AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಹೊಸ ರೂಲ್ಸ್‌: ಗ್ರಾಹಕರು ಮಾಡಬೇಕಾಗಿದ್ದಿಷ್ಟೇ!

ಗ್ಯಾಸ್ ಸಿಲಿಂಡರ್ ಬಳಸೋ ಗ್ರಾಹಕರೇ, ಈ ಸುದ್ದಿ ನಿಮಗೆ ಬಹಳ ಮುಖ್ಯ. ನಿಮ್ಮ ಮನೆಯ ಗ್ಯಾಸ್ ಕನೆಕ್ಷನ್‌ಗೆ ಇನ್ನೂ e-KYC ಆಗಿಲ್ವಾ? ಹಾಗಿದ್ರೆ ನಿರ್ಲಕ್ಷ್ಯ ಮಾಡಬೇಡಿ. e-KYC ಮಾಡಿಸದಿದ್ರೆ ಗೃಹ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗಬಹುದು ಅನ್ನೋ ಎಚ್ಚರಿಕೆ ನೀಡಲಾಗಿದೆ. e-KYC ಎಲ್ಲಿ ಮಾಡಿಸಬೇಕು? ಕೊನೆ ದಿನಾಂಕ ಯಾವಾಗ ಎನ್ನುವ ವಿವರ ಇಲ್ಲಿದೆ.

ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಹೊಸ ರೂಲ್ಸ್‌: ಗ್ರಾಹಕರು ಮಾಡಬೇಕಾಗಿದ್ದಿಷ್ಟೇ!
ಪ್ರಾತಿನಿಧಿಕ ಚಿತ್ರ
ರಮೇಶ್ ಬಿ. ಜವಳಗೇರಾ
|

Updated on: Aug 08, 2026 | 10:13 PM

Share

ಬೆಂಗಳೂರು, (ಆಗಸ್ಟ್ 08): ಆಗಸ್ಟ್ 15ರೊಳಗೆ e-KYC ಪೂರ್ಣಗೊಳಿಸುವಂತೆ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಸೂಚನೆ ನೀಡಲಾಗಿದೆ. ಗೃಹ ಬಳಕೆಯ LPG ಸಂಪರ್ಕ (gas cylinder)ಹೊಂದಿರುವ ಪ್ರತಿಯೊಬ್ಬ ಗ್ರಾಹಕರೂ e-KYC ಪೂರ್ಣಗೊಳಿಸಿಕೊಳ್ಳುವಂತೆ ತೈಲ ಕಂಪನಿಗಳು ಹಾಗೂ ಗ್ಯಾಸ್ ವಿತರಕರು ಮನವಿ ಮಾಡುತ್ತಿದ್ದಾರೆ. ಗ್ರಾಹಕರ ಮಾಹಿತಿ ಪರಿಶೀಲನೆ, ದಾಖಲೆಗಳ ಅಪ್‌ಡೇಟ್, ನಿಜವಾದ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ e-KYC ಪ್ರಕ್ರಿಯೆ ನಡೆಸಲಾಗ್ತಿದೆ. ಆದ್ರೆ e-KYC ಮಾಡಿಸದಿದ್ರೆ ಗೃಹ ಬಳಕೆಯ ಸಿಲಿಂಡರ್ ಸಿಗೋದಿಲ್ಲ. ವಾಣಿಜ್ಯ ದರದಲ್ಲಿ ಸಿಲಿಂಡರ್ ಖರೀದಿಸಬೇಕಾಗುತ್ತೆ. 2108 ರೂಪಾಯಿ ಕೊಟ್ಟು ಕಮರ್ಷಿಯಲ್ ಸಿಲಿಂಡರ್ ಖರೀದಿಸಬೇಕಾಗುತ್ತೆ ಅಂತ ಬೆಂಗಳೂರಿನ ಗ್ಯಾಸ್ ವಿತರಕರು ಮನವಿ ಮಾಡುತ್ತಿದ್ದಾರೆ.

ಕೆವೈಸಿ ಎಲ್ಲಿ ಮಾಡಿಸಬೇಕು?

ಕೇಂದ್ರ ಸರ್ಕಾರದ ಸ್ಪಷ್ಟನೆ ಪ್ರಕಾರ, e-KYC ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದು ಗ್ರಾಹಕರು ಪರಿಶೀಲಿಸಿಕೊಳ್ಳಬೇಕು. ಅಧಿಕೃತ ಮಾಹಿತಿ ಆಧರಿಸಿಯೇ ಮುಂದಿನ ಕ್ರಮ ಕೈಗೊಳ್ಳಬೇಕು. ಹಾಗಾಗಿ ಕೊನೆಯ ಕ್ಷಣದವರೆಗೆ ಕಾಯದೇ ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ e-KYC ಸ್ಟೇಟಸ್ ಪರಿಶೀಲಿಸಿಕೊಳ್ಳಬೇಕಿದೆ. ಅಥವಾ ಸಂಬಂಧಪಟ್ಟ ಅಧಿಕೃತ ವ್ಯವಸ್ಥೆಯ ಮೂಲಕ e-KYC ಪೂರ್ಣಗೊಳಿಸಬೇಕು. ಗ್ಯಾಸ್ ಸಂಪರ್ಕ ನಿಮ್ಮ ಹೆಸರಲ್ಲಿದ್ರೆ, e-KYC ಆಗಿದೆಯಾ ಇಲ್ಲವಾ ಅನ್ನೋದನ್ನ ಒಮ್ಮೆ ಚೆಕ್ ಮಾಡಿಕೊಳ್ಳಬೇಕು.

e-KYC ಅಗತ್ಯವಿದ್ದರೆ ಕೂಡಲೇ ಪೂರ್ಣಗೊಳಿಸಿ. ಮುಂದೆ ಸಿಲಿಂಡರ್ ಪಡೆಯುವಾಗ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಿ ಅನ್ನೋದು ತೈಲ ಕಂಪನಿಗಳು ಹಾಗೂ ಗ್ಯಾಸ್ ವಿತರಕರ ಮನವಿಯಾಗಿದೆ.

ಕೆವೈಸಿ ಅನ್ನು ಪೂರ್ಣಗೊಳಿಸದಿದ್ದರೆ ನಿರ್ಬಧ!

ನೀವು ದೀರ್ಘಕಾಲದವರೆಗೆ KYC ಅನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ ಗ್ಯಾಸ್ ಸಂಪರ್ಕವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ನೀವು ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಮನೆಯಿಂದಲೇ ಕೆಲವೇ ನಿಮಿಷಗಳಲ್ಲಿ ಇ-ಕೆವೈಸಿಯನ್ನು ಪೂರ್ಣಗೊಳಿಸಬಹುದು.

ಮಾಡಬೇಕಾಗಿದ್ದೇನು?

ನೀವು ಗ್ಯಾಸ್ ಹೊಂದಿರುವ ಕಂಪನಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ (ಉದಾ. ಇಂಡೇನ್, ಭಾರತ್ ಗ್ಯಾಸ್, ಅಥವಾ HP ಗ್ಯಾಸ್). ನಿಮ್ಮ ಗ್ಯಾಸ್ ಸಂಪರ್ಕಕ್ಕೆ ಲಿಂಕ್ ಮಾಡಲಾದ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ. ಅಪ್ಲಿಕೇಶನ್‌ನಲ್ಲಿರುವ ಹೋಮ್‌ಗೆ ಹೋಗಿ ‘ಇ-ಕೆವೈಸಿ’ ಅಥವಾ ‘ಆಧಾರ್ ಪರಿಶೀಲನೆ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೊಬೈಲ್ ಕ್ಯಾಮೆರಾ ಬಳಸಿ ಮುಖ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ. ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಗ್ರಾಹಕರು ಹೆಚ್ಚಿನ ತೊಡಕುಗಳು ಮತ್ತು ಸಬ್ಸಿಡಿ ವಿಳಂಬವನ್ನು ತಪ್ಪಿಸಲು ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us