297 ರನ್ ಕಲೆಹಾಕಿದರು. ಈ ಮೂಲಕ ಒಂದೇ ಟಿ20 ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು.