PM Modi Visits Prashanti Kutiram Live: ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ: ಬೆಂಗಳೂರಿನ ಜಿಗಣಿ ಬಳಿಯಿರುವ ಎಸ್-ವ್ಯಾಸ (S-VYASA) ವಿಶ್ವವಿದ್ಯಾಲಯದ ‘ಪ್ರಶಾಂತಿ ಕುಟೀರ’ದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಭದ್ರತಾ ದೃಷ್ಟಿಯಿಂದ ಪಾಸ್ ಹೊಂದಿರುವ ಕೇವಲ 500 ಗಣ್ಯರಿಗೆ ಮಾತ್ರ ಒಳಪ್ರವೇಶವಿದ್ದು, ಹೊರಭಾಗದಲ್ಲಿ ವಿದ್ಯಾರ್ಥಿಗಳ ವೀಕ್ಷಣೆಗಾಗಿ ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು, ನವೆಂಬರ್ 13: ಬೆಂಗಳೂರಿನ ಜಿಗಣಿ ಬಳಿಯಿರುವ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (S-VYASA) ‘ಪ್ರಶಾಂತಿ ಕುಟೀರ’ದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ಈ ಕಾರ್ಯಕ್ರಮಕ್ಕೆ ಕೇವಲ 500 ಜನರಿಗೆ ಮಾತ್ರ ಸೀಮಿತ ಅವಕಾಶ ಕಲ್ಪಿಸಲಾಗಿದ್ದು, ಕುಟೀರದ ಸಿಬ್ಬಂದಿಯಿಂದ ಅಧಿಕೃತ ಪಾಸ್ ಪಡೆದವರಿಗೆ ಮಾತ್ರ ಸಭಾಂಗಣದ ಒಳಗೆ ಪ್ರವೇಶ ನೀಡಲಾಗಿದೆ. ಇನ್ನು, ಒಳಗೆ ಪ್ರವೇಶವಿಲ್ಲದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಮಾರಂಭವನ್ನು ನೇರವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಆವರಣದ ಹೊರಭಾಗದಲ್ಲಿ ಬೃಹತ್ ಎಲ್‌ಇಡಿ (LED) ಪರದೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವೇಳೆ ಪ್ರಧಾನಿ ಮೋದಿ ಅವರು ಸುವರ್ಣ ಮಹೋತ್ಸವ ಆಡಳಿತ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ನೇರಪ್ರಸಾರ ಇಲ್ಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

