‘ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ’: ಪ್ರಿಯಾಂಕ್ ಖರ್ಗೆ ಪರ ಯುವ ಕಾಂಗ್ರೆಸ್ನಿಂದ ಪೋಸ್ಟರ್ ಅಭಿಯಾನ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಕೌಂಟರ್ ನೀಡಲು ಬೆಂಗಳೂರಿನ ಹಲವೆಡೆ ಯುವ ಕಾಂಗ್ರೆಸ್ 'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ' ಎಂಬ ಪೋಸ್ಟರ್ಗಳನ್ನು ಅಂಟಿಸಿದ್ದು, ಕಾಂಗ್ರೆಸ್-ಜೆಡಿಎಸ್ ಪೋಸ್ಟರ್ ವಾರ್ ತೀವ್ರಗೊಂಡಿದೆ. ಪ್ರಿಯಾಂಕ್ ಖರ್ಗೆ ನೀಡಿದ್ದ ಹಳ್ಳಿಗುಗ್ಗು ಹೇಳಿಕೆ ಖಂಡಿಸಿ ಹಾಸನ, ರಾಮನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಹಿಂದೆ ಪೋಸ್ಟರ್ ಅಂಟಿಸಿದ್ದರು ಎನ್ನುವುದಿಲ್ಲಿ ಗಮನಾರ್ಹ.
ಬೆಂಗಳೂರು, ನವೆಂಬರ್ 08: ರಾಜ್ಯ ರಾಜಕಾರಣದಲ್ಲಿ ಬ್ಯಾನರ್, ಪೋಸ್ಟರ್ ವಾರ್ ಜೋರಾಗಿದೆ. ಗೃಹ ಸಚಿವ ಪ್ರಿಯಾಂಕ್ ಪರವಾಗಿ ಬೆಂಗಳೂರಿನ ಹಲವೆಡೆ ಕಾಂಗ್ರೆಸ್ ಯುವ ಘಟಕದಿಂದ ಪೋಸ್ಟರ್ ಅಂಟಿಸಲಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ನೀಡಿ, ‘ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ’ ಎಂಬ ಬರಹಗಳು ಪೋಸ್ಟರ್ನಲ್ಲಿವೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ JDS ಕಚೇರಿ ಬಳಿ, ಓಕಳಿಪುರಂ, ಮೆಜೆಸ್ಟಿಕ್ನಲ್ಲೂ ಯುವ ಕಾಂಗ್ರೆಸ್ ಕಾರ್ಯಕರ್ತರು ರಾತ್ರೋರಾತ್ರಿ ಪೋಸ್ಟರ್ ಅಂಟಿಸಿದ್ದಾರೆ. ಪ್ರಿಯಾಂಕ್ ಖರ್ಗೆ ನೀಡಿದ್ದ ಹಳ್ಳಿಗುಗ್ಗು ಹೇಳಿಕೆ ಖಂಡಿಸಿ ಹಾಸನ, ರಾಮನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಹಿಂದೆ ಪೋಸ್ಟರ್ ಅಂಟಿಸಿದ್ದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

