ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ದೆಹಲಿ, ನೋಯ್ಡಾ, ಗುರುಗ್ರಾಮ ಮತ್ತು ಘಾಜಿಯಾಬಾದ್‌ನ ಹಲವು ಮುಖ್ಯ ರಸ್ತೆಗಳಲ್ಲಿ 2ರಿಂದ 3 ಅಡಿಗಳಷ್ಟು ನೀರು ನಿಂತಿದ್ದರಿಂದ ನೂರಾರು ಕಾರುಗಳು, ದ್ವಿಚಕ್ರ ವಾಹನಗಳು ಹಾಗೂ ಬಸ್‌ಗಳು ನೀರಿನ ನಡುವೆಯೇ ಕೆಟ್ಟು ನಿಂತವು. ವಾಹನ ಸವಾರರು ಕಾರುಗಳನ್ನು ತಳ್ಳಿಕೊಂಡು ಸಾಗುವ ದೃಶ್ಯಗಳು ಕಂಡುಬಂದವು. ಜಲಾವೃತಗೊಂಡ ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ಕೆರೆಯಂತಾಗಿದ್ದರಿಂದ, ಮಕ್ಕಳು ಆ ನೀರನ್ನೇ ಈಜುಕೊಳದಂತೆ ಬಳಸಿಕೊಂಡು ಈಜಾಡುತ್ತಾ, ಜಿಗಿಯುತ್ತಾ ಸಂಭ್ರಮಿಸಿದರು. ಭಾರಿ ನೀರು ನಿಂತಿದ್ದರಿಂದಾಗಿ ಹಲವು ಕಿಲೋಮೀಟರ್‌ಗಳವರೆಗೆ ಸುದೀರ್ಘ ಸಂಚಾರ ದಟ್ಟಣೆ ಉಂಟಾಯಿತು.
ನವದೆಹಲಿ, ಆಗಸ್ಟ್ 24: ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಇಂದು ಸುರಿದ ಭಾರಿ ಮಳೆಯಿಂದಾಗಿ (Delhi Rains) ಇಡೀ ನಗರವೇ ಜಲಾವೃತಗೊಂಡಿದೆ. ಕೇವಲ ಕೆಲವೇ ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಪ್ರಮುಖ ರಸ್ತೆಗಳು, ಅಂಡರ್‌ಪಾಸ್‌ಗಳು ಮತ್ತು ವಸತಿ ಪ್ರದೇಶಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಹೋಗಿದ್ದು, ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ದೆಹಲಿ, ನೋಯ್ಡಾ, ಗುರುಗ್ರಾಮ ಮತ್ತು ಘಾಜಿಯಾಬಾದ್‌ನ ಹಲವು ಮುಖ್ಯ ರಸ್ತೆಗಳಲ್ಲಿ 2ರಿಂದ 3 ಅಡಿಗಳಷ್ಟು ನೀರು ನಿಂತಿದ್ದರಿಂದ ನೂರಾರು ಕಾರುಗಳು, ದ್ವಿಚಕ್ರ ವಾಹನಗಳು ಹಾಗೂ ಬಸ್‌ಗಳು ನೀರಿನ ನಡುವೆಯೇ ಕೆಟ್ಟು ನಿಂತವು. ವಾಹನ ಸವಾರರು ಕಾರುಗಳನ್ನು ತಳ್ಳಿಕೊಂಡು ಸಾಗುವ ದೃಶ್ಯಗಳು ಕಂಡುಬಂದವು.
ಜಲಾವೃತಗೊಂಡ ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ಕೆರೆಯಂತಾಗಿದ್ದರಿಂದ, ಮಕ್ಕಳು ಆ ನೀರನ್ನೇ ಈಜುಕೊಳದಂತೆ ಬಳಸಿಕೊಂಡು ಈಜಾಡುತ್ತಾ, ಜಿಗಿಯುತ್ತಾ ಸಂಭ್ರಮಿಸಿದರು. ಭಾರಿ ನೀರು ನಿಂತಿದ್ದರಿಂದಾಗಿ ಹಲವು ಕಿಲೋಮೀಟರ್‌ಗಳವರೆಗೆ ಸುದೀರ್ಘ ಸಂಚಾರ ದಟ್ಟಣೆ ಉಂಟಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

