AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಬಿಜೆಪಿ ಹೊಸ ಉಸ್ತುವಾರಿಗಳ ನೇಮಕ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ

ದೇಶದ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಗೆ ಬಿಜೆಪಿ ನೂತನ ಉಸ್ತುವಾರಿಗಳು ಮತ್ತು ಸಹ-ಉಸ್ತುವಾರಿಗಳನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನೇಮಕ ಮಾಡಿದ್ದಾರೆ. ಇನ್ನು ಕರ್ನಾಟಕದ ನೂತನ ರಾಜ್ಯ ಉಸ್ತುವಾರಿಯಾಗಿ ಹರೀಶ್ ದ್ವಿವೇದಿ ಅವರನ್ನು ನೇಮಕ ಮಾಡಲಾಗಿದೆ. ಸಹ-ಉಸ್ತುವಾರಿಯಾಗಿ ಡಾ. ಕಾಸಂ ವೆಂಕಟೇಶ್ವರಲು ಅವರಿಗೆ ಜವಾಬ್ದಾರಿ ನೀಡಲಾಗಿದೆ. ಇನ್ನು ಈ ಬದಲಾವಣೆ ಬಗ್ಗೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ಬಿಜೆಪಿ ಹೊಸ ಉಸ್ತುವಾರಿಗಳ ನೇಮಕ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
Harish Dwivedi And Yatnal
ಕಿರಣ್​ ಹನಿಯಡ್ಕ
| Edited By: |

Updated on: Sep 23, 2026 | 8:21 PM

Share

ಬೆಂಗಳೂರು, (ಸೆಪ್ಟೆಂಬರ್ 23): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ವಿವಿಧ ರಾಜ್ಯಗಳ ಉಸ್ತುವಾರಿಗಳ ಪಟ್ಟಿ ಪ್ರಕಟಿಸಿದ್ದು, ಈ ಹಿಂದೆ ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿದ್ದ ರಾಧ ಮೋಹನ್ ದಾಸ್‌ ಅಗರ್ವಾಲ್, ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರಿಗೆ ಕೊಕ್ ನೀಡಲಾಗಿದ್ದು, ಕರ್ನಾಟಕದ ನೂತನ ಪ್ರಭಾರಿಯಾಗಿ (ಉಸ್ತುವಾರಿ) ಹರೀಶ್ ದ್ವಿವೇದಿ ಹಾಗೂ ಸಹ-ಪ್ರಭಾರಿಯಾಗಿ ಡಾ. ಕಸಮ್ ವೆಂಕಟೇಶ್ವರ್ಲು ನೇಮಕಗೊಂಡಿದ್ದಾರೆ.ಇನ್ನು ಈ ಬದಲಾವಣೆ ಬಗ್ಗೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಪ್ರತಿಕ್ರಿಯಿಸಿದ್ದು, ಹಿಂದೆ ಅರುಣ್ ಸಿಂಗ್ ಮತ್ತು ರಾಧಾ ಮೋಹನ್ ದಾಸ್ ಅಗರವಾಲ್ ಉಸ್ತುವಾರಿಗಳಾಗಿದ್ದಾಗಲೂ ಬಹಳ ನಿರೀಕ್ಷೆಗಳಿತ್ತು, ಏನೂ ಲಾಭ ಆಗಲಿಲ್ಲ. ಈಗ ರಾಧಾ ಮೋಹನ್ ದಾಸ್ ಅಗರವಾಲ್ ಅವರನ್ನು ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ದ್ವಿವೇದಿ ಮತ್ತು ವೆಂಕಟೇಶ್ವರಲು ಅವರಿಂದ ನಿರೀಕ್ಷೆ ಮಾಡಬೇಕಷ್ಟೇ. ಒಮ್ಮಿಂದೊಮ್ಮೆಲೇ ಬದಲಾವಣೆ ಆಗುತ್ತದೆ ಎಂದು ಏನು ಖುಷಿಪಟ್ಟಿಲ್ಲ ಎಂದಿದ್ದಾರೆ.

ನವೆಂಬರ್ ನಲ್ಲಿ ರಾಜ್ಯ ಅಧ್ಯಕ್ಷರ ಬದಲಾವಣೆ ಆದರೆ ಈ ಉಸ್ತುವಾರಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅನ್ನಿಸುತ್ತದೆ. ನನ್ನ ಉಚ್ಚಾಟನೆ ಮಾಡಿದ ಮೇಲೆ ನಾನು ಯಾವುದೇ ಬಿಜೆಪಿ ನಾಯಕರನ್ನು ಹೋಗಿ ಭೇಟಿ ಮಾಡಿಲ್ಲ. ನನ್ನ ಉಚ್ಚಾಟನೆ ಮರುಪರಿಶೀಲಿಸಿ ಅಂತಾ ನಾನು ಅರ್ಜಿ ಹಾಕಿಲ್ಲ. ಆಮೇಲೆ ನಾನು ಬಿಜೆಪಿಗೆ ಬೈದಿಲ್ಲ. ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರ ಬಿಟ್ಟರೆ ನಾನು ಬೇರೆ ಯಾವ ಬಿಜೆಪಿ ನಾಯಕರಿಗೆ ಬೈದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ನೋಡಿ: ಬಿಜೆಪಿಯಿಂದ ರಾಜ್ಯ ಉಸ್ತುವಾರಿಗಳ ಬದಲಾವಣೆ: ಹರೀಶ್ ದ್ವಿವೇದಿಗೆ ಕರ್ನಾಟಕ ಜವಾಬ್ದಾರಿ

ದೇಶ ವಿರೋಧಿ ಚಟುವಟಿಕೆ ಮಾಡುವವರ ಜೊತೆ ನಾನು ಶಾಮೀಲಾಗಿಲ್ಲ. ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಜೊತೆ ನಾನು ಹೊಂದಾಣಿಕೆ ಮಾಡಿಕೊಂಡಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಯಾರಿಗೆ ಹೇಳಿದರೋ ಅವರಿಗೆ ಮತ ಹಾಕಿದ್ದೇನೆ. ನನ್ನ ನಿಷ್ಠೆ ಬಿಜೆಪಿಗೆ ಮತ್ತು ಮೋದಿಗೆ ತೋರಿಸಿಕೊಟ್ಟಿದ್ದೇನೆ. ಇನ್ನು ಮುಂದಾದರೂ ಆ ಎಲ್ಲಾ ಗಣನೆ ಮಾಡಿ ನನಗೆ ಮಹತ್ತರ ಹುದ್ದೆ ಬಗ್ಗೆ ಪರಿಶೀಲಿಸುತ್ತೇವೆ ಎಂದರೆ ಮಾತ್ರ ಬಿಜೆಪಿಗೆ ವಾಪಸಾಗುವ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಹನಿಯಡ್ಕ
ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
ಕೆವಿಎನ್ ವಿರುದ್ಧ ‘ಬಲರಾಮನ ದಿನಗಳು’ ಸಿನಿಮಾ ನಿರ್ಮಾಪಕ ದೂರು: ವಿಡಿಯೋ
ಕೆವಿಎನ್ ವಿರುದ್ಧ ‘ಬಲರಾಮನ ದಿನಗಳು’ ಸಿನಿಮಾ ನಿರ್ಮಾಪಕ ದೂರು: ವಿಡಿಯೋ
ಬೀದರ್‌ನಲ್ಲಿ ವಿದ್ಯುತ್ ನೀಡಲು ಕಣ್ಣಾಮುಚ್ಚಾಲೆ
ಬೀದರ್‌ನಲ್ಲಿ ವಿದ್ಯುತ್ ನೀಡಲು ಕಣ್ಣಾಮುಚ್ಚಾಲೆ
ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ: ಕಣ್ಣೀರಿಡುತ್ತಲೇ ಹೊರಹೋದ ಶಾಸಕಿ ರೂಪಕಲಾ!
ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ: ಕಣ್ಣೀರಿಡುತ್ತಲೇ ಹೊರಹೋದ ಶಾಸಕಿ ರೂಪಕಲಾ!
ಉಪ್ಪಿನ ಬಳಕೆಗೆ ಬ್ರೇಕ್ ಹಾಕಲು ಹೆಲ್ತ್ ಡಿಪಾರ್ಟ್‌ಮೆಂಟ್ ಪ್ಲಾನ್
ಉಪ್ಪಿನ ಬಳಕೆಗೆ ಬ್ರೇಕ್ ಹಾಕಲು ಹೆಲ್ತ್ ಡಿಪಾರ್ಟ್‌ಮೆಂಟ್ ಪ್ಲಾನ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಯಶವಂತರಾಯಗೌಡ ಖಡಕ್ ಮಾತು
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಯಶವಂತರಾಯಗೌಡ ಖಡಕ್ ಮಾತು
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿರುದ್ಧ ದೂರು: ಅಸಲಿ ವಿಷಯ ಇಲ್ಲಿದೆ
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿರುದ್ಧ ದೂರು: ಅಸಲಿ ವಿಷಯ ಇಲ್ಲಿದೆ
ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ
ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ
ರಾಷ್ಟ್ರೀಯ ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ
ರಾಷ್ಟ್ರೀಯ ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ